ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪೋಟೋಗಳನ್ನು ಹಂಚಿಕೊಂಡಿರುವವರ ಡಿ ರೂಪ ಅವರಿಗೆ ಯಾವ ನೈತಿಕತೆ ಇದೆ ಇನ್ನೊಬ್ಬರ ಪರ್ಸನಲ್ ಫೋಟೋವನ್ನು ಶೇರ್ ಮಾಡಿಕೊಳ್ಳುವುದಕ್ಕೆ ಎಂದು ರೋಹಿಣಿ ಸಿಂಧೂರಿ ಅವರ ಪತಿ ಸುದೀರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ನಾನು ಕಂಪ್ಲೇಂಟ್ ಮಾಡ್ತೀನಿ ಎಂದು ಸುಧೀರ್ ರೆಡ್ಡಿ ಡಿ ಕೆಂಡಮಂಡಲಾಗಿದ್ದಾರೆ .
ನಾನು ಕನ್ನಡಿಗ. ನಮ್ಮ ಕುಟುಂಬದ ಬಗ್ಗೆ ಯಾಕೆ ಈ ರೀತಿ ಮಾಡುತ್ತಾ ಇದ್ದಾರೆ ನಾನು ಡಿ ರೂಪ ಅವರನ್ನು ಸುಮ್ಮನೆ ಬಿಡಲ್ಲ. ಡಿ ರೂಪ ಈ ರೀತಿ ಮಾಡುತ್ತಾ ಇರೋದು ಸರಿ ಅಲ್ಲ. ನಮ್ಮ ಕುಟುಂಬ ಕಂಡರೆ ನಿಮಗೆ ಜಲಸಿ ನಾ ಎಂದು ಸುದೀರ್ ರೆಡ್ಡಿ ಪ್ರಶ್ನೆ ಮಾಡಿದರು.

ನಿನ್ನೆಯಿಂದ ನಡೆಯುತ್ತಿರುವ ಹಿರಿಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ಟಾಕ್ ವಾರ್ ನಲ್ಲಿ , ಸಿಂಧೂರಿ ಅವರ ಅಭಿಮಾನಿಗಳು ಡಿ ರೂಪ ಅವರಿಗೆ ೯ ಪ್ರಶ್ನೆ ಮಾಡಿದ್ದರು ಇಬ್ಬರ ನಡುವಿನ ಕಿತ್ತಾಟದಲ್ಲಿ ಅಭಿಮಾನಿಗಳು ಕೂಡ ಸೇರಿಕೊಂಡಿದ್ದಾರೆ . ಟ್ವಿಟರ್ ನಲ್ಲಿ ರೋಹಿಣಿ ಸಿಂಧೂರಿ ಅಭಿಮಾನಿಗಳು ಡಿ ರೂಪ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು ಆದ್ರೆ ಈಗ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ, ಡಿ ರೂಪ ಅವರ ಆ ೩ ಪುರುಷ ಅಫೀಸರ್ಸ್ ಹೆಸರು ಹೇಳಿಲ್ಲಂದ್ರೆ ಈಗ್ಲೇ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಮಾಡ್ತೀನಿ ಎಂದು ಸುಧೀರ್ ರೆಡ್ಡಿ ಹೇಳಿದ್ದರು.
ಸಿಂಧೂರಿ ಅವರ ಪರ್ಸ್’ನಲ್ ವಿಷಯಕ್ಕೆ ಅವರು ಯಾಕೆ ಮೂಗು ತೋರಿಸುತ್ತಿದ್ದಾರೆ. ನನಗೆ ಅಂತೂ ಈ ಡಿ ರೂಪ ಅಂದ್ರೆ ಯಾರು ಅಂತ ನನಗೆ ಗೊತ್ತಿಲ್ಲ . ಅವರಿಗೆ ಪೋಟೋ ಸೆಂಡ್ ಮಾಡಿದವರು ಆ ಮೂರು ಜನ ವಿರುದ್ಧ ಹಾಗೂ ಡಿ ರೂಪ ಅವರ ಮೇಲೆ ನಾನು ಇವತ್ತು ಕೇಸ್ ಹಾಕ್ತೀನೆ ಎಂದರು .