ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಅಭಿವೃದ್ಧಿಯಾಗಲಿದೆ. ಹಣದ ಹರಿವು ಉತ್ತಮವಾಗಿರಲಿದೆ. ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಸಂದರ್ಭದಲ್ಲಿ ಎಚ್ಚರವಹಿಸುವುದು ಸೂಕ್ತವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ದೂರ ಪ್ರವಾಸದ ಅವಕಾಶ ಸಿಗಲಿದೆ. ಸಹೋದ್ಯೋಗಿಗಳಿಂದ ಮಹತ್ವದ ನೆರವು ಪಡೆಯಲು ಸಫಲರಾಗುತ್ತೀರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಅನಿರೀಕ್ಷಿತವಾಗಿ ಹಣಕಾಸು ಪಡೆದುಕೊಳ್ಳುವ ಅವಕಾಶಗಳು ಇದೆ. ನೆಮ್ಮದಿಯ ದಿನವನ್ನು ಕಳೆಯಲಿದ್ದೀರಿ. ಕುಟುಂಬಸ್ಥರಿಂದ ಹಾಗೂ ಆಪ್ತರಿಂದ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ಕರ್ಕಾಟಕ ರಾಶಿಯ ಈ ದಿನದ ಭವಿಷ್ಯ

ಕರ್ಕಾಟಕ ರಾಶಿಯವರಿಗೆ ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಕುಂಟುಂಬ ಕಲಹ ಉಂಟಾಗಲಿದ್ದು, ಮಾತು ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಯೋಚನೆಗಳಿಗೆ ಕುಟುಂಬ ಸದಸ್ಯರು ಸಹಮತ ನೀಡುವುದಿಲ್ಲ. ಒತ್ತಡದಿಂದ ದೂರ ಇರಿ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ದೈವ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕುಟುಂಬಸ್ಥರೊಂದಿಗೆ ದೇವಾಲಯಗಳಿಗೆ ಭೇಟಿ ನೀಡಲಿದ್ದೀರಿ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕೃಷಿಕರಿಗೆ ಹೆಚ್ಚಿನ ಲಾಭ ಸಿಗಲಿದ್ದು, ಹೊಸ ಹೂಡಿಕೆಯತ್ತ ಗಮನ ಹರಿಸುವಿರಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಬಹು ಕಾಲದಿಂದ ಆರ್ಥಿಕ ಕೊರತೆ ನೀಗುವುದರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ. ಸಂಘ ಸಂಸ್ಥೆಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಲಿದ್ದು, ಅಪರಿಚಿತರಿಂದ ಹಣದ ನೆರವು ಸಿಗಲಿದೆ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ. ಮಕ್ಕಳಿಂದ ಸಿಹಿ ಸುದ್ದಿ ಸಿಗಲಿದೆ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಇಂದು ಆಪ್ತರಿಂದ ಸಹಾಯ ಸಿಗಲಿದೆ. ಹೊಸ ಹೂಡಿಕೆಗೆ ಇಂದು ಸಕಾಲ. ಮಹತ್ವಕರ ಕೆಲಸದಲ್ಲಿ ಇಂದು ಕಾರ್ಯಸಿದ್ಧಿಯಾಗಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯಾಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ವ್ಯಾಪಾರ ಅಭಿವೃದ್ಧಿ. ವಸ್ತ್ರ ಬಂಗಾರ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ದೊರೆಯಲಿದೆ. ದಾನ ಧರ್ಮದಲ್ಲಿ ತೊಡಗಿಸಿಕೊಳ್ಳುವಿರಿ. ಕೌಟುಂಬಿಕ ನೆಮ್ಮದಿ ಹೆಚ್ಚಲಿದೆ. ಹೊಸ ವ್ಯವಹಾರಗಳಿಂದ ದೂರವಿರಲು ಪ್ರಯತ್ನಿಸಿ. ಅನ್ಯರೊಂದಿಗೆ ಸಲ್ಲದ ಸಲುಗೆ ಬೇಡ
ಧನಸ್ಸು ರಾಶಿಯ ಈ ದಿನದ ಭವಿಷ್ಯ

ಧನಸ್ಸು ರಾಶಿಯವರು ಇಂದು ಪರೋಪಕಾರ ಮಾಡಲು ಹೋಗಿ ಸಮಸ್ಯೆಗಳನ್ನು ತಂದುಕೊಳ್ಳಬೇಡಿ. ಅಪರಿಚಿತರ ಸ್ನೇಹ ಬಯಸಬೇಡಿ. ಇಂದು ವ್ಯಾಪಾರ ಅಭಿವೃದ್ಧಿಯಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳು ನಿವಾರಣೆ ಆಗಲಿದೆ. ವಿದ್ಯಾರ್ಥಿಗಳಿಗೆ ಶುಭ ದಿನ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಇಂದು ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಣಕಾಸು ವಿಷಯಗಳೊಂದಿಗೆ ವ್ಯವಹರಿಸುವಾಗ ಜಾಗ್ರತೆಯಿಂದಿರಿ. ಸಹಕಾರ ಸಂಘಗಳ ಕ್ಷೇತ್ರದವರಿಗೆ ಉತ್ತಮ ಲಾಭವಾಗಲಿದೆ. ಕೌಟುಂಬಿಕ ನೆಮ್ಮದಿ ಹೆಚ್ಚಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲ ಸಿಗಲಿದೆ. ದುಂದುವೆಚ್ಚದಿಂದ ಹಣ ವ್ಯಯವಾಗಲಿದ್ದು, ಹಣದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಇರಲಿ. ಆರೋಗ್ಯ ಸುಧಾರಿಸಲಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಈ ದಿನ ಶತ್ರುಗಳಿಂದ ತೊಂದರೆ ಉಂಟಾಗಲಿದೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚನೆ ಮಾಡಿ. ಇಂದು ನೀವು ಇಡುವ ಹೆಜ್ಜೆ ನಿಮ್ಮ ಜೀವನದ ನೆಮ್ಮದಿಯನ್ನೇ ಕೆಡಿಸಬಹುದು. ಹೀಗಾಗಿ ಯಾರೊಂದಿಗೂ ಅತಿಯಾದ ಸಲುಹೆ ಬೇಡ. ಎಚ್ಚರಿಕೆಯಿಂದ ಹೆಜ್ಜೆ ಇಡಿ.











