ಅಫಜಲಪುರ ವಿಧಾನ ಸಭೆ ಚುನಾವಣಾ ರಣ ಕಣವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದು ಬಿಗಿದ ಕಾಂಗ್ರೆಸ್ ಅಭ್ಯರ್ಥಿ ಎಮ್.ವೈ.ಪಾಟೀಲರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ ಎನ್ನುವಂತಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಪಣತೊಟ್ಟು ನಿಂತು ಚುನಾವಣೆ ಮಾಡಿದ ಹಿಂದುಳಿದ ಜಾತಿಗಳ ಮುಖಂಡರು ಈ ಬಾರಿ ಯಾಕೋ, ಎಮ್.ವೈ.ಪಾಟೀಲರ ಮೇಲೆ ಮುನಿಸಿಕೊಂಡಂತಾಗಿದೆ. ಆದರೆ ಇಂದು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಮುಖಂಡರ ಸಭೆ ನಡೆಯಿತು. ಹಿರಿಯ ಮುಖಂಡ ಹಣಮಂತ್ರಾಯ ದೊಡ್ಮನಿ ನೇತೃತ್ವದಲ್ಲಿ ಸಭೆ ನಡೆಸಿ ಈ ಬಾರಿ ಹಿರಿಯ ಮುತ್ಸದ್ದಿ ಎಮ್.ವೈ.ಪಾಟೀಲರಿಗೆ ಗೆಲ್ಲಿಸುವಂತೆ ನಿರ್ಣಯಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಹಣಮಂತ್ರಾಯ ದೊಡ್ಮನಿ, ಕಳೆದ ಬಾರಿ ಎಮ್.ವೈ.ಪಾಟೀಲರಿಗೆ ಎಷ್ಟು ಉತ್ಸಾಹದಿಂದ ಚುನಾವಣೆಯಲ್ಲಿ ಗೆಲ್ಲಿಸಿದ್ದೆವೊ ಅಷ್ಟೆ ಉತ್ಸಾಹ ಈ ಬಾರಿಯೂ ಇದೆ. ಎರಡನೇಯ ಅಂಬೇಡ್ಕರ್ ಎಂದು ಹೆಸರುವಾಸಿಯಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ನಮ್ಮ ಹೆಮ್ಮೆ. ಅವರ ಕೈಬಲಪಡಿಸುವ ನಿಟ್ಟಿನಲ್ಲಿ ನಾವು ನೀವೆಲ್ಲರೂ ಕೆಲಸ ಮಾಡೋಣ ಎಂದರು. ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ʻಆಪ್ತ ದಯಾನಂದ ದೊಡ್ಮನಿ, ನಮ್ಮ ಸಮಾಜದ ಕೆಲವು ನಾಯಕರು ಅಸಮಾಧಾನಗೊಂಡಿರಬಹುದು. ಆದರೆ ಮತಗಳು ಮಾತ್ರೆ ಕಾಂಗ್ರೆಸ್ ಪಕ್ಷಕ್ಕೆ ಹಾಕುತ್ತಾರೆ. ನಮ್ಮ ಹೆಮ್ಮೆಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನಕ್ಕೆ ಇನ್ನೂ ಹೆಚ್ಚಿನ ಶಕ್ತಿ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ಈ ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಒಬ್ಬರು. ಅವರು ನಮ್ಮ ದೇಶದ ಹೆಮ್ಮೆಯ ವ್ಯಕ್ತಿಯಾಗಿ ದೇಶದ ಪ್ರಗತಿಪುರುಷರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ನಾವು ನೀವೆಲ್ಲರೂ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ದಲಿತ ಮುಖಂಡರಾದ ಭೀಮರಾವ ಗೌರ, ಮಾಲಿಂಗ ಅಂಗಡಿ, ರೇಣುಕಾ ಸಿಂಗೆ, ದುಂಡಪ್ಪ ಹೊಸ್ಮನಿ, ಸಿದ್ದಾರ್ಥ ಬಸರಿಗಿಡ, ಮಲ್ಲಿಕಾರ್ಜುನ ಖರ್ಗೆ, ಸಿದ್ದಾರ್ಥ ಡಾಲಿ, ಲಕ್ಮಿಕಾಂತ ಸಿಂಗೆ, ಜೈಭೀಮ ತೆಲ್ಕರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.