
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆಗಳಿಲ್ಲ. ಮರಣೋತ್ತರ ಪರೀಕ್ಷೆಯ ಸ್ಯಾಂಪಲ್ಸ್ನ FSL ರಿಪೋರ್ಟ್ ಪೊಲೀಸ್ರ ಕೈ ಸೇರಿದ್ದು ಕೊಲೆಯ ಭೀಕರತೆ ಅನಾವರಣ ಆಗಿದೆ.
ಎದೆಯ ಎಲುಬು ಮುರಿದು ಹೋಗಿದೆ, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು, ಆ ಬಳಿಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೊಣಕಾಲು ಮೂಳೆಯೂ ಮುರಿದು ಹೋಗಿದೆ. ಬಲಗಣ್ಣಿಗೂ ಗಾಯವಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡುವಾಗ ಟೆಂಪೋಗೆ ಬಲವಾಗಿ ಹೊಡೆದಿರೋದು ಸಹ ಬೆಳಕಿಗೆ ಬಂದಿದೆ.
ಒಂದಲ್ಲ ಎರಡಲ್ಲ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆ ಆಗಿವೆ ಎನ್ನಲಾಗಿದೆ.. ನಟ ದರ್ಶನ್ ಸೇರಿ ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಎಲ್ಲರೂ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

ಇದರಲ್ಲಿ ದರ್ಶನ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ರವಿಶಂಕರ್, ನಂದೀಶ್ ಹಾಗೂ ದೀಪಕ್ ಸೇರಿ ಆರಕ್ಕೂ ಹೆಚ್ಚು ಜನರ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಪತ್ತೆ ಆಗಿವೆ.. ಆರೋಪಿಗಳಿಗೆ ಶಿಕ್ಷೆ ಕೊಡಿಸಲು ರಕ್ಷದ ಕಲೆಗಳು ಅಂಟಿದ ಬಟ್ಟೆ, ಬಹು ದೊಡ್ಡ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಸದ್ಯ ಎಲ್ಲಾ ಆರೋಪಿಗಳ ಬಟ್ಟೆಗಳನ್ನು ಸಂಬಂಧಿಸಿದ ಎಫ್ಎಸ್ಎಲ್ಗೆ ಕಳುಹಿಸಿ ವರದಿ ಪಡೆದುಕೊಂಡಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ಇದಲ್ಲದೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ್ದ ಹಗ್ಗ, ರಿಪೀಸ್ ಕಟ್ಟಿಗೆ, ಶವ ಸಾಗಿಸಿದ ಕಾರಿನಲ್ಲೂ ರಕ್ತದ ಕಲೆಗಳು ಪತ್ತೆ ಆಗಿವೆ..

ನಟ ದರ್ಶನ‌್ ಬಟ್ಟೆ ಮೇಲೆ ರಕ್ತದ ಕಲೆಗಳು ಇರುವುದು ಈಗಾಗಲೇ ಪತ್ತೆಯಾಗಿತ್ತು. ಈಗ ಮತ್ತಷ್ಟು ಕಡೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿವೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನ ಟೆಂಪೋಗೆ ಬಡಿದಿದ್ದು, ತಲೆಗೆ ಗಂಭೀರ ಗಾಯವಾಗಲು ಕಾರಣ ಎಂದು ಪರೀಕ್ಷೆಯಲ್ಲಿ ಗೊತ್ತಾಗಿದೆ.
ಬಡಿತದ ರಭಸಕ್ಕೆ ಮೆದುಳಿನ ಒಂದು ಭಾಗ ಪ್ರೆಸ್ ಆಗಿರೋದು ವರದಿಯಲ್ಲಿ ಬೆಳಕಿಗೆ ಬಂದಿದೆ. ಒಟ್ಟಾರೆ ಬಂಧನವಾಗಿ ಎರಡು ತಿಂಗಳು ಕಳೆದಿರುವ ದರ್ಶನ್ ಅಂಡ್ ಗ್ಯಾಂಗ್ ಜೈಲಿನಿಂದ ಬಿಡುಗಡೆ ಆಗುವುದೇ ಅನುಮಾನ ಎನ್ನುವಂತಾಗಿದೆ. ಅಭಿಮಾನಿಗಳು ಮಾತ್ರ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಚಾರ್ಜ್ಶೀಟ್ನಲ್ಲಿ ಸಾಕ್ಷಿಗಳು ಪ್ರಬಲ ಆಗುತ್ತಲೇ ಇವೆ.

ಕೃಷ್ಣಮಣಿ