ಕೊಪ್ಪಳ ಜಿಲ್ಲೆಯ ಮಿಯಾಪುರ ಗ್ರಾಮದ ಹನುಮಾನ್ ದೇವಸ್ಥಾನವನ್ನು ಎರಡು ವರ್ಷದ ಮಗು ಪ್ರವೇಶಿಸಿದ ನಂತರ ದಲಿತ ಕುಟುಂಬಕ್ಕೆ 25,000 ರೂಪಾಯಿ ದಂಡ ವಿಧಿಸಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಐದು ಜನರನ್ನು ಬಂಧಿಸಿದ್ದೇವೆ ಎಂದು ಕೊಪ್ಪಳ ಎಸ್ಪಿ ಟಿ.ಶ್ರೀಧರ ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಈ ಘಟನೆ ಸೆಪ್ಟೆಂಬರ್ 4 ರಂದು ನಡೆದಿದ್ದು, ಸೋಮವಾರ ಈ ಪ್ರಕರಣ ಬೆಳಕಿಗೆ ಬಂದಿದೆ. “ದಲಿತ ಕುಟುಂಬವು ದೂರು ನೀಡಲು ಹಿಂಜರಿಯುತ್ತಿತ್ತು” ಎಂದು ಶ್ರೀಧರ ತಿಳಿಸಿದ್ದಾರೆ.
ಚೆನ್ನದಾಸರ ಸಮುದಾಯಕ್ಕೆ ಸೇರಿದ ಚಂದ್ರಶೇಖರ್ ತನ್ನ ಎರಡು ವರ್ಷದ ಮಗ ಹನುಮಂತನ ಆಶೀರ್ವಾದವನ್ನು ಪಡೆಯಲು ತನ್ನ ಹುಟ್ಟುಹಬ್ಬ ಸೆಪ್ಟೆಂಬರ್ ನಾಲ್ಕರಂದು ಬಯಸಿದ್ದ. “ಚಂದ್ರಶೇಖರ್ ಮತ್ತು ಅವರ ಕುಟುಂಬ ಸದಸ್ಯರು ದೇವಸ್ಥಾನದ ಹೊರಗೆ ನಿಂತಿದ್ದರು ಆದರೆ ಹುಡುಗ ದೇವಾಲಯದ ಒಳಗೆ ಓಡಿಹೋಗಿದ್ದಾನೆ ಇದು ದೇವಾಲಯದ ಪೂಜಾರಿಗೆ ಕಿರಿಕಿರಿಯನ್ನುಂಟು ಮಾಡಿದೆ” ಎಂದು ಅವರು ಹೇಳಿದ್ದಾರೆ.
ಕೆಲವು “ಮೇಲ್ಜಾತಿ” ಜನರು ಪೂಜಾರಿಯ ಪರವಾಗಿ ನಿಂತು ಸೆಪ್ಟೆಂಬರ್ 11 ರಂದು ಪಂಚಾಯಿತಿ ತರಹದ ಸಭೆ ನಡೆಸಿ, ದೇವಾಲಯದ “ಶುದ್ಧೀಕರಣ” ಗಾಗಿ 25,000 ರೂ. ದಂಡ ವಿಧಿಸಿದ್ದಾರೆ. ಮೇಲ್ಜಾತಿಯ ಇತರ ಗ್ರಾಮಸ್ಥರು ಈತರದ ‘ಕಠಿಣ’ ಕ್ರಮವನ್ನು ವಿರೋಧಿಸಿದ್ದಾರೆ.
ಕೆಲವು “ಮೇಲ್ಜಾತಿಯ ಜನರ ನಡೆ ಗ್ರಾಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿತು ಮತ್ತು ಕುಷ್ಟಗಿ ಪೊಲೀಸರ ಗಮನಕ್ಕೂ ಬಂತು. ಆದರೆ ಮೇಲ್ಜಾತಿಯ ವರ್ಗಗಳಿಗೆ ಹೆದರಿ ಕುಟುಂಬವು ಪೊಲೀಸರನ್ನು ಸಂಪರ್ಕಿಸಲಿಲ್ಲ. ಕೊಪ್ಪಳ ಜಿಲ್ಲೆಯ ಚೆನ್ನದಾಸರ ಮಹಾಸಭಾದ ಕೆಲವು ಸದಸ್ಯರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದು, ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ ದೂರಿನ ಆಧಾರದ ಮೇಲೆ, ಮಂಗಳವಾರ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಲ್ಲಿ, ಜಿಲ್ಲಾಡಳಿತವು ಜಾತೀಯತೆಯ ದುಷ್ಟತನ ಮತ್ತು ಸಮಾಜದ ಮೇಲೆ ಅದರ ಪ್ರಭಾವದ ವಿರುದ್ಧ ಹಳ್ಳಿಯ ಜನರನ್ನು ಜಾಗೃತಗೊಳಿಸಲು ಸಾರ್ವಜನಿಕ ಸಭೆಗಳ ಸರಣಿಯನ್ನು ನಡೆಸಿತು.
ಮುಂದೆ, ಒಂದು ದೊಡ್ಡ ಪೂಜೆಯನ್ನು ಆಯೋಜಿಸಲಾಯಿತು, ಅಲ್ಲಿ ಗ್ರಾಮದ ಎಲ್ಲ ಸಮುದಾಯಗಳು ಮತ್ತು ಪೋಲಿಸರ ಸಮ್ಮುಖದಲ್ಲಿ ಚೆನ್ನದಾಸರು ಸೇರಿದಂತೆ ಭಾಗವಹಿಸಿದ್ದರು.