ಬೆಂಗಳೂರು ಗ್ರಾಮಾಂತರದಲ್ಲಿ (Bangalore rural) ಡಿ.ಕೆ. ಸುರೇಶ್‌ಗೆ (DK Suresh ) ಸೋಲಿನ ಹಿನ್ನಲೆ ಇದೀಗ ಡಿಕೆ ಬ್ರದರ್ಸ್ ಅಲರ್ಟ್ ಆಗಿದ್ದಾರೆ. ಇದೀಗ ಚನ್ನಪಟ್ಟಣ್ಣ (Chennapatna) ವಿಧಾನಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ಮೂಲಕ ಲೋಕಸಭಾ ಚುನಾವಣಾ ಸೋಲಿಗೆ ಸೇಡು ತೀರಿಸಿಕೊಳ್ಳಲು ತಂತ್ರ ರೂಪಿಸುತ್ತದ್ದಾರೆ ಎನ್ನಲಾಗ್ತಿದೆ.
ಮಾಜಿ ಸಿಎಂ ಹೆಚ್‌ಡಿಕೆ (HDK) ರಾಜಿನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಇದೀಗ ಪೈಪೋಟಿ ಆರಂಭವಾಗಿದೆ. ಚನ್ನಪಟ್ಟಣದ ಶಾಸಕ ಕುಮಾರಸ್ವಾಮಿ (Kumaraswamy) ಮಂಡ್ಯದಿಂದ (Mandya) ಸಂಸದರಾಗಿ ಆಯ್ಕೆಯಾಗಿರುವುದರಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಹೀಗಾಗಿ ತೆರವಾಗಲಿರುವ ಸ್ಥಾನದ ಮೇಲೆ ಡಿಕೆ ಬ್ರದರ್ಸ್ (DK brothers) ಕಣ್ಣಿಟ್ಟಿದ್ದಾರೆ.
ಒಂದಡೆ ಇದೇ ಕ್ಷೇತ್ರದಿಂದ ನಿಖಿಲ್‌ರನ್ನ (Nikhil kumaraswamy) ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕು ಎಂಬುದು ದಳಪತಿಗಳ ಲೆಕ್ಕಾಚಾರವಾಗಿದ್ರೆ, ಮತ್ತೊಂದೃಡೆ,ಮ ಡಿಕೆ ಸುರೇಶ್‌ರನ್ನ ಇಲ್ಲಿ ಕಣಕ್ಕಿಳಿಸಿ ನ್ನಪಟ್ಟಣ ವಶಪಡಿಸಿಕೊಳ್ಳಬೇಕು ಎಂಬುದು ಡಿಕೆ ಪ್ಲಾನ್. ಆ ಮೂಲಕ ಬೆಂಗಳೂರು ಗ್ರಾಮಾಂತರದ ಸೋಲಿಗೆ ಮುಖ್ಯ ತೀರಿಸುವ ಲೆಕ್ಕಾಚಾರದಲ್ಲಿ ಡಿಕೆ ಬ್ರದರ್ಸ್ ಇದ್ದು, ಮತ್ತುಮ್ಮ ಗೌಡರ ಕುಟುಂಬ ವರ್ಕ್ಸಸ್ ಡಿಕೆ ಬ್ರದರ್ಸ್ ಎಂಬ ಪರಿಸ್ಥಿತಿ ನಿರ್ಮಾಣವಾದಂತಿದೆ.