ದರ್ಶನ್ ಅಂಡ್ ಗ್ಯಾಂಗ್ (Drahsan and gang) ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ ಜಾಮೀನು ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. ನ್ಯಾ.ವಿಶ್ವಜಿತ್ ಶೆಟ್ಟಿಯವರ (Vishwanath Shetty) ಪೀಠದಲ್ಲಿ ಜಾಮೀನು ಅರ್ಜಿಗಳ ವಿಚಾರಣೆ ನಡೆಯಲಿದ್ದು, ದರ್ಶನ್ ಪವಿತ್ರಾಗೌಡ (Pavitra Gowda) ಸೇರಿ 6 ಆರೋಪಿಗಳ ಜಾಮೀನು ಅರ್ಜಿಗಳು ವಿಚಾರಣೆ ನಡೆಯಲಿದೆ.
ಈಗಾಗಲೇ ದರ್ಶನ್, ನಾಗರಾಜ್ ಪರ ವಕೀಲರ ವಾದ ಮುಕ್ತಾಯವಾಗಿದ್ದು, ಪವಿತ್ರಾಗೌಡ, ಲಕ್ಷ್ಮಣ್ ಸೇರಿ ನಾಲ್ವರ ಅರ್ಜಿಗಳು ವಿಚಾರಣೆ ಬಾಕಿಯಿದೆ. ಇಂದು ಪವಿತ್ರಾಗೌಡ ವಕೀಲರಿಂದ ವಾದ ಮಂಡನೆ ಸಾಧ್ಯತೆಯಿದೆ.ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಲಿದ್ದಾರೆ.

ಇನ್ನು ಲಕ್ಷ್ಮಣ್ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದಿಸಲಿದ್ದಾರೆ. ಅನುಕುಮಾರ್ ಪರ ರಂಗನಾಥ ರೆಡ್ಡಿ ವಾದ ಮಂಡನೆಗೆ ತಯಾರಿ ನಡೆಸಿದ್ದಾರೆ.ಈ ಎಲ್ಲಾ ಆರೋಪಿಗಳ ವಾದದ ಬಳಿಕ ಎಸ್ಪಿಪಿ ಪ್ರಸನ್ನಕುಮಾರ್ (Spp Prasannakumar) ವಾದ ಮಂಡಿಸಲಿದ್ದಾರೆ. ದರ್ಶನ್ ಮಧ್ಯಂತರ ಜಾಮೀನು ಅವದಿ ಇನ್ನು 8ದಿನ ಮಾತ್ರ ಬಾಕಿ ಇದೆ.
ಈ ಎಂಟು ದಿನದಲ್ಲಿ ಎಲ್ಲಾ ವಾದ ಮುಕ್ತಾಯವಾಗಿ ಆದೇಶ ಬರುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಆದೇಶ ಬರದಿದ್ದರೆ ದರ್ಶನ್ ಮತ್ತೆ ಜೈಲು ಸೇರಬೇಕು. ಒಂದು ವೇಳೆ ಜಾಮೀನು ಅರ್ಜಿ ವಜಾ ಆದರೂ ದರ್ಶನ್ ಬಳ್ಳಾರಿ ಜೈಲು ಸೇರಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.