ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಮನೆಯಲ್ಲಿ ಶಾಂತಿ ಹೆಚ್ಚಾಗಲಿದೆ. ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಪ್ರಶಂಸೆ ಸಿಗಲಿದೆ. ಹಣಕಾಸಿನಲ್ಲಿ ಜಾಗರೂಕತೆ ಉತ್ತಮ. ಹೊಸ ಹೂಡಿಕೆಯಿಂದ ದೂರಿವಿರಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ಹಳೆಯ ಕೆಲಸಗಳಲ್ಲಿ ಪ್ರಗತಿ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಮಾನಸಿಕ ಕಿರಿಕಿರಿ ಕಮ್ಮಿಯಾಗುತ್ತದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ದಿನ ಆರಂಭದಲ್ಲಿ ಸಣ್ಣ ಒತ್ತಡ ಇದ್ದರೂ ಮಧ್ಯಾಹ್ನದ ನಂತರ ಸುಖಕರ ವಾತಾವರಣ ಇರಲಿದೆ. ಮನೆಯಲ್ಲಿ ಅನಗತ್ಯ ಚರ್ಚೆ ತಪ್ಪಿಸಿ. ದೂರ ಪ್ರಯಾಣದ ಅವಕಾಶ ಸಿಗಲಿದೆ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರ ಕುಟುಂಬದಲ್ಲಿ ಇಂದು ಸಣ್ಣ ಮಟ್ಟಿನ ಉದ್ವಿಗ್ನತೆಯಾಗಲಿದೆ. ಮಾತಿನಲ್ಲಿ ಎಚ್ಚರಿಕೆ ಇರಲಿ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಮಕ್ಕಳಿಂದ ನೆಮ್ಮದಿ ಸಿಗಲಿದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಒಳ್ಳೆಯ ಬೆಳವಣಿಗೆಯಾಗಲಿದೆ. ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹೊಸ ಹೂಡಿಕೆಗೆ ಸ್ನೇಹಿತರಿಂದ ಲಾಭ ಸಿಗಲಿದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದಿನ ದಿನ ಶಾಂತಿಯುತವಾಗಿ ಸಾಗುತ್ತದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮನಸ್ಸಿಗೆ ನೆಮ್ಮದಿ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಸ್ನೇಹಿತರ ಸಂಪರ್ಕ ಹೆಚ್ಚಾಗುತ್ತದೆ. ಖರ್ಚು ಸ್ವಲ್ಪ ಹೆಚ್ಚಾಗಬಹುದು. ಹೊಸಬರೊಂದಿಗೆ ವ್ಯವಹಾರ ಬೇಡ. ಮಕ್ಕಳ ಯಶಸ್ಸಿನಿಂದ ಮನಸ್ಸಿಗೆ ಖುಷಿ ಹೆಚ್ಚಾಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಹಣಕಾಸಿನಲ್ಲಿ ಲಾಭ ಹೆಚ್ಚಾಗಲಿದೆ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ನಿರ್ಧಾರಗಳಲ್ಲಿ ಸ್ಪಷ್ಟತೆ ಇರಲಿ. ಇಟ್ಟ ಹೆಜ್ಜೆಗಳನ್ನು ಹಿಂದಿಡುವ ಮುನ್ನ ಆಲೋಚಿಸಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಇಂದು ಪ್ರಯಾಣಕ್ಕೆ ಶುಭ ದಿನ. ಹೊಸ ಕೆಲಸಕ್ಕೆ ಕುಟುಂಬದ ಬೆಂಬಲ ಸಿಗಲಿದೆ. ಮನಸ್ಸಿನಲ್ಲಿ ಸಮಾಧಾನ ಹೆಚ್ಚಾಗಲಿದೆ. ಹೊಸ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಸಿಗಲಿದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಇಂದು ಹಳೆಯ ಅಡಚಣೆಗೆ ಪರಿಹಾರವಾಗಿ ಹೊಸ ಅವಕಾಶ ಸಿಗಲಿದೆ. ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ. ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಮಾನಸಿಕ ಒತ್ತಡ ಸ್ವಲ್ಪ ಕುಸಿತವಾಗಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಇಂದು ಉತ್ತಮವಾದ ದಿನ. ಆರೋಗ್ಯದ ಕಡೆ ಜಾಗರೂಕತೆ ಇರಲಿ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ಕೆಲಸದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಮನೆಯಲ್ಲೂ ಶಾಂತಿ ಹೆಚ್ಚಾಗಲಿದೆ. ಹಣಕಾಸಿನ ಚಿಕ್ಕ ಮಟ್ಟದ ಲಾಭವಾಗಲಿದೆ. ಹಿತ ಶತ್ರುಗಳಿಂದ ದೂರ ಇರುವುದು ಉತ್ತಮ.












