ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಹೊಸ ಅವಕಾಶಗಳು ಎದುರಾಗುವ ದಿನ. ಹಿರಿಯರಿಂದ ಸಲಹೆ ಪಡೆದು ಕಾರ್ಯ ಆರಂಭಿಸಿದರೆ ಯಶಸ್ಸು ಖಚಿತವಾಗಿದೆ. ವಾದ-ವಿವಾದಗಳಿಂದ ದೂರವಿರಿ. ಮಾತಿನಲ್ಲಿ ಹಿಡಿತ ಇರಲಿ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರ ಕುಟುಂಬದಲ್ಲಿ ಇಂದು ಸಂತೋಷದ ವಾತಾವರಣ ಇರಲಿದೆ. ಹಳೆಯ ಒಡನಾಟ ಪುನಃ ಪ್ರಾರಂಭವಾಗಬಹುದು. ಮಾತಿನಲ್ಲಿ ಎಚ್ಚರಿಕೆ ಇರಲಿ. ಹಣಕಾಸಿನಲ್ಲಿ ಸುಧಾರಣೆ ಕಾಣುವಿರಿ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರು ಆರೋಗ್ಯದತ್ತ ಗಮನ ಕೊಡಿ. ಕೆಲಸದ ಒತ್ತಡದಿಂದ ಮಾನಸಿಕ ಅಶಾಂತಿ ಉಂಟಾಗಬಹುದು. ಮಧ್ಯಾಹ್ನದ ನಂತರ ಸುಧಾರಣೆಯಾಗಲಿದ್ದು, ನಿರೀಕ್ಷಿಸಿದ ಫಲ ಸಿಗಲಿದೆ. ಕುಟುಂಬಸ್ಥರೊಂದಿಗೆ ಸಮಯ ಕಳೆಯುವಿರಿ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರಿಗೆ ಇಂದು ಸ್ನೇಹಿತರ ಸಹಕಾರ ದೊರೆಯುತ್ತದೆ. ಹೊಸ ಕಾರ್ಯಾರಂಭಕ್ಕೆ ಇಂದು ಶುಭದಿನ. ನಿಮ್ಮಲ್ಲಾದ ಬದಲಾವಣೆಗೆ ಕುಟುಂಬದವರಿಂದ ಮೆಚ್ಚುಗೆ ಸಿಗಲಿದೆ. ಆರೋಗ್ಯ ಸುಧಾರಿಸಲಿದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳ ಸಾಧ್ಯತೆ. ಹಳೆಯ ಬಾಕಿ ವಿಷಯಗಳಲ್ಲಿ ಪರಿಹಾರ ದೊರೆಯಬಹುದು. ಖರ್ಚು ನಿಯಂತ್ರಣ ಅಗತ್ಯ. ದೂರ ಪ್ರವಾಸದ ಅವಕಾಶ ಸಿಗಲಿದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಆಧ್ಯಾತ್ಮಿಕ ಚಟುವಟಿಕೆಗೆ ಮನಸ್ಸು ಒಲಿಯುತ್ತದೆ. ದೂರ ಪ್ರಯಾಣದ ಸೂಚನೆ ಇದೆ. ಆರೋಗ್ಯದಲ್ಲಿ ಚಿಕ್ಕ ತೊಂದರೆಗಳಿದ್ದರೂ ದಿನ ಶಾಂತವಾಗಿರುತ್ತದೆ. ಹಳೆಯ ಗೆಳೆಯರನ್ನು ಭೇಟಿಯಾಗಲಿದ್ದೀರಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಮನೆಯಲ್ಲಿ ಅಲ್ಪ ಕಲಹದ ಸಾಧ್ಯತೆ ಇದೆ. ಮಾತು ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಶಾಂತವಾಗಿ ನಡೆದುಕೊಂಡರೆ ಎಲ್ಲವೂ ಸರಾಗವಾಗಿ ನಡೆಯುತ್ತದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಬಹು ದಿನಗಳ ಬಳಿಕ ಹಣಕಾಸಿನ ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೊಸ ಸಂಪರ್ಕಗಳಿಂದ ಪ್ರಯೋಜನ ಇರಲಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದಲ್ಲೂ ಚೇತರಿಕೆ ಇರಲಿದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ದೀರ್ಘಕಾಲದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುವ ಸೂಚನೆ. ಆರ್ಥಿಕ ಲಾಭ ಹೆಚ್ಚುವ ಸಾಧ್ಯತೆ ಇದೆ. ಕೆಲಸದಲ್ಲಿ ಆತ್ಮವಿಶ್ವಾಸದಿಂದ ನಡೆದುಕೊಳ್ಳಿ ನಿರೀಕ್ಷಿಸಿದ ಲಾಔ ನಿಮಗೆ ಸಿಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ. ಮಾನಸಿಕ ಶಾಂತಿಗೆ ಧ್ಯಾನ, ಯೋಗ ಮಾಡಿದರೆ ಉಪಯುಕ್ತ. ದೂರ ಪ್ರವಾಸದ ಅವಕಾಶ ಸಿಗಲಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ. ಸ್ನೇಹಿತರ ಸಹಕಾರ ಸಿಗಲಿದ್ದು, ಹೊಸ ಉದ್ಯೋಗ ಆರಂಭಕ್ಕೆ ಅಡಿಗಲ್ಲು ಹಾಕಲಿದ್ದೀರಿ. ಹೊಸ ಯೋಜನೆಗೆ ಇಂದು ಅನುಕೂಲಕರವಾದ ದಿನವಾಗಿದೆ.











