ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವೀಡಿಯೋ ವೈರಲ್ ಸಂಬಂಧ ಈಗ ಮತ್ತೊಂದು Fir ದಾಖಲಾಗಿದೆ. ಜೈಲಿನ ಒಳಗೆ ಕೆಲ ಕೈದಿಗಳು ಡ್ಯಾನ್ಸ್ ಮಾಡಿ ವಿಡಿಯೋ ಮಾಡಿದ್ದ ಘಟನೆ ಸಂಬಂಧ ಜೈಲಿನ ಬಂಧಿಗಳಾದ ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ, ಚರಣ್ ರಾವ್ ವಿರುದ್ಧ FIR ದಾಖಲಾಗಿದೆ.

2018 ನವೆಂಬರ್ ನಿಂದ 2025 ನವೆಂಬರ್ ಅವಧಿಯಲ್ಲಿ ನಡೆದ ಘಟನೆ ನಡೆದಿದೆ ಎನ್ನಲಾಗಿದ್ದು, ಬ್ಯಾರಕ್ 8 ಕೊಠಡಿ ಸಂಖ್ಯೆ 7 ರಲ್ಲಿ ನಡೆದ ಡ್ಯಾನ್ಸ್ ಮಾಡಿದ್ದಾರೆ. ಈ ಕೊಠಡಿಯಲ್ಲಿ ಡ್ಯಾನ್ಸ್, ನಿಷೇಧಿತ ವಸ್ತುವಿನ ಜೊತೆ ಕಾಣಿಸಿಕೊಂಡಿರುವವರ ವಿರುದ್ಧ, ಮೊಬೈಲ್ ನಲ್ಲಿ ಸೆರೆ ಹಿಡಿದವರು, ಮೊಬೈಲ್ ತಂದವರು, ಯಾವಾಗ ಚಿತ್ರೀಕರಿಸಿದರು, ಸರ್ಕ್ಯುಲೇಟ್ ಮಾಡಿದವರು ವಿರುದ್ಧ ತನಿಖೆ ನಡೆಸಲು ಜೈಲಿನ ಅಧಿಕಾರಿಗಳು ದೂರು ನೀಡಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇನ್ನು ಜೈಲಿನಲ್ಲಿ ಮೊಬೈಲ್ ಬಳಸಿದ್ದ ಸಂಬಂಧ ಜೈಲು ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದು, ಮೂವರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಸ್ಮಗ್ಲಿಂಗ್ ಆರೋಪಿ ತರುಣ್ ಕೊಂಡೂರು, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಮತ್ತೊಬ್ಬ ಆರೋಪಿ ಜುಹಾದ್ ಹಮೀದ್ ಶಕೀಲ್ ವಿಚಾರಣೆ ನಡೆಸಲಾಗಿದೆ

