ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕುಗಳು ಮೂರನೇ ಅಲೆಗೆ ಕಾಲಿಟ್ಟಿದೆ. ಕಳೆದ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಎರಡನೇ ಅಲೆ ಸಂಭವಿಸಿದ ಸಮಯದಲ್ಲಿ ಕೋವಿಡ್ ಸೋಂಕಿತರ ಆಸ್ಪತ್ರೆ ದಾಖಲಾತಿ ಶೇ.20-23ರಷ್ಟು ಏರಿಕೆ ಕಂಡಿತ್ತು. ಆದರೆ, ಮೂರನೇ ಅಲೆ ಸಮಯದಲ್ಲಿ ಆಸ್ಪತ್ರೆಗೆ ಶೇ.5-10ರಷ್ಟು ಏರಿಕೆ ಕಾಣುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಈ ಕುರಿತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಭೂಷಣ್, ʻಕಳೆದ ಬಾರಿಗಿಂತ ಈ ಭಾರಿ ಪರಿಸ್ಥಿತಿ ಹತೋಟಿಯಲ್ಲಿದೆ ಮತ್ತು ಜನರು ಆಸ್ಪತ್ರೆಗೆ ದಾಖಲಿಸುವವರ ಸಂಖ್ಯೆಯಲ್ಲು ಸಹ ತೀವ್ರ ಬದಲಾಗಬಹುದುʼ. ಆರೋಗ್ಯ ಇಲಾಖೆಯ ಕಾರ್ಯಕರ್ತರ ಅಗತ್ಯತೆಗಳನ್ನು ತ್ವರಿತವಾಗಿ ಮತ್ತು ನಿಯಮಿತವಾಗಿ ಪರಿಶೀಲಿಸುವಂತೆ ಹೇಳಿದ್ದಾರೆ.






