ಮೇಷ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಕಾರ್ಯಗಳಲ್ಲಿ ಒಮ್ಮೊಮ್ಮೆ ಅಡೆತಡೆ ಕಂಡರೂ, ದಿನದ ಅಂತ್ಯದಲ್ಲಿ ಸಫಲತೆ ಒಲಿಯುತ್ತದೆ. ಹಣ ನಿಧಾನವಾಗಿ ಏರಿಕೆಯಾಗಲಿದೆ. ಕುಟುಂಬದಲ್ಲಿ ಅಲ್ಪ ಗೊಂದಲ ಆಗಬಹುದು ಆದರೆ ಬೇಗ ಪರಿಹಾರವಾಗುತ್ತದೆ. ದೇಹದ ಬಳಲಿಕೆ ಹೆಚ್ಚಾಗಲಿದೆ. ಮಾತಿನ ತೀಕ್ಷ್ಣತೆ ತಪ್ಪಿಸಿ.
ವೃಷಭ ರಾಶಿಯ ಇಂದಿನ ಭವಿಷ್ಯ

ಇಂದು ಮನಸ್ಸಿನಲ್ಲಿ ಶಾಂತಿ, ನೆಮ್ಮದಿ. ನೀವು ಮಾಡುವ ಕಾರ್ಯಗಳಿಗೆ ಹಿರಿಯರಿಂದ ಶ್ಲಾಘನೆ ಸಿಗಲಿದೆ. ಹಣದಲ್ಲಿ ಸ್ಥಿರತೆ ಇರುವ ದಿನ. ಹಿತೈಷಿಗಳ ಭೇಟಿ ಸಾಧ್ಯತೆ ಇದೆ. ಆರೋಗ್ಯದಲ್ಲಿ ಚೇತರಿಗೆ ಕಂಡು ಬರಲಿದೆ. ಇಂದು ಸಮಯವನ್ನು ಜಾಣ್ಮೆಯಿಂದ ಬಳಸಿಕೊಳ್ಳಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ನಿಮ್ಮ ಚುರುಕು ಬುದ್ಧಿ ಇಂದು ಕೆಲಸಗಳಲ್ಲಿ ಹೆಸರು ತರುತ್ತದೆ. ಆದರೆ ನುಡಿಗೆಯಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಹಣದಲ್ಲಿ ಸಣ್ಣ ಮಟ್ಟಿನ ವ್ಯಯವಾಗಲಿದೆ. ಮಾತಿನಲ್ಲಿ ಮೃದುತ್ವ ಇರಲಿ. ಆರೋಗ್ಯಕ್ಕಾಗಿ ವಿಶ್ರಾಂತಿಯ ಅಗತ್ಯವಿದೆ. ಯಾವುದಕ್ಕೂ ಆತುರದ ನಿರ್ಣಯ ಬೇಡ.
ಕಟಕ ರಾಶಿಯ ಇಂದಿನ ಭವಿಷ್ಯ

ಇಂದು ಮನೆಯಲ್ಲಿ ಚೈತನ್ಯ ತುಂಬಿದ ವಾತಾವರಣ ಇರಲಿದೆ. ಕೆಲಸದಲ್ಲಿ ಸಹ ಹೊಸ ದಾರಿಗಳು ತೆರೆದುಕೊಳ್ಳುವ ಸೂಚನೆ ಇದೆ. ಮನೆಯಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಲಿದೆ. ಗ್ಯಾಸ್ಟ್ರಿಕ್/ಜೀರ್ಣ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಮಿತ ಹಿತಾಹಾರ ಸೇವನೆ ಮುಖ್ಯ
ಸಿಂಹ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ವ್ಯಕ್ತಿತ್ವ, ನಿಮ್ಮ ಧೈರ್ಯ ಎಲ್ಲರ ಗಮನ ಸೆಳೆಯುತ್ತದೆ. ಕಾರ್ಯಸ್ಥಳದಲ್ಲಿ ಉತ್ತಮ ಮೆಚ್ಚುಗೆ ಸಿಗಲಿದೆ. ವೆಚ್ಚಗಳ ಸರಪಳಿ ಹೆಚ್ಚಾಗುತ್ತದೆ. ಎಚ್ಚರಿಕೆ ಇರಲಿ. ಶ್ರಮ ಹೆಚ್ಚಾಗಬಹುದು. ಹಣದ ಹೂಡಿಕೆಗಳಲ್ಲಿ ಜಾಗೃತಿ ವಹಿಸಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಮನಸ್ಸು ಶಾಂತವಾದ ನದಿಯಂತೆ. ಕೆಲಸಗಳು ಸುಲಭವಾಗಿ ಕೈಗೂಡುತ್ತವೆ.ಹಣದ ಸ್ಥಿತಿ ಸ್ಥಿರವಾಗಿರುತ್ತದೆ. ಮನೆಯಲ್ಲಿ ಹೃದಯಪೂರ್ಣ ಸಂಭಾಷಣೆ ಸಾಧ್ಯ. ಮಾನಸಿಕ ನೆಮ್ಮದಿಗಾಗಿ ಧ್ಯಾನ, ಶಾಂತಿ ಚಟುವಟಿಕೆಯಲ್ಲಿ ಭಾಗಿಯಾಗುವುದು ಉತ್ತಮ.
ತುಲಾ ರಾಶಿಯ ಇಂದಿನ ಭವಿಷ್ಯ

ಸ್ನೇಹಿತರ ಜೊತೆ ಮಾತು–ನಗು ಹೆಚ್ಚಾಗಲಿದೆ. ಆದರೆ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆಯ ದಿನ ಇಂದು. ಹಣ ಅಪ್ರತೀಕ್ಷಿತ ವ್ಯಯವಾಗಲಿದೆ. ಕೆಲಸ ನಿಧಾನ ಪ್ರಗತಿ ಸಾಧಿಸಲಿದೆ. ಮೌಲ್ಯ ವಸ್ತುಗಳನ್ನು ಯೋಚಿಸದೆ ಖರೀದಿ ಮಾಡಬೇಡಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ನಿಮ್ಮ ದೃಢ ಮನೋಭಾವ ಇಂದು ಕಾರ್ಯಕ್ಷೇತ್ರದಲ್ಲಿ ಫಲಪ್ರದವಾಗಿರುತ್ತದೆ. ಹೊಸ ಅವಕಾಶಗಳು ಬಾಗಿಲು ತೆರೆಯುತ್ತದೆ. ಹಣದಲ್ಲಿ ಲಾಭದ ಸೂಚನೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಯಾವುದೇ ಕೆಲಸದಲ್ಲಿ ನಂಬಿಕೆ, ಧೈರ್ಯ ಹೆಚ್ಚಿಸಿಕೊಳ್ಳಿ. ಯಶಸ್ಸು ನಿಮ್ಮದಾಗಲಿದೆ.
ಧನು ರಾಶಿಯ ಇಂದಿನ ಭವಿಷ್ಯ

ಹೊಸ ಕಲಿಕೆ, ಹೊಸ ಪರಿಚಯ ಎಲ್ಲವೂ ಇಂದು ಹಿತ ನೀಡಲಿದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆಗಳು ನಡೆಯುತ್ತದೆ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದಲ್ಲಿ ಹಾಗೂ ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಆತುರದ ನಿರ್ಧಾರಗಳನ್ನು ತಪ್ಪಿಸಿ.
ಮಕರ ರಾಶಿಯ ಇಂದಿನ ಭವಿಷ್ಯ

ಇಂದು ಹಳೆಯ ಕೆಲಸಗಳಿಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ನೆಮ್ಮದಿ ತುಂಬುತ್ತದೆ. ಹಣ ಕಾಸಿನಲ್ಲಿ ಚೇತರಿಕೆಯ ದಾರಿ ಸಿಗಲಿದೆ. ಆರೋಗ್ಯದಲ್ಲಿ ಬಲ, ಚೈತನ್ಯ ಹೆಚ್ಚಾಗುತ್ತದೆ. ಇಂದು ಕುಟುಂಬಕ್ಕೆ ಸಮಯ ನೀಡಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಬೆಳಗ್ಗೆ ಗೊಂದಲವಿದ್ದರೂ ಮಧ್ಯಾಹ್ನದ ನಂತರ ಕೆಲಸದಲ್ಲಿ ನಿಖರತೆ, ಸ್ಪಷ್ಟತೆ ಇರಲಿದೆ. ಮೃದು ಮಾತಿನಿಂದ ಮನೆಯಲ್ಲಿ ಎಲ್ಲವೂ ಸರಿಯಾಗುತ್ತದೆ. ಆರೋಗ್ಯದಲ್ಲಿ ವಿಶ್ರಾಂತಿ ಹೆಚ್ಚಿಸಿಕೊಳ್ಳಿ. ಮನಸ್ಸನ್ನು ಚಂಚಲ ಮಾಡಿಕೊಳ್ಳಬೇಡಿ.
ಮೀನ ರಾಶಿಯ ಇಂದಿನ ಭವಿಷ್ಯ

ಸೃಜನಶೀಲ ಚಿಂತನೆ, ಆಧ್ಯಾತ್ಮಿಕ ಧ್ಯಾನ ಎರಡೂ ಇಂದು ಫಲ ನೀಡುವ ದಿನ. ಹಣದಲ್ಲಿ ಸುಧಾರಣೆಯಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಹೊಸ ಹೊಸ ಚಿಂತನೆಗಳಿಗೆ ಅವಕಾಶ ಕೊಡಿ.











