ದರ್ಶನ್ (Darshan) ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ ಜಾಮೀನಿನ ಮೇಲೆ ಹೊರಗಿರುವ ದರ್ಶನ್, ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪತ್ನಿ ವಿಜಯಲಕ್ಷ್ಮಿ (Vijaya lakshmi) ಅವರ ಫ್ಲಾಟ್ ಗೆ ತೆರಳಿದ್ದರು. ಇದೀಗ ದರ್ಶನ್ ಮೈಸೂರಿಗೆ ಭೇಟಿ ನೀಡಲು ಅನುಮತಿಸಬೇಕು ಎಂದು ದರ್ಶನ್ ಪರ ವಕೀಲರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಕೋರಿದೆ.
ಈ ಬಗ್ಗೆ ಸೆಷನ್ಸ್ ಕೋರ್ಟ್ ಗೆ ದರ್ಶನ್ ಪರ ವಕೀಲರಿಂದ ಅರ್ಜಿ ಸಲ್ಲಿಕೆಯಾಗಿದೆ. ಒಟ್ಟು 4 ವಾರಗಳ ಕಾಲ ಮೈಸೂರು ಭೇಟಿಗೆ ಅನುಮತಿ ನೀಡಲು ಮನವಿ ಸಲ್ಲಿಸಲಾಗಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಎಸ್ ಪಿಪಿ ಗೆ 57 ನೇ ಸಿಸಿಹೆಚ್ ಕೋರ್ಟ್ ಸೂಚನೆ ನೀಡಿದೆ.
ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದರೂ, ಕೋರ್ಟ್ ಅನುಮತಿಯಿಲ್ಲದೇ ಸೆಷನ್ಸ್ ಕೋರ್ಟ್ ವ್ಯಾಪ್ತಿಯನ್ನು ಬಿಟ್ಟು ತೆರಳುವಂತಿಲ್ಲ ಎಂಬ ಕಟ್ಟುಪಾಡಿದೆ.ಹೀಗಾಗಿ ಹೈಕೋರ್ಟ್ ಜಾಮೀನು ನೀಡುವಾಗ ಈ ರೀತಿ ಷರತ್ತು ವಿಧಿಸಿತ್ತು.ಈ ಹಿನ್ನೆಲೆಯಲ್ಲಿ 4 ವಾರಗಳ ಕಾಲ ಮೈಸೂರಿಗೆ ತೆರಳಲು ಅನುಮತಿ ಕೋರಿದ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.