ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy murder case) ನಟ ದರ್ಶನ್ (Actor darshan) ರೆಗ್ಯೂಲರ್ ಬೇಲ್ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ಮುಂದುವರಿದಿದೆ. ಸದ್ಯ ಮಧ್ಯಂತರ ಜಾಮೀನು ಪಡೆದು ರಿಲೀಫ್ನಲ್ಲಿರೋ ಆರೋಪಿ ದರ್ಶನ್ಗೆ ರೆಗ್ಯೂಲರ್ ಬೇಲ್ (Regular bail) ನೀಡಬೇಕೆಂದು ದರ್ಶನ್ ಪರ ವಕೀಲರು ಸಲ್ಲಿರುವ ಅರ್ಜಿ ವಿಚಾರಣೆ ಇಂದು ಕೂಡ ಮುಂದುವರಿಯಲಿದೆ.

ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಸಾಕ್ಷಿ ಹೇಳಿಕೆ ಆಧರಿಸಿ ದರ್ಶನ್ ಪರ ವಕೀಲರ ಸಿ.ವಿ.ನಾಗೇಶ್ (Cv Nagesh) ಕೇಸ್ನಲ್ಲಿ ಐ ವಿಟ್ಟೆಸ್ಗಳ ಹೇಳಿಕೆ ಸರಿಯಿಲ್ಲ ಅಂತ ವಾದ ಮಂಡಿಸಿದ್ರು. ಪೊಲೀಸರು ಕೊಟ್ಟ ಸಾಕ್ಷಿಗಳು ಸರಿಯಿಲ್ಲ. ಕೆಲವೆಡೆ ಹೇಳಿಕೆ ತಿರುಚಲಾಗಿದೆ ಎಂದು ಕೂಡ ವಾದ ಮಾಡಿಸಿದ್ರು.
ಇದೇ ವೇಳೆ ಹೈಕೋರ್ಟ್ ಜಡ್ಜ್, ದರ್ಶನ್ ಪರ ವಕೀಲರಿಗೆ ಮಧ್ಯತಂರ ಜಾಮೀನಿನ ಸ್ಥಿತಿ ಬಗ್ಗೆ ಪ್ರಶ್ನೆ ಮಾಡಿದ್ರು. ದರ್ಶನ್ಗೆ ಜಾಮೀನು ನೀಡುವಂತೆ ಕೋರ್ಟ್ ಬಳಿ ಮನವಿ ಮಾಡಿ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮುಕ್ತಾಯ ಮಾಡಿದ್ದಾರೆ. ಈ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದು ಇಂದು (ನ.29) ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ನಡೆಸಲಿದ್ದಾರೆ.