ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy murder case) ನ 17 ಆರೋಪಿಗಳ ಪೈಕಿ ಇಂದು ದರ್ಶನ್ (darshan) ಸೇರಿದಂತೆ ಒಟ್ಟು 6 ಆರೋಪಿಗಳ ಬೇಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಹಿಂದಿನ ಎರಡು ವಾರದಿಂದ ದರ್ಶನ್ ಹಾಗೂ ಉಳಿದವರ ಜಾಮೀನಿಗೆ ಸಂಬಂಧಪಟ್ಟ ಸುದೀರ್ಘ ಪರ ಮತ್ತು ವಿರೋಧ ಪ್ರಬಲ ವಾದ ಮಂಡನೆಯಾಗಿದೆ.
ಇನ್ನು ಕಳೆದ ಗುರುವಾರ ಜಾಮೀನು ಅರ್ಜಿ (Bail application) ವಿಚಾರಣೆ ಅಂತ್ಯವಾಗಿದ್ದು, ಇವತ್ತಿಗೆ 57ನೇ ಸಿಟಿ ಸಿವಿಲ್ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ಇವತ್ತು ಶುಭ ಸೋಮವಾರಕ್ಕಾಗಿ ಬಳ್ಳಾರಿ ಜೈಲಿನಲ್ಲಿ (Bellary jail) ದರ್ಶನ್ ಕಾದು ಕೂತಿದ್ದಾರೆ.
57 ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಇಂದು ತಮ್ಮ ಆದೇಶವನ್ನ ಪ್ರಕಟಿಸಲಿದ್ದಾರೆ. ಒಂದ್ವೇಳೆ ನ್ಯಾಯಾಲಯವು ಜಾಮೀನು ನಿರಾಕರಿಸಿದ್ರೆ, ಆರೋಪಿಗಳ ಪರ ಕೀಲರು ಹೈಕೋರ್ಟ್ನ (Highcourt) ಮೊರೆ ಹೋಗುವ ಸಾಧ್ಯತೆ ಇದೆ.