ಐಪಿಎಸ್ (IPS) ಅಧಿಕಾರಿ ಡಿ.ರೂಪಾ (D roopa) ಹಾಗೂ ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ (Rohini sindhoori) ನಡುವಿನ ಜಟಾಪಟಿ ಮತ್ತೆ ತಾರಕಕ್ಕೇರುವ ಸಾಧ್ಯತೆಯಿದೆ. ಈಗಾಗಲೇ ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ಹಾಕಿದ್ರು. ಇತ್ತ ಕೇಸ್ ರದ್ದುಪಡಿಸುವಂತೆ ರೂಪಾ ಕೋರಿದ್ದ ಅರ್ಜಿಯನ್ನ ಹೈಕೋರ್ಟ್ (Highourt) ವಜಾಗೊಳಿಸಿತ್ತು.
ಈ ಬೆನ್ನಲ್ಲೇ ಡಿ.ರೂಪಾ ಸುಪ್ರೀಂ ಕೋರ್ಟ್ (Supreme court) ಮೆಟ್ಟಿಲೇರಿದ್ರು. ಇದೀಗ ಸುಪ್ರೀಂಕೋರ್ಟ್ನಲ್ಲೂ ರೂಪಾಗೆ ಹಿನ್ನಡೆಯಾಗಿದೆ. ಡಿ.ರೂಪಾ ವಿರುದ್ಧದ ಕ್ರಿಮಿನಲ್ ಮಾನನಷ್ಟ ಕೇಸ್ ವಿಚಾರಣೆ ನಡೆಯಲಿ ಅಂತ ಸುಪ್ರೀಂ ಕೋರ್ಟ್ ಹೇಳಿದ್ದು, ಕೇಸ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್ ಆದೇಶದಲ್ಲಿ ನಾವೇಕೆ ಮಧ್ಯಪ್ರವೇಶಿಸಬೇಕು. ನಾವು ಕೇಸ್ ಸೆಟ್ಲಮೆಂಟ್ ಆಗಲಿ ಎಂದ ಬಯಸಿದ್ವಿ ಅನ್ನೋದಾಗಿ ಹೇಳಿದೆ.
ಇನ್ನು ಸುಪ್ರೀಂಕೋರ್ಟ್ನಲ್ಲಿ ನವಂಬರ್ 5 ರಂದು ಅಂತಿಮ ಹಂತದ ವಿಚಾರಣೆ ನಡೆಯಲಿದ್ದು, ಮಾನನಷ್ಟ ಮೊಕದ್ದಮೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮುಂದುವರಿಯಲಿದೆ.