ಮೇಷ ರಾಶಿಯ ಇಂದಿನ ಭವಿಷ್ಯ

ಇಂದು ಕೆಲಸಗಳಲ್ಲಿ ಚುರುಕುತನ ಹೆಚ್ಚಿದರೂ, ಕೆಲವೊಂದು ಅಲ್ಪ ಅಡ್ಡಿಗಳು ಮನಸ್ಸನ್ನು ಕಾಡಬಹುದು. ಪ್ರಯತ್ನಕ್ಕೆ ತಕ್ಕ ಫಲವಿದೆ ಮುನ್ನಡೆಯಿರಿ. ಹಣ ನಿಧಾನವಾಗಿ ಸುಧಾರಣೆಯಾಗುತ್ತದೆ. ಕುಟುಂಬದಲ್ಲಿ ಮೃದು ಸಂವಾದ ಮುಖ್ಯವಾಗಿರುತ್ತದೆ. ತಲೆ ನೋವು ಭಾದಿಸಬಹುದು. ಇಂದು ತಾಳ್ಮೆಯೇ ಎಲ್ಲಾ ಕೆಲಸಗಳ ಯಶಸ್ಸಿಗೆ ಉತ್ತಮ ಮಾರ್ಗ.
ವೃಷಭ ರಾಶಿಯ ಇಂದಿನ ಭವಿಷ್ಯ

ಮನೆಯಲ್ಲಿ ಇಂದು ಹರ್ಷಭರಿತ ವಾತಾವರಣ ಇರಲಿದೆ. ಹಳೆಯ ಚಿಂತೆಯೊಂದು ಹಗುರವಾಗುವ ಸೂಚನೆ ಇದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ. ಹೊಸ ಕೆಲಸಕ್ಕೆ ಹಿರಿಯರಿಂದ ಪ್ರೋತ್ಸಾಹ ಸಿಗಲಿದೆ. ಆರೋಗ್ಯ ಸಮಸ್ಥಿತಿಯಲ್ಲಿರಲಿದೆ. ಇಂದು ಮಾತಿನಲ್ಲಿ ಮೃದುತ್ವ ಇರಲಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ಇಂದು ನಡೆ-ನುಡಿ ಎರಡರಲ್ಲೂ ಜಾಗೃತಿಯಿಂದ ಇರಬೇಕಾದ ದಿನ. ನಿಮ್ಮ ಮಾತು ಕೆಲವರಿಗೆ ಬಲ, ಕೆಲವರಿಗೆ ಗೊಂದಲ ತರಬಹುದು. ಅನಗತ್ಯ ಖರ್ಚು ತಪ್ಪಿಸಿ. ಮನೆಯಲ್ಲಿ ಸಣ್ಣ ಗಲಾಟೆಗಳಾಗುವ ಲಕ್ಷಣ ಇದೆ. ಆರೋಗ್ಯ ಉತ್ತಮವಾಗಿರಲು ಒತ್ತಡದಿಂದ ವಿಶ್ರಾಂತಿ ಅಗತ್ಯವಾಗಿದೆ. ಜಾಗೃತೆಯಿಂದ ಹೆಜ್ಜೆಯಿಡಿ
ಕಟಕ ರಾಶಿಯ ಇಂದಿನ ಭವಿಷ್ಯ

ಮನೆಯಲ್ಲಿ ಇಂದು ಖುಷಿ–ಸಂತೋಷ ಹೆಚ್ಚಾಗಲಿದ್ದು, ಕೆಲಸದಲ್ಲಿಯೂ ನೆಮ್ಮದಿಯ ಸಿಗಲಿದೆ. ಹಿತಾಹಾರ ಸೇವನೆ ಮಾಡಿ. ಹೆಚ್ಚಾಗಿ ನೀರು ಕುಡಿಯಿರಿ. ವಾಹನ ಚಲಾಯಿಸುವಾಗ ಎಚ್ಚರ ವಹಿಸಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಧೈರ್ಯ, ನಿಮ್ಮ ನಡವಳಿಕೆ ಎಲ್ಲರ ಗಮನ ಸೆಳೆಯುತ್ತದೆ. ಕಾರ್ಯಕ್ಷೇತ್ರದಲ್ಲಿ ಇಂದು ಮೆಚ್ಚುಗೆ ಸಿಗಲಿದೆ. ಹಣದ ವೆಚ್ಚ ಹೆಚ್ಚುವ ಸೂಚನೆ ಇದೆ. ದೂರ ಪ್ರಯಾಣದ ಅವಕಾಶ ಸಿಗಲಿದೆ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಇಂದು ಮನಸ್ಸು ಗಂಗೆಯರಿಯಂತೆ ಪಾರದರ್ಶಕ ಇರುತ್ತದೆ. ಮನಸ್ಸಿನಲ್ಲಿರುವ ಗೊಂದಲಗಳು ಮಾಯವಾಗಿ ನೆಮ್ಮದಿ ಮೂಡುತ್ತದೆ. ನಿಮ್ಮ ಕಾರ್ಯಗಳಲ್ಲಿ ಸಮಾಧಾನ, ಶಾಂತಿ ಇರಲಿದೆ. ಕುಟುಂಬಸ್ಥರೊಂದಿಗೆ ಮನದ ಮಾತು ಹಂಚಿಕೊಳ್ಳಲು ಒಳ್ಳೆಯ ದಿನ. ಇಂದು ಧ್ಯಾನ–ಪ್ರಾರ್ಥನೆ ಸೂಕ್ತವಾದ ದಿನ. ಭಗವಂತನಲ್ಲಿ ನಂಬಿಕೆ ಇಡಿ.
ತುಲಾ ರಾಶಿಯ ಇಂದಿನ ಭವಿಷ್ಯ

ಸ್ನೇಹಿತರ ಭೇಟಿಯಿಂದ ಇಂದು ಮನಸಿಗೆ ಸಂತೋಷ ಸಿಗುತ್ತದೆ. ಹಣಕಾಸು ವಿಷಯದಲ್ಲಿ ಹೆಚ್ಚುವ ಜಾಗೃತಿ ಅವಶ್ಯಕ. ವೆಚ್ಚ ಹೆಚ್ಚಾಗಲಿದ್ದು, ನಿಮಗೆ ಇರುವ ಜವಬ್ದಾರಿಗಳ ಬಗ್ಗೆ ಗಮನ ಇರಲಿ. ಕೆಲಸ ನಿಧಾನಗತಿಯಲ್ಲಿ ಸಮತೋಲನವಾಗಿ ನಡೆಯಲಿದೆ. ಆರೋಗ್ಯ ಸಾಮಾನ್ಯವಾಗಿರಲಿದೆ. ಇಂದು ಯಾರಿಗೂ ಸಾಲ ಕೊಡಬೇಡಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ನಿಮ್ಮ ತಾಳ್ಮೆ, ನಿರ್ಧಾರ ಶಕ್ತಿ ಇಂದು ಉತ್ತಮ ಫಲ ನೀಡುತ್ತದೆ. ಉದ್ಯೋಗದಲ್ಲಿ ಉತ್ತೇಜನ ಸಿಗಲಿದೆ. ಹಣದಲ್ಲಿ ಲಾಭದ ಮಾರ್ಗ ಇರಲಿದೆ. ಮನೆಯಲ್ಲಿ ಖುಷಿ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಹೊಸ ಗುರಿಗೆ ಮೌಲಿಕ ಹೆಜ್ಜೆ ಹಾಕಿ.
ಧನು ರಾಶಿಯ ಇಂದಿನ ಭವಿಷ್ಯ

ಇಂದು ಹೊಸ ಕಲಿಕೆ ನಿಮ್ಮ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ಶುಭ ಕಾರ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದು ನಿಮಗೆ ಖುಷಿಯೇ ನೀಡಲಿದೆ. ಪ್ರಯಾಣದಲ್ಲಿ ಜಾಗ್ರತೆ ವಹಿಸಿ. ಯಾವುದೇ ಕೆಲಸದಲ್ಲಿ ಆತುರ ಬೇಡ.
ಮಕರ ರಾಶಿಯ ಇಂದಿನ ಭವಿಷ್ಯ

ಹಳೆಯ ಕೆಲಸಗಳು ಇಂದು ಪೂರ್ಣಗೊಳ್ಳಲು ಸಹಕಾರಿಯಾಗುತ್ತದೆ. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ಹಣದಲ್ಲಿ ಚೇತರಿಕೆ ಆಗಲಿದೆ. ಮನೆಯಲ್ಲಿ ನೆಮ್ಮದಿ ಹೆಚ್ಚಾಗಲಿದೆ. ಮನೆಯವರ ಮಾತಿಗೂ ಇಂದು ಮಹತ್ವ ಕೊಡಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಇಂದು ಯಾವುದೇ ವಿಷಯದಲ್ಲೂ ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಅದರಲ್ಲೂ ಸಂಬಂಧದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾವಿರ ಸಲ ಯೋಚಿಸಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ನೀರು ಹೆಚ್ಚಾಗಿ ಕುಡಿಯಿರಿ.
ಮೀನ ರಾಶಿಯ ಇಂದಿನ ಭವಿಷ್ಯ

ಇಂದು ಸೃಜನಶೀಲ ಚಿಂತನೆ, ಆಧ್ಯಾತ್ಮಿಕತೆ—ಇವೆರಡೂ ಮನಸ್ಸಿಗೆ ಖುಷಿ ನೀಡುತ್ತದೆ. ಹಣ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷ–ಸೌಹಾರ್ದ ಹೆಚ್ಚಾಗುತ್ತದೆ. ಹೊಸ ಆಸಕ್ತಿ ಕ್ಷೇತ್ರಕ್ಕೆ ಸಮಯ ನೀಡಿ.











