
ಡುಗಿ ಹೆಸರಿನಲ್ಲಿ ಕರೆ ಮಾಡಿ ದಲಿತ ಯುವಕನನ್ನು ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳ ಗುಂಪೊಂದು ಆತನನ್ನು ಅರೆಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದ್ದು, ಈ ಕುಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಪ್ರಸಾದ್ ಖೈರ್ನಾರ್ ಎಂಬ ಈ ಯುವಕನನ್ನು ಹುಡುಗಿ ತರ ಕರೆ ಮಾಡಿದಂತೆ ನಟಿಸಿ ದುಷ್ಕರ್ಮಿಗಳ ಗುಂಪು ನಾಸಿಕ್ ನ ಯಾವ್ಲಾ ಮಾರ್ಕೆಟ್ ಸಮೀಪ ಕರೆಸಿಕೊಂಡು ಬಳಿಕ ಅಪಹರಿಸಿದೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನ್ನು ಅರೆ ಬೆತ್ತಲೆಗೊಳಿಸಲಾಗಿದೆ.ಇಷ್ಟಕ್ಕೆ ಸುಮ್ಮನಾಗದ ಈ ಗುಂಪು ಆತನ ಮೇಲೆ ಮನ ಬಂದಂತೆ ಥಳಿಸಿದ್ದು, ಜೊತೆಗೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ವೈರಲ್ ಮಾಡಬೇಕೆಂದು ಅವರವರೇ ಮಾತನಾಡಿಕೊಂಡಿದ್ದಾರೆ.ಈ ಘಟನೆ ಹಲವು ದಿನಗಳ ಹಿಂದೆಯೇ ನಡೆದಿದ್ದರೂ ಸಹ ಪ್ರಾಣ ಭಯದಿಂದ ಪ್ರಸಾದ್ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಯಾವಾಗ ಈ ವಿಡಿಯೋ ವೈರಲ್ ಆಯಿತೋ ಆಗ ತನಿಖೆಗೆ ಮುಂದಾದ ಪೊಲೀಸರು ಇದೀಗ ಕೃತ್ಯದ ಸಂಪೂರ್ಣ ಮಾಹಿತಿ ಪಡೆದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.






