ಕೇಂದ್ರದಲ್ಲಿ ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲು ಒಂದಲ್ಲ ಒಂದು ರೀತಿಯ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುತ್ತಿದೆ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ (pmmodi) ಅವರನ್ನು ವಿಜೃಂಭಿಸುವ ಕೆಲಸದಲ್ಲಿ ಕೆಲ ಬಿಜೆಪಿ ಕೃಪಾಪೋಷಿತ ಮಾಧ್ಯಮಗಳು (media) ತೊಡಗಿಸಿಕೊಂಡಿವೆ, ಹೀಗಾಗಿ ವಾಸ್ತವದ ಸಮಸ್ಯೆಗಳ ಬಗ್ಗೆ ಜನರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಗೊತ್ತಾಗುತ್ತಿಲ್ಲ ಅಂತ ವಿರೋಧ ಪಕ್ಷಗಳು ಸಾಕಷ್ಟು ಬಾರಿ ಆರೋಪವನ್ನು ಮಾಡಿಕೊಂಡು ಬಂದಿವೆ
ಅದರಲ್ಲೂ ಸಾಕಷ್ಟು ಮಂದಿ ದಲಿತರು (Dalits) ಅಲ್ಪಸಂಖ್ಯಾತರು (minorities) ಹಿಂದುಳಿದವರು ಸೇರಿದಂತೆ ವಿವಿಧ ವರ್ಗದ ಜನರು ಅನ್ಯಾಯಕ್ಕೆ ತುಳಿತಕ್ಕೆ ಕೇಂದ್ರ ಸರ್ಕಾರದಿಂದ ಒಳಗಾಗುತ್ತಿದ್ದಾರೆ ಅಂತ ಹಲವು ನಾಯಕರು ಈ ಹಿಂದಿನಿಂದಲೂ ಬಿಜೆಪಿ ಸರ್ಕಾರವನ್ನು ವ್ಯಾಪಕವಾಗಿ ಟೀಕೆ ಮಾಡುತ್ತಾ ಬಂದಿದ್ದಾರೆ
ಇದೀಗ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ (Priyankkharge) ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದಿನಿಂದಲೂ ದಮನಿತರ ಅಲ್ಪಸಂಖ್ಯಾತರ ಮತ್ತು ದಲಿತರ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಜೊತೆಗೆ ಸಾಕಷ್ಟು ಅನ್ಯಾಯಗಳನ್ನು ಕೂಡ ಮಾಡುತ್ತಿದೆ ಅಂತ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ ಪ್ರಿಯಾಂಕ್ ಖರ್ಗೆ ಇದೀಗ ಮತ್ತೊಮ್ಮೆ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದಾರೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು ಅಭದ್ರತೆಯ ಭಾವನೆಯಲ್ಲಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಎಸ್‌ಸಿ, ಎಸ್‌ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರೆಲ್ಲರೂ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರಂತೆ (second class citizens) ನೋಡಲಾಗುತ್ತಿದೆ” ಎಂಬ ಹೇಳಿಕೆಯನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಅಂತ ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಒಟ್ಟಾರೆಯಾಗಿ ಪ್ರಿಯಾಂಕ ಖರ್ಗೆ ಅವರ ಈ ಹೇಳಿಕೆಗೆ ಮುಂದಿನ ದಿನಗಳಲ್ಲಿ ಬಿಜೆಪಿ ಪಾಳಯ ಯಾವ ರೀತಿಯಾಗಿ ಪ್ರತಿಕ್ರಿಯೆಯನ್ನು ನೀಡಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ