ದಕ್ಷಿಣಕಾಶಿ ಖ್ಯಾತಿಯ ನಂಜನಗೂಡಿಗೆ (Nanjanagudu) ನಟ ಡಾಲಿ ಧನಂಜಯ (Actor dhananjay) ಇಂದು ಭೇಟಿ ಕೊಟ್ಟಿದ್ದಾರೆ. ನಂಜನಗೂಡಿನ ಶ್ರೀಕಂಠಶ್ವರನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರ ಇಟ್ಟು ನಟ ಡಾಲಿ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ನಟ ಡಾಲಿ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ (Darshan Dhruva narayan) ಕೂಡ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ಧನಂಜಯ್ ದೇವಸ್ಥಾನ ಅರ್ಚಕರು ಮತ್ತು ಸಿಬ್ಬಂದಿಗೆ ಕೂಡ ಮದುವೆ ಆಹ್ವಾನ ನೀಡಿದ್ದಾರೆ.
ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ಡಾಲಿ ಧನಂಜಯ್, ತಮ್ಮ ವಿವಾಹದ ಆಮಂತ್ರಣ ಪತ್ರಿಕೆ ವಿತರಿಸುವ ಕಾರ್ಯದಲ್ಲಿ ತೊಡಗಿದ್ದು, ಇಂದು ಮೈಸೂರಿನ ವಿವಿಧ ಗಣ್ಯರು ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲಿದ್ದಾರೆ. ಇದಕ್ಕೂ ಮುನ್ನ ನಂಜನಗೂಡಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.