ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮಾತನಾಡಿರುವ 2 ಆಡಿಯೋಗಳು ಪ್ರತಿಧ್ವನಿಗೆ ಸಿಕ್ಕಿದ್ದು, ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಆರೋಪ ಮಾಡುತ್ತಿರುವುದು ಯಾಕೆ ಎನ್ನುವುದರ ಎಳೆ ಎಳೆಯಾಗಿ ಸಾಮಾಜಿಕ ಕಾರ್ಯಕರ್ತನ ಜೊತೆಗೆ ಮಾತನಾಡಿದ್ದಾರೆ. ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆಗೆ ಡಿ ರೂಪಾ ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ತನ್ನ ಗಂಡ ಮುನೀಶ್ ಮೌದ್ಗಿಲ್ ಸರ್ವೇ ಅಂಡ್ ಲ್ಯಾಂಡ್ಸ್ ರೆಕಾರ್ಡ್ ಆಯುಕ್ತರಾಗಿದ್ದಾಗ ಸಾಕಷ್ಟು ಲಾಭಗಳನ್ನು ಪಡೆದುಕೊಂಡಿದ್ದಾರೆ. ತನ್ನ ಗಂಡನನ್ನು ಬುಟ್ಟಿಗೆ ಹಾಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಗಂಡ ಸುಧೀರ್ ರೆಡ್ಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಲಿಟಿಗೇಷನ್ ಇರುವ ಜಮೀನು ಕೊಳ್ಳುವುದು ಮೇಲ್ಮಟ್ಟದಲ್ಲಿ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ನನ್ನ ಗಂಡ ಮುನೀಶ್ ಮೌದ್ಗಿಲ್ ಜೊತೆಗೆ ಚಾಟ್ ಮಾಡುವ ಎಲ್ಲಾ ವಿಚಾರಗಳು ನನಗೆ ಗೊತ್ತಾಗುತ್ತಿದೆ. ಆಕೆಯ ಪ್ರತಿಯೊಂದು ವಿಚಾರದಲ್ಲೂ ನನ್ನ ಗಂಡ ಮುನೀಶ್ ಮೌದ್ಗಿಲ್ ನಿರ್ಧಾರ ಮಾಡುತ್ತಿದ್ದಾರೆ. ಆಕೆ ಒಂದು ಕ್ಯಾನ್ಸರ್ ಇದ್ದಂತೆ, ಅವಳಿಂದಾಗಿ (Rohini Sindhoori) ನಮ್ಮ ಮನೆಯೂ ಚೆನ್ನಾಗಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.
ಶಾಸಕ ಸಾರಾ ಮಹೇಶ್ ಸಂಧಾನಕ್ಕೆ ಹೇಗೆ ನಡೀತು ಪ್ರಯತ್ನ..?
ಮೈಸೂರಿನ ಕೆ.ಆರ್ ನಗರದ ಜೆಡಿಎಸ್ ಶಾಸಕ ಸಾರಾ ಮಹೇಶ್, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು, ಶಾಸನ ಸಭೆಯಲ್ಲೂ ಪ್ರಸ್ತಾಪಿಸಿದ್ದರು. ತನಿಖೆ ಮಾಡುವಂತೆ ಹಕ್ಕೊತ್ತಾಯ ಮಾಡಿದ್ದರು. ಇದರಿಂದ ಕಂಗಾಲಾದ ರೋಹಿಣಿ ಸಿಂಧೂರಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗು ಹೆಚ್.ಡಿ ಕುಮಾರಸ್ವಾಮಿ ಅವರ ಬಳಿ ಹೋಗಿದ್ದರು. ಆದರೂ ಸಾರಾ ಮಹೇಶ್ ಸಂಧಾನಕ್ಕೆ ಒಪ್ಪಿರಲಿಲ್ಲ. ಮಾಜಿ ಸಚಿವ ಚಲುವರಾಯಸ್ವಾಮಿ ಮೂಲಕವೂ ಸಂಧಾನಕ್ಕೆ ಯತ್ನಿಸಿದರು. ಅದೂ ಕೈಗೂಡಲಿಲ್ಲ. ಅಂತಿಮವಾಗಿ ರಮಣರೆಡ್ಡಿ, ಮಣಿವಣ್ಣನ್ ಮೂಲಕ ಸಂಧಾನಕ್ಕೆ ಯತ್ನಿಸಿದರು. ಮಣಿವಣ್ಣನ್ ಈ ಹಿಂದೆ ಸಾರಾ ಮಹೇಶ್ ಕುಟುಂಬದ ಕೆಲಸ ಮಾಡಿಕೊಟ್ಟಿದ್ದ ಕಾರಣಕ್ಕೆ ಸಾರಾ ಮಹೇಶ್ ಸಂಧಾನಕ್ಕೆ ಒಪ್ಪಿಕೊಂಡರು. ಸಾರಾ ಮಹೇಶ್ ಜೊತೆಗಿನ ಸಂಧಾನದ ವೇಳೆ ನಿಮಗೇನು ಬೇಕು ಹೇಳಿ ನಾನು ಕೊಡುತ್ತೇನೆ ಎಂದಿದ್ದಾರೆ. ನೀವು ನನ್ನಲ್ಲಿ ಏನು ಕೇಳಿದರೂ ನಾನು ಕೊಡುವುದಕ್ಕೆ ತಯಾರು ಎನ್ನಲಾಗಿದೆ. ತಪ್ಪು ಮಾಡಿಲ್ಲ ಅಂದ್ರೆ ಆಕೆ ಸಂಧಾನಕ್ಕೆ ಹೋಗಿದ್ದು ಯಾಕೆ..? ಸಂಧಾನ ಮಾಡಿಕೊಂಡಾಕ್ಷಣ ಭ್ರಷ್ಟಾಚಾರ ಹೋಗಿಬಿಡುತ್ತಾ..? ಎಂದು ಡಿ.ರೂಪಾ ಪ್ರಶ್ನಿಸಿದ್ದಾರೆ.

ಮುನೀಶ್ ಮೌದ್ಗಿಲ್ ವರ್ಗಾವಣೆ ಹಿಂದೆ ರೂಪಾ ಒತ್ತಡ..!
1998ರ ಕರ್ನಾಟಕ ಕೇಡರ್ ಅಧಿಕಾರಿ ಆಗಿರುವ ಮುನೀಶ್ ಮೌದ್ಗಿಲ್ ಕರ್ನಾಟಕ ಸರ್ವೇ ಅಂದ್ ಲ್ಯಾಂಡ್ ರೆಕಾರ್ಡ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಅದರಿಂದ ಲಾಭ ಪಡೆಯುತ್ತಿದ್ದ ರೋಹಿಣಿ ಸಿಂಧೂರಿ ತನ್ನ ಗಂಡ ಸುಧೀರ್ ರೆಡ್ಡಿಯ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಳ್ತಿದ್ರು. ಇದೇ ಕಾರಣಕ್ಕೆ ನಾನು ಮುನೀಶ್ ಮೌದ್ಗಿಲ್ರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಕೇಳಿದ್ದೇನೆ ಎಂದಿದ್ದಾರೆ ಡಿ ರೂಪಾ. ಇನ್ನು ಇಟಲಿಯಿಂದ ಅಡುಗೆ ಮನೆ ಸಾಮಗ್ರಿಗಳನ್ನು ತರಿಸುತ್ತಿದ್ದ ರೋಹಿಣಿ ಸಿಂಧೂರಿ, ಟ್ಯಾಕ್ಸ್ ಫ್ರೀ ಮಾಡಿಸಲು ತನ್ನ ಪ್ರಭಾವ ಬಳಸಿದ್ದಾಳೆ. ಏರ್ಪೋರ್ಟ್ನಲ್ಲಿ ಕೆಲಸ ಮಾಡುವ ತನ್ನದೇ ಬ್ಯಾಚ್ನ ಅಧಿಕಾರಿ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾಳೆ. ಆಕೆ ಎಲ್ಲಾ ವಿಚಾರಗಳನ್ನು ನನ್ನ ಗಂಡನ ಜೊತೆಗೆ ಚಾಟ್ ಮೂಲಕ ಚರ್ಚೆ ಮಾಡಿದ್ದಾಳೆ. ನಾನು ಆ ಪೊಲೀಸ್ ಅಧಿಕಾರಿ ಜೊತೆಗೂ ಮಾತನಾಡಿದ್ದೇನೆ ಎಂದು ಖಡಕ್ ಆಗಿ ಮಾತನಾಡಿದ್ದಾರೆ IPS ಅಧಿಕಾರಿ ರೂಪಾ.
2 ಆಡಿಯೋದಲ್ಲಿ ಒಂದು ಸಾಫ್ಟ್, ಮತ್ತೊಂದು ಫುಲ್ ಗರಂ..!
ರೋಹಿಣಿ ಸಿಂಧೂರಿ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆಗೆ 2 ಬಾರಿ ಮಾತನಾಡಿದ್ದಾರೆ. ಒಂದರಲ್ಲಿ ಬರೋಬ್ಬರಿ 25 ನಿಮಿಷಗಳ ಕಾಲ ತಾಳ್ಮೆಯಿಂದ ಮಾತನಾಡಿರುವ ಡಿ. ರೂಪಾ, ಎಲ್ಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮತ್ತೊಂದರಲ್ಲಿ ಕೇವಲ 37 ಸೆಕೆಂಡ್ಗಳ ಕಾಲ ಮಾತನಾಡಿರುವ ಡಿ ರೂಪಾ, ರೌದ್ರಾವತಾರ ತಾಳಿದ್ದಾರೆ. ರೋಹಿಣಿ ಸಿಂಧೂರಿಯನ್ನು ರಂಡೆ ಎಂದು ಸಂಬೋಧಿಸಿರುವ ಡಿ ರೂಪಾ, ಆ ರಂಡೆ ಕಳುಹಿಸ್ತಾಳೆ, ನೀವು ಪಿಂಪ್ ರೀತಿ ಬಂದು ಕೆಲಸ ಮಾಡಿಸಿಕೊಳ್ತೀರಿ. ನನಗೆ ಎಲ್ಲವೂ ಗೊತ್ತಿದೆ. ಅಲ್ಲಿಂದ ಎದ್ದು ಹೋಗ್ರಿ ಎಂದು ಗುಟುರು ಹಾಕಿದ್ದಾರೆ. ಗಂಗರಾಜು ಒಂದು ಮಾತು ಮೇಡಂ ಒಂದು ಮಾತು ಎನ್ನುತ್ತಿದ್ದರೂ ಡಿ.ರೂಪಾ ಆವೇಶಭರಿತವಾಗಿ ಒಂದೇ ಉಸಿರಿನಲ್ಲಿ ಮಾತನಾಡಿದ್ದಾರೆ. ಇದನ್ನು ಬೇಕಿದ್ರೆ ರೆಕಾರ್ಡ್ ಮಾಡ್ಕೊಳಿ, ಸಾಮಾಜಿಕ ಜಾಲತಾಣಕ್ಕೂ ಬೇಕಿದ್ರೆ ಹಾಕಿಕೊಳ್ಳಿ. ಆ ರಂಡೆ ಎಷ್ಟು ಸಂಸಾರ ಹಾಳು ಮಾಡಿದ್ದಾಳೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ ಎಂದಿದ್ದಾರೆ. ಈ ಆಡಿಯೋ ವೈರಲ್ ಆದ ಬಳಿಕ ಪೋಸ್ಟ್ ಹಾಕಿರುವ ರೂಪಾ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಲಿ, ಕುಟುಂಬದ ವಿಚಾರ ಚರ್ಚೆ ಆಗುವುದು ಬೇಡ ಎಂದಿದ್ದಾರೆ.