ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಉತ್ತಮವಾಗಿರುತ್ತದೆ. ಪ್ರೇಮ ವಿವಾಹದಲ್ಲಿ ಯಶಸ್ಸು, ಹಾಗೂ ವಿವಾಹಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ನಿವಾರಣೆ ಆಗುತ್ತದೆ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ನೆರೆಹೊರೆಯವರಿಂದ ಆರ್ಥಿಕ ಸಹಾಯ ಪ್ರಾಪ್ತಿ ಆಗುತ್ತದೆ. ಪ್ರೇಮಿಗಳಲ್ಲಿ ಮನಸ್ತಾಪ ಉಂಟಾಗುತ್ತದೆ. ಆರ್ಥಿಕ ಸಂಕಷ್ಟದ ದಿನ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರ ಇಂದು ತಾಯಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಕೆಲಸದ ಒತ್ತಡ ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾಗಿರುತ್ತದೆ. ಆರ್ಥಿಕ ವ್ಯವಹಾರದ ಚಿಂತೆ ಉಂಟಾಗಲಿದೆ.
ಕಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರಿಗೆ ಇಂದು ಹಣಕಾಸಿನ ಸುಧಾರಣೆಗಳು ಸಂಭವಿಸುತ್ತವೆ. ಆದರೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಧಾರ್ಮಿಕ ಸ್ಥಳಕ್ಕೆ ಪ್ರವಾಸ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಶುಭ ಕಾರ್ಯಗಳಲ್ಲಿ ಅಡೆತಡೆಗಳು ಮತ್ತು ಕುಟುಂಬದ ಹಿರಿಯರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಪ್ರೀತಿ ಪ್ರೇಮದಲ್ಲಿ ಸೋಲು ಉಂಟಾಗುತ್ತದೆ. ವ್ಯವಹಾರದಲ್ಲಿನ ಅಡೆತಡೆಗಳು ಮಾನಸಿಕ ಅಶಾಂತಿಗೆ ಕಾರಣವಾಗುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರಿಗೆ ಸಾಲದ ಸಮಸ್ಯೆ ಹೆಚ್ಚಾಗಿ ಈ ದಿನ ಕಾಡುತ್ತದೆ ಹಾಗೂ ಶತ್ರುಗಳಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಎಚ್ಚರಿಕೆ ಅಗತ್ಯ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದುವ್ಯವಹಾರದಲ್ಲಿ ತೊಂದರೆಗಳು ಉಂಟಾಗುತ್ತದೆ. ವ್ಯಾಪಾರದಲ್ಲಿ ನಷ್ಟದ ಭಯವಿದೆ. ಈ ದಿನ ಖರ್ಚುಗಳು ಹೆಚ್ಚಾಗಿ ಇರುತ್ತದೆ. ಜಾಣ್ಮೆಯಿಂದ ಎಲ್ಲವನ್ನೂ ನಿರ್ವಹಿಸಿ.
ಧನಸ್ಸು ರಾಶಿಯ ಇಂದಿನ ಭವಿಷ್ಯ

ಧನಸ್ಸು ರಾಶಿಯವರಿಗೆ ಇಂದು ದಂಪತಿಗಳ ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳ ವಿಚಾರದಲ್ಲಿ ಅತಿ ಚಿಂತೆ ಯೋಚನೆ ಈ ದಿನ ಕಾಡುತ್ತದೆ. ವ್ಯವಹಾರದಲ್ಲಿ ಲಾಭವಾಗಲಿದೆ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರಿಗೆ ಇಂದು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಳೆಯ ವಿವಾದಗಳು ಕೊನೆಗೊಳ್ಳುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ. ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಆರ್ಥಿಕ ಸಂಕಷ್ಟಗಳು ಹೆಚ್ಚಾಗುತ್ತದೆ. ಆತುರದ ತಪ್ಪು ನಿರ್ಧಾರದಿಂದ ತೊಂದರೆ ಉಂಟಾಗುತ್ತದೆ. ಸಂಗಾತಿಗೆ ಅನಾರೋಗ್ಯ ಕಾಡಲಿದ್ದು, ಎಚ್ಚರಿಕೆಯಿಂದ ನಡೆದುಕೊಳ್ಳಿ. ಸ್ನೇಹಿತರಿಂದ ಸಹಾಯ ಸಿಗಲಿದೆ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ಹೊಸ ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವವರಿಗೆ ಶುಭ ದಿನವಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಸಂಗಾತಿಯ ಆಸೆಗಳನ್ನು ಪೂರೈಸಿ.










