ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಬಹು ದಿನಗಳಿಂದ ಕಾದಿದ್ದ ಬಡ್ತಿ ನಿಮ್ಮದಾಗುವ ಸಮಯ ಬಂದಿದೆ. ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿಯಾಗಲಿದ್ದು ನಿರೀಕ್ಷಿಸಿದ ಧನಲಾಭವಾಗಲಿದೆ. ಅನಗತ್ಯವಾದ ಖರ್ಚುಗಳನ್ನು ತಪ್ಪಿಸಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರು ಈ ದಿನ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ದಿನಪೂರ್ತಿ ಸಮಯ ವ್ಯರ್ಥವಾಗಲಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ಹೊಸ ಕೆಲಸಕ್ಕೆ ಹಿತೈಷಿಗಳಿಂದ ಬೆಂಬಲ ಸಿಗಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಸಂಗ್ರಹವಾದ ಸಂಪತ್ತು ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಗಣನೀಯ ಲಾಭವಾಗಲಿದೆ. ವಿವಾಹಕ್ಕೆ ಅಡೆತಡೆಗಳು ಉಂಟಾಗುತ್ತದೆ. ಸದ್ಯದ ಸಮಯದಲ್ಲಿ ಯಾವುದೇ ಹೊಸ ಹೂಡಿಕೆಯನ್ನು ತಪ್ಪಿಸಿ. ಆರೋಗ್ಯ ಸುಧಾರಿಸಲಿದೆ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರು ಇಂದು ಮಾನಸಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯಲಿದ್ದೀರಿ. ದೂರ ಪ್ರಯಾಣದ ಅವಕಾಶವಿದ್ದು, ವಾಹನ ಚಲನೆಯಲ್ಲಿ ಎಚ್ಚರಿಕೆ ಇರಲಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಅದೃಷ್ಟದ ದಿನ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಧನ ಲಾಭವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಯಿದ್ದು, ಬಯಸಿದ ಬಡ್ತಿ ಸಿಗಲಿದೆ. ಆರೋಗ್ಯಕ್ಕಾಗಿ ಆಹಾರದ ಮೇಲೆ ಗಮನ ಇರಲಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರ ಸಾಲ ಮಾಡುವ ಸಾಧ್ಯತೆ ಹೆಚ್ಚಿದ್ದು, ಖರ್ಚುಗಳನ್ನು ನಿಯಂತ್ರಿಸಿ. ಉದ್ಯೋಗ ಸಂಬಂಧ ಸಿಹಿ ಸುದ್ದಿಯೊಂದು ಸಿಗಲಿದೆ. ವಿದೇಶ ಸಂಬಂಧಪಟ್ಟ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ಆರೋಗ್ಯ ಸುಧಾರಿಸಲಿದೆ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಇಂದು ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿಯಾಗಲಿದ್ದು, ಕೆಲಸ ಕಾರ್ಯಗಳಲ್ಲಿ ಜಯವಾಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ. ವಾಹನ ಚಲನೆಯಲ್ಲಿ ಎಚ್ಚರಿಕೆ ಇರಲಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಹಳೆಯ ಸ್ನೇಹಿತರ ಸಹಾಯದಿಂದ ಉದ್ಯೋಗ ಪ್ರಾಪ್ತಿಯಾಗಲಿದೆ. ಆದಾಯದಲ್ಲಿ ಅಡೆತಡೆಗಳು ಉಂಟಾಗುವುದು ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.
ಧನಸ್ಸು ರಾಶಿಯ ಈ ದಿನದ ಭವಿಷ್ಯ

ಧನಸ್ಸು ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಸಾಕಷ್ಟು ಕೆಲಸದ ಒತ್ತಡ ಉಂಟಾಗುತ್ತದೆ. ಮಾತಿನಲ್ಲಿ ನಡೆ ನುಡಿಯಲ್ಲಿ ಎಚ್ಚರಿಕೆ ವಹಿಸಿ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ. ಆಸ್ತಿ ವಾಜ್ಯದಲ್ಲಿ ಸದ್ಯಕ್ಕೆ ಗೆಲುವಿಲ್ಲ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಇಂದು ಮುಖ್ಯವಾಗಿ ಹಿತ ಶತ್ರುಗಳಿಂದ ದೂರವಿರಿ. ಮನೆ ಹಾಗೂ ಕಚೇರಿಯಲ್ಲಿ ಅತಿಯಾದ ಕೋಪವನ್ನು ತಪ್ಪಿಸಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತದೆ. ತಾಳ್ಮೆಯಿಂದ ಎಲ್ಲವನ್ನೂ ಬಗೆಹರಿಸುವಿರಿ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರು ಇಂದು ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲಿದೆ. ದಿಢೀರ್ ಧನಲಾಭವಾಗಲಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಏರುಪೇರಾಗಲಿದ್ದು, ಆಪ್ತರೊಂದಿಗೆ ಈ ಬಗ್ಗೆ ಚರ್ಚಿಸಿ. ಕೌಟುಂಬಿಕವಾಗಿ ಎಚ್ಚರದಿಂದ ನಡೆದುಕೊಳ್ಳಿ. ದೂರ ಪ್ರಯಾಣದಿಂದ ಕೆಲಸ ಕಾರ್ಯ ಸಿದ್ಧಿಯಾಗಲಿದೆ.







