
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ದರ್ಶನ್ ಪರವಾಗಿ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಕೇಸ್‌ನ ಲೂಪ್‌ಪೋಲ್ಸ್‌ಗಳನ್ನ ಮುಂದಿಟ್ಟು ವಾದ ಮಂಡಿಸಿದ್ದು, ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿಲ್ಲ. ಕಿಡ್ನ್ಯಾಪ್, ಹಲ್ಲೆ, ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಸೆಕ್ಷನ್ 355, 201 ಜಾಮೀನು ನೀಡಬಹುದಾದ ಸೆಕ್ಷನ್‌ಗಳು ಎಂದಿರುವ ವಕೀಲರು, ಪೋಸ್ಟ್‌ಮಾರ್ಟಂ ವರದಿ ತಡ ಆಗಿದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ..
ಸೀನ್ ಆಫ್ ಕ್ರೈಂ ಫೋಟೋ, ವಿಡಿಯೋ ಹಂಚಿಕೆ ಆಗಿದೆ. ಪಿಎಸ್ಐ ವಿನಯ್ ಆರೋಪಿಗೆ ಕಳಿಸಿದ್ದಾರೆ. PSI ಮೊಬೈಲ್‌ನಿಂದ ಯಾಕೆ ರಿಟ್ರೀವ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ?. ವಿನಯ್ ಸ್ವಇಚ್ಛಾ ಹೇಳಿಕೆ ಓದಿ ಹೇಳಿರುವ ವಕೀಲ ಸಿ.ವಿ ನಾಗೇಶ್, ಸಬ್ ಇನ್ಸ್‌ಪೆಕ್ಟರ್ ಹೇಳಿಕೆ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಇನ್ನು ಪ್ರದೂಶ್ ಕೊಲೆ ಮಾಡಿರೋರನ್ನ ಸರೆಂಡರ್ ಮಾಡಿಸ್ತಾನೆ. ಕೊಲೆ ಮಾಡಿರೋದು ದರ್ಶನ್ ಅಭಿಮಾನಿಗಳ ಅಧ್ಯಕ್ಷ. ಆದರೆ ಇದನ್ನೇ ದರ್ಶನ್ ಕೊಲೆ ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ವರದಿ ಆಗಿದೆ ಎಂದಿದ್ದಾರೆ.

ಸಂಜೆ 4 ಗಂಟೆಯಿಂದ ವಿಚಾರಣೆ ಮತ್ತೆ ನಡೆದಿದ್ದು, ಪಂಚನಾಮೆಯಲ್ಲಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜೂನ್ 14 ರಂದು ಬಟ್ಟೆಯನ್ನ ವಶಕ್ಕೆ ಪಡೆದಿದ್ದಾರೆ. ಸ್ವ ಇಚ್ಛಾ ಹೇಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಜೀನ್ಸ್ ಪ್ಯಾಂಟ್ ಹಾಗೂ ಟೀ ಶರ್ಟ್ ಬಗ್ಗೆ ಉಲ್ಲೇಖಿದ್ದಾರೆ. ಅಲ್ಲದೆ ಚಪ್ಪಲಿ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ ಎಂದಿದ್ದಾರೆ. ಆ ನಂತರದ ಹೇಳಿಕೆಯಲ್ಲಿ ಬೇರೆಯದೇ ಕಥೆ ಇದೆ. ತನ್ನ ಬಟ್ಟೆಗಳನ್ನು ಪವನ್ ಬಳಿ ಕೊಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ ಪವನ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾನೆ. ತನ್ನ ಜೊತೆ ಬಂದರೆ ಮನೆಯಲ್ಲಿಟ್ಟಿದ್ದ ಬಟ್ಟೆ ಕೊಡೋದಾಗಿ ಹೇಳಿದ್ದಾನೆ.

ಪೊಲೀಸರು ಚಪ್ಪಲಿಗಳ ಬದಲು ಶೂಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿಗೆ ಚಪ್ಪಲಿಗಳ ಕಥೆ ಮುಗಿದು ಹೋಯ್ತು. ಮನೆಗೆ ಹೋದಾಗ ಬಟ್ಟೆಗಳು ಸಿಕ್ಕಿಲ್ಲ. ಮನೆ ಕೆಲಸದಾಕೆ ತೊಳೆದು ಹಾಕಿರೋದು ಗೊತ್ತಾಗಿದೆ. ಮಹಡಿ ಮೇಲೆ ಆ ಬಟ್ಟೆಗಳನ್ನು ಒಣಗಲು ಹಾಕಲಾಗಿತ್ತು. ಆಗ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ತಾರೆ. ಅಲ್ಲಿ ಶೂಗಳು ಸಿಗೋದಿಲ್ಲ, ಆಗ ಪೊಲೀಸ್ರು ವಿಜಯಲಕ್ಷ್ಮಿ ಮನೆಗೆ ಹೋಗ್ತಾರೆ. ಅಲ್ಲಿ ಪೊಲೀಸರ ಎದುರು ವಿಜಯಲಕ್ಷ್ಮಿ ಕೆಲವು ಶೂಗಳನ್ನು ಹಾಜರುಪಡಿಸುತ್ತಾರೆ. ಅದರಲ್ಲಿ ಲೂಫರ್ಸ್ ಶೂಗಳನ್ನು ಮಾತ್ರ ಪೊಲೀಸರು ತಗೋತಾರೆ. ಆ ಬಳಿಕ ಎಫ್‌ಎಸ್‌ಎಲ್‌ಗೆ ಕಳಿಸ್ತಾರೆ. ಈ ವೇಳೆ ನಡೆದ ರಕ್ತದ ಕಲೆಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಿಲ್ಲ. ಆದರೆ FSL ನವರು ಕೊಡೋ ರಿಪೋರ್ಟ್‌ನಲ್ಲಿ ರಕ್ತದ ಕಲೆಗಳು ಇರುತ್ತೆ. FSL ರಿಪೋರ್ಟ್‌ನಲ್ಲಿ ಒಂದು ಶೂನಲ್ಲಿ ರಕ್ತದ ಕಲೆ ಇರೋದು ಪತ್ತೆಯಾಗಿದೆ. ಶೂಗೆ ಒಂದು ಡ್ರಾಪ್ ರಕ್ತ ಹಾಕಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ, ಈ ಬಗ್ಗೆ ಅನುಮಾನ ಇದೆ ಎಂದಿದ್ದಾರೆ.

ಇನ್ನು ಸಾಕ್ಷಿ ನಂಬರ್ 95ರ ಹೇಳಿಕೆ ಓದಿ ಹೇಳಿರುವ ವಕೀಲ ಸಿ.ವಿ ನಾಗೇಶ್, ದರ್ಶನ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಹೇಳಿಕೆ ನೀಡಿದ್ದಾರೆ. ನಾನು ಕೆಲಸಕ್ಕೆ ಬಂದಾಗಿನಿಂದಲೂ ವಾಷಿಂಗ್ ಮಷಿನ್ ಕೆಟ್ಟೋಗಿತ್ತು. ಮೂರು ದಿನಕ್ಕೊಮ್ಮೆ ದರ್ಶನ್ ಬಟ್ಟೆ ಒಗೆಯುತ್ತಿದ್ದೆ. ಪವನ್ ಬಂದು ದರ್ಶನ್ ಬಟ್ಟೆ ಕೊಟ್ಟು ಒಗೆಯಲು ಹೇಳಿದ್ರು. ಆದರೆ ಬೇರೆ ಕೆಲಸ ಇದ್ದ ಕಾರಣಕ್ಕೆ ನಾನು ಅವತ್ತು ತೊಳೆದಿರಲಿಲ್ಲ. ಮರುದಿನ ಎಲ್ಲಾ ಬಟ್ಟೆಗಳ ಜೊತೆ ಸೇರಿಸಿ ಕುಕ್ಕಿ ಕುಕ್ಕಿ ಒಗೆದಿದ್ದೇನೆ. ಸರ್ಫ್ ಪೌಡರ್ ಹಾಕಿ ಕುಕ್ಕಿ ಕುಕ್ಕಿ ಒಗೆದಿದ್ದಾಗಿ ಹೇಳಿದ್ದಾರೆ. ಕುಕ್ಕಿ ಕುಕ್ಕಿ ಒಗೆದ ಮೇಲೆ ರಕ್ತದ ಕಲೆ ಹೇಗೆ ಸಿಕ್ತು? ಇದನ್ನ ಸಾಕ್ಷಿಯಾಗಿ ಪರಿಗಣಿಸಬೇಕಾ? ಎಂದು ಸಿ.ವಿ ನಾಗೇಶ್ ಪ್ರಶ್ನಿಸಿದ್ದಾರೆ. ಇದೀಗ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆ ಆಗಿದೆ.













