ಮೇಷ ರಾಶಿಯ ಇಂದಿನ ಭವಿಷ್ಯ

ಇಂದು ವಿಶ್ರಾಂತಿ ಮತ್ತು ಆತ್ಮಾವಲೋಕನಕ್ಕೆ ಸೂಕ್ತ ದಿನ. ಹಳೆಯ ವಿಷಯಗಳನ್ನು ಮರುಪರಿಶೀಲಿಸುವ ಅವಕಾಶ ಸಿಗುತ್ತದೆ. ಹಣ ಖರ್ಚಿನಲ್ಲಿ ನಿಯಂತ್ರಣ ಅಗತ್ಯ. ಕುಟುಂಬದ ಜೊತೆ ಒಡನಾಟ ಹೆಚ್ಚಾಗುತ್ತದೆ. ಇಂದು ಅತಿಯಾದ ಚಟುವಟಿಕೆ ತಪ್ಪಿಸಿ. ವಿಶ್ರಾಂತಿ ಪಡೆಯಿರಿ.
ವೃಷಭ ರಾಶಿಯ ಇಂದಿನ ಭವಿಷ್ಯ

ನಿಮ್ಮಿಂದ ಮನೆಯಲ್ಲಿ ಶಾಂತಿ–ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಮಾತಿಗೆ ಮೌಲ್ಯ ಸಿಗುತ್ತದೆ. ಹಣದಲ್ಲಿ ಸ್ಥಿರತೆ ಇರುತ್ತದೆ. ಮನೆಗೆ ಹಿತೈಷಿಗಳ ಭೇಟಿ ಸಾಧ್ಯತೆ ಇದೆ. ಇಂದು ಮನಸ್ಸಿಗೆ ನೆಮ್ಮದಿ ಕೊಡುವ ಕೆಲಸ ಮಾಡಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ಇಂದು ಸಂಭಾಷಣೆಯಿಂದ ನಿಮ್ಮ ಬಹುದಿನದ ಸಮಸ್ಯೆ ಪರಿಹಾರವಾಗುವ ದಿನವಾಗಿದೆ. ಹಣದ ಅನಗತ್ಯ ವೆಚ್ಚ ತಪ್ಪಿಸಿ. ಮನೆಯಲ್ಲಿನ ಚಿಕ್ಕ ಗೊಂದಲಗಳು ಬೇಗ ನಿವಾರಣೆಯಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಾತಿನಲ್ಲಿ ಮೃದುತ್ವ ಇರಲಿ.
ಕಟಕ ರಾಶಿಯ ಇಂದಿನ ಭವಿಷ್ಯ

ಕುಟುಂಬದಿಂದ ಎಲ್ಲಾ ಕೆಲಸಗಳಿಗೂ ಬೆಂಬಲ ಸಿಗುತ್ತದೆ. ಮನೆಯಲ್ಲಿ ಸೌಹಾರ್ದದ ವಾತಾವರಣ ಇರಲಿದೆ. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ನಿಯಮ ಪಾಲಿಸಿ. ಭಾವನೆಗಳಿಗೆ ಅತಿಯಾಗಿ ಒಳಗಾಗಬೇಡಿ. ನೈಜತೆಯನ್ನು ಅರ್ಥ ಮಾಡಿಕೊಳ್ಳಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ನಿಮ್ಮ ಆತ್ಮವಿಶ್ವಾಸ ಇಂದು ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹಣದಲ್ಲಿ ವೆಚ್ಚ ಸ್ವಲ್ಪ ಹೆಚ್ಚಾಗಬಹುದು. ಶ್ರಮದಿಂದ ಬಳಲಿಕೆ ಹೆಚ್ಚಾಗಲಿದೆ. ವಿಶ್ರಾಂತಿಗೆ ಸಮಯ ಕೊಡಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಶಾಂತ, ಸಮತೋಲನದ ಭಾನುವಾರವಾಗಿರುತ್ತದೆ. ಮನಸ್ಸು ಸ್ಥಿರವಾಗಿರುತ್ತದೆ. ಹಣ ಸಮತೋಲನವಾಗಿರುತ್ತದೆ. ಕುಟುಂಬದವರ ಜೊತೆ ಸುಂದರ ಸಮಯ ಕಳೆಯುವಿರಿ. ಧ್ಯಾನ–ಪ್ರಾರ್ಥನೆ ಒಳ್ಳೆಯದು.
ತುಲಾ ರಾಶಿಯ ಇಂದಿನ ಭವಿಷ್ಯ

ಇಂದು ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ದೂರ ಪ್ರಯಾಣದ ಸಹಾಸ ಬೇಡ. ಹಣದ ಖರ್ಚಿನಲ್ಲಿ ಎಚ್ಚರಿಕೆ ಅತ್ಯಗತ್ಯ. ಅನಗತ್ಯ ಖರೀದಿ ತಪ್ಪಿಸಿ. ಇಂದು ಯಾರನ್ನೂ ಮೆಚ್ಚಿಸಲು ಯತ್ನಿಸಬೇಡಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ಇಂದು ಆಂತರಿಕ ಶಕ್ತಿ ಹೆಚ್ಚಾಗುವ ದಿನ. ಭವಿಷ್ಯದ ಯೋಜನೆಗಳಿಗೆ ಇಂದು ಅಡಿಗಲ್ಲು ಹಾಕಿ. ವ್ಯಾಪಾರ ವ್ಯವಹಾರದಲ್ಲಿ ಲಾಭದ ಸೂಚನೆ ಸಿಗಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಇಂದು ನಿಮ್ಮ ಗುರಿಗಳನ್ನು ಸ್ಪಷ್ಟಪಡಿಸಿಕೊಳ್ಳಿ
ಧನು ರಾಶಿಯ ಇಂದಿನ ಭವಿಷ್ಯ

ಇಂದು ಹೊಸ ಕಲ್ಪನೆಗಳು, ಹೊಸ ಚಿಂತನೆಗಳು ಮನಸ್ಸಿನಲ್ಲಿ ಮೂಡುವ ದಿನವಾಗಿದೆ. ಪ್ರಯಾಣ ಜಾಗ್ರತೆ ಅಗತ್ಯ. ಯಾವುದೇ ವಿಚಾರದಲ್ಲಿ ಆತುರದ ನಿರ್ಣಯ ಬೇಡ.
ಮಕರ ರಾಶಿಯ ಇಂದಿನ ಭವಿಷ್ಯ

ಹಳೆಯ ವಿಷಯಗಳಲ್ಲಿ ಇಂದು ಸ್ಪಷ್ಟತೆ ಸಿಗಲಿದ್ದು, ಮನಸ್ಸು ಹಗುರಾಗಲಿದೆ. ಮಾನಸಿಕ ಕಿರಿ ಕಿರಿ ಕಡಿಮೆಯಾಗಲಿದೆ. ಹಣದ ಪರಿಸ್ಥಿತಿ ನಿಧಾನ ಸುಧಾರಣೆಯಾಗಲಿದೆ. ಎಲ್ಲಾ ಕೆಲಸಗಳಿಗೂ ಕುಟುಂಬದ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ಚೇತರಿಗೆ ಇರಲಿ. ಮನೆಯವರೊಂದಿಗೆ ಸಮಯ ಕಳೆಯಿರಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಮನಸ್ಸಿನಲ್ಲಿ ಇಂದು ಸ್ವಲ್ಪ ಗೊಂದಲ ಇದ್ದರೂ, ಸಂಜೆ ವೇಳೆಗೆ ಶಾಂತಿ ಸಿಗಲಿದೆ. ಹಣದ ಸಾಮಾನ್ಯ ಸ್ಥಿತಿ ಇರಲಿದೆ. ಆರೋಗ್ಯದಲ್ಲಿ ವಿಶ್ರಾಂತಿ ಅಗತ್ಯ. ಇಂದು ಒತ್ತಡ ಕಡಿಮೆ ಮಾಡಿಕೊಳ್ಳಿ.
ಮೀನ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಹಣದಲ್ಲಿ ಉತ್ತಮ ಚೇತರಿಕೆ ಕಂಡು ಬರಲಿದೆ. ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ ಖುಷಿ ಹೆಚ್ಚಾಗಲಿದೆ.











