ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ನಿಮ್ಮ ಅನೇಕ ಕೆಲಸ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆದು ಹೋಗಲಿವೆ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾಗಲಿದ್ದು, ಹೊಸ ಹೂಡಿಕೆಗಳಿಗೆ ಕೈಹಾಕಬೇಡಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರು ಇಂದು ಮಾತಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ. ನಿಮ್ಮ ಮಾತಿನಿಂದ ಅನೇಕರಿಗೆ ನೋವಾಗುವ ಸಾಧ್ಯತೆ ಇದೆ. ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಗಮನಹರಿಸಿ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರು ಇಂದು ಮನರಂಜನೆಗೋಸ್ಕರ ಹೆಚ್ಚು ಸಮಯವನ್ನು ಕಳೆಯಿರಿ. ಮಾನಸಿಕ ಒತ್ತಡದಿಂದ ದೂರ ಇರಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಹಣಕಾಸು ಪರಿಸ್ಥಿತಿ ಉತ್ತಮವಾಗಿರಲಿದೆ. ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರು ಇಂದು ಐಶಾರಾಮಿ ವಸ್ತುಗಳ ಖರೀದಿಗೆ ಕಡಿವಾಣ ಹಾಕುವುದು ಒಳ್ಳೆಯದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ದೂರ ಪ್ರವಾಸದ ಅವಕಾಶ ಸಿಗಲಿದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಹೊಸ ಹೂಡಿಕೆಯಲ್ಲಿ ಲಾಭ ಇರಲಿದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ತಾಳ್ಮೆಯಿಂದ ಬಗೆ ಹರಿಸಿಕೊಳ್ಳಿ. ನಿಮ್ಮ ಶ್ರಮ ಹಾಗೂ ಪ್ರಯತ್ನಕ್ಕೆ ಫಲ ಸಿಗುವ ಸಮಯ ಹತ್ತಿರದಲ್ಲಿದೆ. ಪೂಜೆಯಲ್ಲಿ ಹೆಚ್ಚು ಸಮಯ ಕಳೆಯುವಿರಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರು ಇಂದು ಅಪರಿಚಿತರ ಬಗ್ಗೆ ಎಚ್ಚರ ವಹಿಸಿ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಕುಟುಂಬದಲ್ಲಿ ನೆಮ್ಮದಿ ಮೂಡುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡು ಬರುವುದು. ಸರ್ಕಾರಿ ಕೆಲಸದಲ್ಲಿ ಕಾರ್ಯಸಿದ್ಧಿಯಾಗಲಿದ್ದು, ಬಹು ದಿನಗಳಿಂದ ಕಾದಿದ್ದ ಕೆಲಸವೊಂದು ಪೂರ್ಣಗೊಳ್ಳಲಿದೆ.
ಧನಸ್ಸು ರಾಶಿಯ ಈ ದಿನದ ಭವಿಷ್ಯ

ಧನಸ್ಸು ರಾಶಿಯವರು ಸಣ್ಣಪುಟ್ಟ ವಿಷಯಗಳ ಮೇಲೆ ನಿಗಾವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಂಭವ ಇದೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವರಿ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ದೊಡ್ಡ ಯೋಜನೆಗೆ ಚಾಲನೆ ಸಿಗುವುದು. ಹಾಗಾಗಿ ಸಾವಧಾನದಿಂದ ಕಾರ್ಯವನ್ನು ಹಮ್ಮಿಕೊಳ್ಳಿ. ಹೂಡಿಕೆಯಲ್ಲಿ ದಿಢೀರ್ ಧನಲಾಭವಾಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರು ಇಂದು ಸ್ವಂತ ಕೆಲಸದ ಯೋಜನೆಗಳಿಗೆ ಚಾಲನೆ ದೊರೆಯುವುದು. ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುತ್ತದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರು ವೃತ್ತಿರಂಗದಲ್ಲಿ ಹೊಂದಾಣಿಕೆ ಮನೋಭಾವದಿಂದ ಮುಂದುವರಿಯಿರಿ. ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ಅಪರಿಚಿತರ ಸಹವಾಸ ಬೇಡ. ಯಾರೊಂದಿಗೂ ಅತಿಯಾದ ಸಲುಗೆ ಬೇಡ ಮುಂದಿನ ದಿನಗಳಲ್ಲಿ ಅದೇ ನಿಮಗೆ ತೊಂದರೆ ನೀಡಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.












