ಡಾರ್ಕ್ ಸರ್ಕಲ್ ಸಮಸ್ಯೆಯು ಪ್ರತಿಯೊಬ್ಬರಿಗೂ ಕೂಡ ಇರುತ್ತೆ ಆದ್ರೆ ಹೆಚ್ಚಿನವರಿಗೆ ಕಣ್ಣಿನ ಕೆಳಗೆ ಕಪ್ಪು ಕಲೆ ಜಾಸ್ತಿ ಇರುತ್ತೆ ಅಥವಾ ಕಣ್ಣಿನ ಸುತ್ತ ಕಪ್ಪು ಕಲೆ ಜಾಸ್ತಿ ಇರುತ್ತೆ ಹಾಗೂ ಕಣ್ಣಿನ ಕೆಳಗೆ ಇರುವ ಚರ್ಮ ತುಂಬಾನೇ ತೆಳುವಾಗುತ್ತದೆ ಅದಕ್ಕೆ ಸಾಕಷ್ಟು ರೀಸನ್ಗಳು ಕೂಡ ಇವೆ. ಡಾರ್ಕ್ ಸರ್ಕಿಲ್ಸ್ ಹೆಚ್ಚಿದ್ರೆ ನಮ್ಮ ಅಂದವನ್ನು ಕುಗ್ಗಿಸುತ್ತದೆ ಹಾಗೂ ನಮ್ಮ ಮುಖ ತುಂಬಾನೇ ಡಲ್ ಆಗಿ ಕಾಣಿಸುತ್ತದೇ.ಮುಖ್ಯವಾಗಿ ಡಾರ್ಕ್ ಸರ್ಕಲ್ ಆಗೋದಕ್ಕೆ ಕಾರಣವೇನು ಅನ್ನೋದರ ಡೀಟೇಲ್ಸ್ ಹೀಗಿದೆ..
ನಿದ್ರಾ ಹೀನತೆ
ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೆ ಎಲ್ಲರಿಗೂ ಕೂಡ ನಿದ್ರೆ ಅನ್ನೋದು 8ಗಂಟೆಗಳ ಕಾಲ ಸರಿಯಾಗಿ ಆಗಲೇಬೇಕು. ಇಲ್ಲವಾದಲ್ಲಿ ನಮ್ಮ ಕಣ್ಣುಗಳಿಗೆ ಹಾಗೂ ಇಡೀ ದೇಹಕ್ಕೆ ಆಯಾಸವಾಗುತ್ತದೆ. ನಿದ್ರೆ ಸರಿಯಾಗದಿದ್ದರೆ ಮರುದಿನ ನಾವು ಆಕ್ಟಿವ್ ಆಗಿರೋದಕ್ಕೆ ಆಗಲ್ಲ ತುಂಬಾನೇ ಸುಸ್ತಾಗುತ್ತದೆ.ಹಾಗು ನೈಟ್ ಶಿಫ್ಟ್ ಇದ್ದವರಿಗೆ ಡಾರ್ಕ್ ಸರ್ಕಲ್ ಬರೋದು ಹೆಚ್ಚು.. ಒಂದೆರಡು ದಿನದ ನಿದ್ದೆ ಸಮಸ್ಯೆ ಇಂದ ಇದು ಆಗಲ್ಲ..ಹೆಚ್ಚು ದಿನಗಳ ಕಾಲ ನಿದ್ದೆಗೆಟ್ಟರೆ ಡಾರ್ಕ್ ಸರ್ಕಲ್ಸ್ ಜಾಸ್ತಿ ಆಗ್ತಾ ಹೋಗುತ್ತದೇ.
ಫೋನ್/ಲ್ಯಾಪ್ಟಾಪ್ ಬಳಕೆ
ಹೆಚ್ಚು ಜನ ರಾತ್ರಿ ಮಲಗುವ ಸಮಯದಲ್ಲಿ ಲ್ಯಾಪ್ ಟಾಪ್ ಹಾಗೂ ಫೋನ್ ಬಳಕೆ ಹೆಚ್ಚು ಮಾಡುತ್ತಾರೆ.. ಅಥವಾ ದಿನ ಇಡೀ ಲ್ಯಾಪ್ಟಾಪ್/ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವಂತದ್ದು. ಇದರಿಂದ ನಮ್ಮ ಕಣ್ಣುಗಳಿಗೆ ತುಂಬಾನೇ ಸ್ಟ್ರೆಸ್ ಆಗುತ್ತದೆ. ಜೊತೆಗೆ ಕಣ್ಣುಗಳ ಭಾಗಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತದೆ. ಈ ತರಹದ ಸಮಸ್ಯೆಯಿಂದ ಡಾರ್ಕ್ ಸರ್ಕಲ್ಸ್ ಜಾಸ್ತಿ ಆಗುವುದಿ ಸಾಮಾನ್ಯ.
ವಯಸ್ಸು ಜಾಸ್ತಿಯಾದಾಗ
ದಿನೇ ದಿನೇ ನಮ್ಮ ವಯಸ್ಸು ಹೆಚ್ಚಾಗ್ತಾ ಹೋಗುತ್ತೆ. ವಯಸ್ಸಾಗುತ ಹೋದಂತೆ ನಮ್ಮ ದೇಹದಲ್ಲಿ ಒಂದೊಂದೇ ಸಮಸ್ಯೆಗಳು ಕಾಣೋದಿಕ್ಕೆ ಶುರುವಾಗುತ್ತೆ. ನಮ್ಮ ಮುಖದ ಚರ್ಮ ಸುಕ್ಕುಗಟ್ಟತ್ತೆ ಇಂತಹ ಸಂದರ್ಭದಲ್ಲಿ ಕಣ್ಣುಗಳ ಸುತ್ತಲೂ ಚರ್ಮ ಕಪ್ಪಾಗುವದಕ್ಕೆ ಶುರುವಾಗುತ್ತೆ.ಇದು ತುಂಬಾನೇ ಕಾಮನ್ ರೀಸನ್ ಕಾರಣ ಚರ್ಮದ ಸಾಂದ್ರತೆ ಕಡಿಮೆ ಆಗುತ್ತದೆ ಹಾಗೂ ಡಾಗ್ ಸರ್ಕಲ್ಸ್ ಹೆಚ್ಚಾಗುತ್ತದೆ.
ಡಿಹೈಡ್ರೇಶನ್
ನಮ್ಮ ದೇಹದಲ್ಲಿ ಸರಿಯಾಗಿ ನೀರಿನ ಅಂಶವಿಲ್ಲದಿದ್ದರೂ ಚರ್ಮ ತುಂಬಾನೇ ಡ್ರೈ ಆಗುತ್ತೆ ಮುಖದ ಹೊಳಪು ಕಡಿಮೆಯಾಗುತ್ತದೆ ಇದೆಲ್ಲದರ ನಡುವೆ ಕಣ್ಣಿನ ಭಾಗದಲ್ಲೂ ಕೂಡ ಕಪ್ಪಾಗುವಂತ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನ ಕುಡಿಯಲೇ ಬೇಕು ಇದು ನಿಮ್ಮ ದೇಹಕ್ಕೂ ಕೂಡ ಒಳ್ಳೆಯದು ಜೊತೆಗೆ ಮುಖದ ಅಂದವನ್ನ ಹಾಗೂ ತ್ವಚೆಯನ್ನ ಹೊಳಪಾಗಿಡಿಸುತ್ತದೆ.
ಇದೆಲ್ಲದರ ಜೊತೆಗೆ ಕೆಲಸದ ಒತ್ತಡ ಅಥವಾ ಸ್ಟ್ರೆಸ್ ಜಾಸ್ತಿಯಾದಾಗ. ದೇಹಕ್ಕೆ ಸರಿಯಾಗಿ ಸೇರಬೇಕಾದ ಕಬ್ಬಿನಾಂಶ ,ನ್ಯೂಟ್ರಿಷನ್ ,ಮಿನರಲ್ಸ್ ಕೊರತೆ ಕಂಡಾಗ. ನಿದ್ರಾ ಹೀನತೆ ಹಾಗೂ ಫುಡ್ ಸ್ಟೈಲ್ ಚೇಂಜ್ ಆದಾಗ ಸರಿಯಾದ ಸಮಯಕ್ಕೆ ಕರೆಕ್ಟಾಗಿ ಊಟ ತಿಂಡಿಯನ್ನು ಮಾಡದೆ ಇದ್ದಾಗ.ಲೈಫ್ ಸ್ಟೈಲ್ ಅಲ್ಲಿ ಬದಲಾವಣೆಗಳು ಕಂಡಾಗ ಡಾರ್ಕ್ ಸರ್ಕಲ್ ಆಗುತ್ತದೆ..