ಮಧ್ಯಪ್ರದೇಶ ; ಬುಡಕಟ್ಟು ಸಮುದಾಯದ ಯುವಕನ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ ಹೇಯ ಕೃತ್ಯ ಇನ್ನೂ ಕೂಡ ಮಾಸಿಲ್ಲ. ಈ ನಡುವೆ ಇದೀಗ ದಲಿತ ಸಮುದಾಯದ ಯುವಕರಿಗೆ ಬಲವಂತವಾಗಿ ಮಲ ತಿನ್ನಿಸಿದಂತ ನಾಚಿಕೆಗೇಡಿನ ಕೃತ್ಯ ಮಧ್ಯಪ್ರದೇಶದಲ್ಲಿ ನಡೆದಿತ್ತು.
ಹೌದು ಕಳೆದ ಜೂನ್ 30ರಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವಾರ್ಖಾಡಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು, ಆರೋಪಿಗಳ ಬಂಧನಕ್ಕೆ ಕೂಡ ಒತ್ತಾಯ ಕೇಳಿಬಂದಿತ್ತು. 23 ಮತ್ತು 24 ವರ್ಷದ ಇಬ್ಬರು ಯುವಕರ ಮೇಲೆ ಈ ಅಮಾನವೀಯ ಕೃತ್ಯವನ್ನು ಎಸೆಗಲಾಗಿದ್ದು ಕೃತ್ಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಏಳು ಮಂದಿಯನ್ನು ಈಗ ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ
ಲಭ್ಯವಿರುವ ಮಾಹಿತಿಯ ಪ್ರಕಾರ, ಇಬ್ಬರು ದಲಿತ ಯುವಕರು ಆರೋಪಿ ಕುಟುಂಬಕ್ಕೆ ಸೇರಿದ 26 ವರ್ಷದ ಯುವತಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು, ಈ ವಿಷಯ ತಿಳಿದ ಮನೆಯವರು ಆ ಸಂತ್ರಸ್ತ ಯುವಕರನ್ನು ಯುವತಿಯ ಮೂಲಕ ಮನೆಗೆ ಕರೆಸಿಕೊಂಡಿದ್ದಾರೆ ತದ ನಂತರ, ಜೂನ್ 30ರಂದು ಇಬ್ಬರು ಯುವಕರು ಮನೆಗೆ ಬಂದಾಗ, ಮನೆಯವರು ಈ ಯುವಕರನ್ನ ಅಮಾನುಷವಾಗಿ ಥಳಿಸಿದ್ದಾರೆ, ಜೊತೆಗೆ ಯುವಕರ ಮುಖಕ್ಕೆ ಮಸಿ ಬಳಿದು ಮಲವನ್ನ ತಿನ್ನುವಂತೆ ಒತ್ತಾಯಿಸಿದ್ದಾರೆ. ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಅಂತ ಎಸ್‌ಪಿ ರಘುವಂಶ್ ಸಿಂಗ್ ಭಡೋರಿಯಾ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಇದರ ಮಧ್ಯೆ ಆರೋಪಿಗಳು ತಮ್ಮನ್ನ ರಕ್ಷಿಸಿಕೊಳ್ಳುವುದಕ್ಕೆ ಯುವಕರು ಮಹಿಳೆಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ತಿಳಿಸಿದ್ದೇವೆ ಅಂತ ಹೇಳಿಕೆಯನ್ನು ನೀಡಿದರು ಆದರೆ ತನಿಖೆಯ ಸಂದರ್ಭದಲ್ಲಿ ಕುಟುಂಬದವರ ಹೇಳಿಕೆಗಳು ಶುದ್ಧ ಸುಳ್ಳು ಅನ್ನೋದು ಬಟಾ ಬಾಯಲಾಗಿದೆ. ಈ ಬಗ್ಗೆ ಯುವಕರ ಬಳಿ ಮಾಹಿತಿಯನ್ನು ಪಡೆದಾಗ ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಕುಟುಂಬದವರು ಪ್ರಯತ್ನಿಸಿದ್ದಾರೆ ಅಂತ ಆರೋಪಿಗಳು ತಮ್ಮ ಮೇಲಿದ್ದ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಮಾಡಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಪ್ರಕರಣದಲ್ಲಿ ಯುವಕರು ಯುವತಿಯೊಂದಿಗೆ ಮಾತನಾಡಿದ್ದು ಯುವತಿಯ ಕುಟುಂಬದವರಿಗೆ ತಿಳಿಸಿರಲಿಲ್ಲ ಹಾಗಾಗಿ ಯುವಕರಿಗೆ ಬುದ್ಧಿ ಕಲಿಸುವ ಸಲುವಾಗಿ ಯುವತಿಯ ಕುಟುಂಬದವರು ದಲಿತ ಯುವಕರನ್ನ ತಮ್ಮ ಮನೆಗೆ ಕರೆಸಿಕೊಂಡು ಹಲ್ಲೆ ಮಾಡಿ ಚಪ್ಪಲಿ ಹಾರ ಹಾಕಿ ಮಲ ತಿನ್ನಿಸುವಂತೆ ಒತ್ತಾಯಿಸಿದ್ದಾರೆ, ಬಳಿಕ ಯುವಕರಿಗೆ ಕಿರುಕುಳವನ್ನು ನೀಡಿದ್ದಾರೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಿಫ್ ಖಾನ್, ಅಜ್ಮತ್ ಖಾನ್, ವಕೀಲ್ ಖಾನ್, ಇಸ್ಲಾಂ ಖಾನ್, ಶಾಹಿದ್ ಖಾನ್, ರಹೀಶಾ ಭಾನೋ, ಸೈನಾ ಭಾನೋ ಆರೋಪಿಗಳನ್ನು ಬಂಧಿಸಲಾಗಿದೆ ಈಗಾಗಲೇ ಈ ಆರೋಪಿಗಳ ಕುಟುಂಬದ ವಿರುದ್ಧ ಸೆಕ್ಷನ್ 323, 294, 506, 328, 342, 147, 355, 270 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ