ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಮರಗಳ ಮಾರಣಹೋಮವೇ ನಡೆದು ಹೋಗಿದೆ. ಅಲ್ಲೋ ಇಲ್ಲೋ ಉಳಿದಿರೋ ಮರಗಳನ್ನು ತಮ್ಮ ಬ್ಯುಸಿನೆಸ್ ಪ್ರಚಾರಕ್ಕಾಗಿ ನಾಶ ಮಾಡಲಾಗುತ್ತಿದೆ. ಆದರೆ ಇನ್ಮುಂದೆ ಹಾಗೆ ಆಗಲ್ಲ. ಬೆಂಗಳೂರು ಹುಡುಗರ ಅವಿರತ ಹೋರಟದ ಪ್ರಯತ್ನದ ಫಲವಾಗಿ ಈಗ ಪಾಲಿಕೆ ಮರಗಳಿಗೆ ಮೊಳೆ ಹೊಡೆಯುವುದು, ಹೋರ್ಡಿಂಗ್ಸ್ ನೇತು ಹಾಕುವದನ್ನು ಅಪಾರಧವೆಂದಿದೆ.
ಅಂಗಡಿ ಮುಂಗಟ್ಟುಗಳ ಪ್ರಚಾರಕ್ಕಾಗಿ ನೂರಾರು ಮರಗಳಿಗೆ ಹಾನಿ.!!
ರಾಜಧಾನಿ ಬೆಂಗಳೂರಲ್ಲಿ ಈಗಾಗಲೇ ಕಾಮಗಾರಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿದೆ. ಪ್ರತಿವರ್ಷ ಮರಗಳನ್ನು ನೆಟ್ಟು ಪೋಷಣೆ ಮಾಡುವ ಪ್ರತಿಜ್ಞೆ ತೆಗೆದುಕೊಳ್ಳುವ ಬಿಬಿಎಂಪಿ ನಂತರ ಗಿಡ ಮರಗಳ ಮೇಲೆ ಯಾವುದೇ ಕಾಳಜಿ, ನಿರ್ವಹಣೆ ವಹಿಸದೆ ಮರಗಳನ್ನು ಸಾವಿನಂಚಿಗೆ ದೂಡುತ್ತದೆ. ಇಷ್ಟೂ ಸಾಲದು ಎಂಬಂತೆ ವ್ಯಾಪಾರಿಗಳು ಮರಗಳಿಗೆ ಮೊಳೆ ಹೊಡೆದು, ಕಬ್ಬಡಿದ ಸರಳುಗಳನ್ನು ಹೊಡೆದು ತಮಗೆ ಬೇಕಾದ ಹಾಗೆ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹೀಗೆ ನಗರದಲ್ಲಿ ಹಲವು ಮರಗಳು ಬೆಳಯದೆ, ಈ ಮೊಳೆ, ಕಬ್ಬಿಣದಿಂದ ಪಾಳು ಬೀಳುವ ಅವಸ್ಥೆ ಎದುರಾಗಿತ್ತು. ಆದರೆ ಕಳೆದ ಒಂದೂವರೆ ವರ್ಷಗಳಿಂದ ಬೆಂಗಳೂರು ಹುಡುಗರು ಎಂಬ ಯುವಕರ ತಂಡ ಮರಗಳಿಗೆ ಮೊಳೆ ಹೊಡೆಯುವುದರ ವಿರುದ್ಧ ನಿರಂತರವಾಗಿ ಅವಿರತ ಹೋರಾಟ ಮಾಡಿಕೊಂಡು ಬಂದಿದೆ. ಇದೀಗ ಬಿಬಿಎಂಪಿ ಆರಣ್ಯ ಇಲಾಖೆ ಮರಗಳಿಗೆ ಮೊಳೆ ಹೊಡೆಯುವುದು ಅಥವಾ ಯಾವುದೇ ರೀತಿಯಲ್ಲಿ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಇದು ಈಗ ಬೆಂಗಳೂರು ಹುಡುಗರು ತಂಡದ ಹೋರಾಟಕ್ಕೆ ಸಿಕ್ಕ ಜಯ ಎಂದು ಬೆಂಗಳೂರು ಹುಡುಗರು ತಂಡ ಹರ್ಷ ವ್ಯಕ್ತಪಡಿಸುತ್ತಿದೆ.
ಮರಗಳಿಗೆ ಮೊಳೆ ಹೊಡೆಯುವುದು, ಫಲಕ ನೇತು ಹಾಕುವುದು ಶಿಕ್ಷಾರ್ಹ ಅಪರಾಧ.!!
ಬಿಬಿಎಂಪಿ ಇತ್ತೀಚೆಗೆ ಈ ವಿರುದ್ಧ ಖಡಕ್ ಆದೇಶವೊಂದನ್ನು ಹೊರಡಿಸಿದ್ದು, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ಕಲಂ 8ರ ಪ್ರಕಾರ ಮರಗಳಿಗೆ ಮೊಳೆ ಹೊಡೆಯುವುದು ಅಥವಾ ಯಾವುದೇ ರೀತಿಯಲ್ಲಿ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ ಎಂದಿದೆ. ಕೂಡಲೇ ಜಾಹೀರಾತು, ಕೇಬಲ್ ಗಳನ್ನ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಒಂದು ವಾರಗಳ ಕಾಲ ಗಡುವು ನೀಡಿ, ಮರಗಳ ಸಂರಕ್ಷಣೆ ಮಾಡುವ ತಾಕೀತು ಮಾಡಿದೆ. ಇದಕ್ಕೂ ಮೀರಿ ಮರಗಳಿಗೆ ಮೊಳೆ ಹೊಡೆಯುವುದು ಕಂಡ ಬಂದರೆ ಅಂಥವರಿಗೆ ದಂಡ ಹಾಗೂ ಜೈಲುವಾಸದ ಶಿಕ್ಷೆಯೂ ಸಿಗಲಿದೆ. ಇದನ್ನು ನಿರೀಕ್ಷಿಸಲು ಪಾಲಿಕೆಯ ಎಂಟು ವಲಯಗಳಲ್ಲಿ ಒಟ್ಟು 21 ಟ್ರೀ ಟಾಸ್ಕ್ ಫೋರ್ಸ್ ಅನ್ನೂ ಬಿಬಿಎಂಪಿ ರಚಿಸಿದೆ. ಅಲ್ಲದೆ ಈವರೆಗೆ ಮರಗಳಿಗೆ ಮೊಳೆ ಹೊಡೆಯುವುದು ನಿಲ್ಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದ ಎಲ್ಲಾ ಸರ್ಕಾರೇತರ ಸಂಘ ಸಂಸ್ಥೆಗಳನ್ನು ಸಂಯೋಜಿಸಿ ಮರಗಳಿಗೆ ಮೊಳೆಗಳಿಗೆ ಮುಕ್ತಿ ನೀಡಲು ನಿರ್ಧರಿಸಿದೆ.
ಜನರ ಜೀವವಾಯು ನೀಡುವ ವೃಕ್ಷಗಳನ್ನು ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈಗಾಗಲೇ ಗ್ಲೋಬಲ್ ವಾರ್ಮಿಂಗ್ ಗೆ ಹವಾಮಾನ ವೈಪರೀತ್ಯಗಳಿಂದ ಹಲವು ಸಮಸ್ಯೆಗಳು ಎದುರಾಗುತ್ತಿದೆ. ಬೆಂಗಳೂರು ಗಾರ್ಡನ್ ಸಿಟಿಯಿಂದ ಮಾಲಿನ್ಯ ಸಿಟಿಯಾಗುವ ಹಾದಿಯಲ್ಲಿದೆ. ಇದರ ನಡುವೆ ಮರಗಳನ್ನು ಪೋಷಿಸುವುದು ಬಿಟ್ಟು ಈ ರೀತಿಯಾಗಿ ದಂಡಿಸಿ ವೃಕ್ಷಗಳನ್ನು ಸಾವಿನಂಚಿಗೆ ದುಡುವುದು ವಿಪರ್ಯಾಸವೇ ಸರಿ. ಈಗ ಬಿಬಿಎಂಪಿ ತೆಗೆದುಕೊಂಡಿರುವ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.