ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ಡಿಕೆ ಸುರೇಶ್ (DK Suresh) ನಾಮಪತ್ರ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ತಮ್ಮ ಆಸ್ತಿ ಘೋಷಣೆ ಮಾಡಿರುವ ಡಿಕೆ ಸುರೇಶ್ ಬರೋಬ್ಬರಿ 593.04 ಕೋಟಿ (593.04 crores) ಆಸ್ತಿ ಮೌಲ್ಯ ಘೋಷಿಸಿಕೊಂಡಿದ್ದಾರೆ. ರೂಪಾಯಿ ಆಸ್ತಿ 106.71 63 (106.71 crore) ರೂಪಾಯಿ ಚರಾಸ್ತಿ, 486.33 ಕೋಟಿ (486.33 crores) ರೂಪಾಯಿ ಸ್ಥಿರಾಸ್ತಿ ಇರುವುದಾಗಿ ಹೇಳಿದ್ದಾರೆ. ಇನ್ನು, ಡಿಕೆಸುರೇಶ್ ಬಳಿ ಇದೆ 21 ಕೃಷಿ ಭೂಮಿ, 27 ಕೃಷಿಯೇತರ ಭೂಮಿ ಕೂಡ ಇದೆ.

ಅಫಿಡವಿಟ್‌ನಲ್ಲಿ (Affidavit) ತಾವೊಬ್ಬ ಕೃಷಿಕ (Agriulturist), ಉದ್ಯಮಿ (Business man) ಹಾಗೂ ಸಾಮಾಜಿಕ ಕಾರ್ಯಕರ್ತ (Socialist) ಎಂದು ಡಿಕೆ ಸರೇಶ್ ತೋರಿಸಿಕೊಂಡಿದ್ದಾರೆ. ಇನ್ನು ಅವರ ಆದಾಯದ ಮೂಲವಾಗಿ ಬಾಡಿಗೆಯಿಂದ ಬರುವ ಹಣ, ತಮ್ಮ ವೇತನ, ಬಂಡವಾಳ ಗಳಿಕೆ, ಕೃಷಿ ಆದಾಯ ಹಾಗೂ ಬ್ಯಾಂಕ್ ಬಡ್ಡಿ ಸಹಿತ ಇತರ ಆದಾಯ ಸೇರಿರುವುದಾಗಿ ಲೆಕ್ಕ ತೋರಿಸಿದ್ದಾರೆ.
ಅಣ್ಣ ಡಿಕೆ ಶಿವಕುಮಾರ್‌ಗೆ (DK Shivakumar) 30 ಕೋಟಿ ರೂ. ಸಾಲ ನೀಡಿದ್ದು, ಕ್ವಾರಿ ಗುತ್ತಿಗೆಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ, .. ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಡಾ. ಸುಮಾ ರಂಘನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾಗಿ ಘೋಷಿಸಿಕೊಂಡಿದ್ದಾರೆ.

4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನವೂ ಅವರ ಬಳಿ ಇದ್ದು, ಇದರ ಮೌಲ್ಯ 23.45 ಲಕ್ಷ ರೂ. ಆಗಿದೆ. 73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳೂ ಅವರ ಮನೆಯಲ್ಲಿವೆ. ಆ ಮೂಲಕ ಕಳೆದ ಐದು ವರ್ಷದಲ್ಲಿ 259.19 ಕೋಟಿ ರೂಪಾಯಿ ಇವರ ಆಸ್ತಿ ಹಚ್ಚಳವಾಗಿಗೆ ಮತ್ತು 207 ಕೋಟಿ ಸಾಲ ತಮ್ಮ ಮೇಲಿದೆ ಎಂದು ತೋರಿಸಿಕೊಂಡಿದ್ದಾರೆ.