ತುಮಕೂರು : ದಲಿತ ಯುವಕ ದೇಗುಲ ಪ್ರವೇಶಿಸಿದ್ದಕ್ಕೆ ಕೋಪಗೊಂಡು ಆತನ ಮೇಲೆ ಸವರ್ಣಿಯರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿದಿರೆಗುಡಿ ಎಂಬಲ್ಲಿ ಸಂಭವಿಸಿದೆ. ಮುಜರಾಯಿ ಇಲಾಖೆಗೆ ಸೇರಿದ ಬಿದಿರಾಂಭಿಕ ದೇಗುಲದ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆಂದು ದೇಗುಲ ಪ್ರವೇಶಿಸಿದ್ದ ಲಿಂಗರಾಜು ಎಂಬಾತನ ಮೇಲೆ ಹಲ್ಲೆ ನಡೆದಿದೆ.

ಹಲ್ಲೆ ನಡೆಸಿದ ಸವರ್ಣೀಯರನ್ನು ಲಿಂಗರಾಜು ಹಾಗೂ ಶಿವಕುಮಾರ್ ಎಂದು ಗುರುತಿಸಲಾಗಿದೆ. ಲಿಂಗರಾಜು ಮತ್ತು ಶಿವಕುಮಾರ್ ತಮ್ಮ ಸಹಚರರ ಜೊತೆ ಸೇರಿಕೊಂಡು ದೊಣ್ಣೆಯಿಂದ ದಲಿತ ಯುವಕ ಲಿಂಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ.
ನಿನ್ನೆ ಜೊತೆ ಮಾತನಾಡಬೇಕು ಎಂದು ಹೇಳಿದ್ದ ದುಷ್ಕರ್ಮಿಗಳು ನನ್ನನ್ನು ಕರೆದುಕೊಂಡು ಹೋಗಿ ಮೊದಲು ಜಾತಿನಿಂದನೆ ಮಾಡಿದ್ರು. ಬಳಿಕ 20ಕ್ಕೂ ಅಧಿಕ ಜನರು ಸೇರಿಕೊಂಡು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಲಿಂಗರಾಜು ಹೇಳಿದ್ದಾರೆ.