ರಾಜ್ಯ ರಾಜಕಾರಣದಲ್ಲಿ ರಾಜಕಾರಣಿಗಳು ವೈಯಕ್ತಿಕ ನಿಂದನೆ, ಸಿ.ಡಿ ಬಿಡುಗಡೆ ನಡೆಯುವುದು ಸಾಮಾನ್ಯ. ಆದರೆ ಇದೀಗ ಆಡಳಿತ ವಲಯದಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ IPS ಅಧಿಕಾರಿ ಡಿ.ರೂಪಾ ಗಂಭೀರ ಆರೋಪ ಮಾಡಿದ್ದಾರೆ. IAS ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ ಸುದ್ದಿಯಾಗಿದ್ದ IAS ಅಧಿಕಾರಿ ರೋಹಿಣಿ ಸಿಂಧೂರಿ, ಆ ಬಳಿಕ ಯಾವುದೇ ಹುದ್ದೆಗೆ ಹೋದಾಗಲೂ ತನ್ನದೇ ಆದ ವಿಚಾರಗಳಿಂದ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಹಾಸನ ಡಿಸಿ ಆಗಿದ್ದಾಗ, ವರ್ಗಾವಣೆ ವಿರುದ್ಧ ಸಿಡಿದೆದ್ದಿದ್ದ ರೋಹಿಣಿ ಸಿಂಧೂರಿ, ಆ ಬಳಿಕ ಮೈಸೂರಿನ ಜಿಲ್ಲಾಧಿಕಾರಿ ಆದಾಗಲು ಕೊರೊನಾ ಸಮಯದಲ್ಲಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿದ್ದರು. ಸರ್ಕಾರದ ಅನುಮತಿ ಪಡೆಯದೆ ಸ್ವಿಮ್ಮಿಂಗ್ ಪೂಲ್ ಮಾಡಿದ್ದು, ಬಟ್ಟೆ ಬ್ಯಾಗ್ಗೆ ಹತ್ತು ಪಟ್ಟು ಹೆಚ್ಚುವರಿ ಹಣ ಪಾವತಿಸಿದ್ದು, ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಮಾಡದೆ 32 ಜನರ ಸಾವಿಗೆ ಕಾರಣ ಆಗಿದ್ದು, ಈ ಎಲ್ಲಾ ವಿಚಾರಗಳಿಂದ ಸುದ್ದಿಯಾಗಿದ್ದ ರೋಹಿಣಿ ಸಿಂಧೂರಿ ಬಗ್ಗೆ ಇದೀಗ ನಡವಳಿಕೆ ಪ್ರಶ್ನಿಸಲಾಗಿದೆ. ಅದೂ ಕೂಡ ಓರ್ವ ಐಪಿಎಸ್ ಅಧಿಕಾರಿ ಡಿ ರೂಪಾ.
ರೂಪಾ ಆರೋಪದಲ್ಲಿ ವೈಯಕ್ತಿಕ ವಿಚಾರಕ್ಕೆ ಬೆಂಕಿ..!

ರೋಹಿಣಿ ಸಿಂಧೂರಿ ನಡಾವಳಿಗಳ ಬಗ್ಗೆ ಪ್ರಶ್ನೆ ಮಾಡಿರುವ ಡಿ. ರೂಪಾ. ರೋಹಿಣಿ ಸಿಂಧೂರಿಯಲ್ಲಿ ಮೌಲ್ಯಾಧಾರಿತ ಗುಣಗಳು ಇಲ್ಲ ಎಂದಿದ್ದಾರೆ. ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ಜೊತೆಗೆ ಮೂವರು ಪುರುಷ IAS ಅಧಿಕಾರಿಗಳಿಗೆ ವೈಯಕ್ತಿಕ ಫೋಟೋಗಳನ್ನು ಕಳುಹಿಸಿದ್ದಾರೆ. ತಮಿಳುನಾಡಿ ಐಪಿಎಸ್ ಅಧಿಕಾರಿ ಒಬ್ಬರು ಸೂಸೈಡ್ ಮಾಡಿಕೊಂಡರು. ಶಾಸಕ ಸಾ ರಾ ಮಹೇಶ್ ಜೊತೆಗೆ ಸಂಧಾನಕ್ಕೆ ಹೋಗಿದ್ದು ಯಾಕೆ..? ಎಂದು ಪ್ರಶ್ನಿಸಿರುವ ರೂಪಾ, ಸರ್ಕಾರದ ಮಟ್ಟದಲ್ಲಿ ಯಾವುದೇ ತನಿಖೆ ಮಾಡಿಸದೆ ಬಚಾವ್ ಆಗುವ ರೋಹಿಣಿ ಸಿಂಧೂರಿ ನಡೆತೆ ಎಂತಹದ್ದು ಎಂದು ಪ್ರಶ್ನಿಸಿದ್ದಾರೆ. ಮುಂದುವರಿದಂತೆ ಅನೇಕ ಸಂಸಾರಗಳನ್ನು ಮುರಿದಿರುವ ರೋಹಿಣಿ ಸಿಂಧೂರಿ ಬಗ್ಗೆ ಯಾವುದೇ ಮಮಕಾರ ಬೇಡ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಡಿ.ರೂಪಾ ಕೇವಲ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡದೆ ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಆದರೆ ಈ ಬಗ್ಗೆ ತನಿಖೆ ಆಗುತ್ತಾ..? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ರೂಪಾ ಹೇಳಿಕೆಗೆ ಮಾಧ್ಯಮ ಪ್ರಕಟಣೆಯಲ್ಲಿ ತಿರುಗೇಟು..!

D. ರೂಪಾ ನಡಾವಳಿ ಬಗ್ಗೆಯೇ ಪ್ರಶ್ನಿಸಿದ್ದಾರೆ. ನಡತೆ ಸರಿಯಿಲ್ಲ, ಸಂಸಾರವನ್ನೇ ಒಡೆದಿದ್ದಾರೆ ಎಂದಿದ್ದಾರೆ. ಆ ಬಳಿಕ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ವೈಯಕ್ತಿಕ ಹಗೆಯನ್ನ ಸಾಧಿಸಲು ಹೊರಡುವುದು ಸಮಾಜಕ್ಕೆ ಬಹಳಷ್ಟು ಅಪಾಯಕಾರಿ. ರೂಪಾ ಐಪಿಎಸ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನನ್ನ ಮೇಲೆ ವೈಯಕ್ತಿಕ ಹಗೆಯನ್ನ ಸಾಧಿಸಲು ಮಾನಸಿಕ ಸ್ಥಿಮಿತ ಕಳೆದುಕೊಂಡವರ ರೀತಿ ಮಾತನಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿದ್ದ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆರೋಪ ರಹಿತ ಆಧಾರ ರಹಿತ ಆರೋಪ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವುದನ್ನು ಡಿ ರೂಪಾ ಬಯಸುತ್ತಾರೆ. ನನ್ನ ಸಾಮಾಜಿಕ ಮಾಧ್ಯಮಗ ಹಾಗೂ ವಾಟ್ಸಾಪ್ ಸ್ಟೇಟಸ್‌ಗಳಿಂದ ಸ್ಕ್ರೀನ್ ಶಾಟ್ ತೆಗೆದುಕೊಂಡು ತೇಜೋವಧೆ ಮಾಡಲು ಬಳಸಿದ್ದಾರೆ. ನಾನು ಯಾವ ಅಧಿಕಾರಿಗೆ ಫೋಟೋ ಕಳುಹಿಸಿದ್ದೇನೆ ಎಂದು ಅಧಿಕಾರಿಗಳ ಹೆಸರನ್ನ ಬಹಿರಂಗಪಡಿಸಬೇಕು ಹಾಗೂ ಆ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಕಾನೂನು ಕ್ರಮದ ಬಗ್ಗೆಯೂ ತಿಳಿಸಿದ್ದಾರೆ.
ಇಬ್ಬರ ಜಗಳದ ನಡುವೆ ಕುಸುಮಾ ಆಕ್ರೋಶ..!

ರೋಹಿಣಿ ಸಿಂಧೂರಿ ಬಗ್ಗೆ ಪರೋಕ್ಷವಾಗಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕುಸುಮಾ ಹನುಮಂತರಾಯಪ್ಪ, ಕರ್ಮ ಯಾವಾಗಲು ತಿರುಗಿ ಬರುತ್ತದೆ. ಅತೀ ಶೀಘ್ರ ಅಥವಾ ತಡವಾಗಿಯಾದರೂ ಕರ್ಮ ಹಿಂಬಾಲಿಸುತ್ತದೆ ಎಂದಿದ್ದಾರೆ. ಅಂದರೆ ಡಿ.ಕೆ ರವಿ ಸಾವಿಗೆ ರೊಹಿಣಿ ಸಿಂಧೂರಿ ಕಾರಣ ಎನ್ನುವ ಹಾಗೆ ಬರೆದುಕೊಂಡಿದ್ದಾರೆ. ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಡಿ ರೂಪಾ, ನಾನು ಓರ್ವ ಹೆಣ್ಣಾಗಿ ನಿನ್ನ ನೋವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇನ್ನೂ ಹಲವು ಮಹಿಳೆಯರ ನೋವು ಕೂಡ ನನಗೆ ಅರ್ಥ ಆಗುತ್ತದೆ. ಆದರೆ ಅಸಹಾಯಕಳು ನಾನು. ಆದರೆ ಕೊನೆಯಲ್ಲಿ ಆಕೆ ಮಹಿಳೆ ಆಗಿದ್ದರೂ ಆಕೆಯ ವಿರುದ್ಧ ತಿರುಗಿ ಬೀಳ್ತಾರೆ. ಈ ರೀತಿ ಮಾಡುತ್ತಿರುವ ಅವಳಿಗೆ ದೇವರು ಸದ್ಬುದ್ಧಿ ನೀಡಲಿ, ಮತ್ತೆ ಪುನರಾವರ್ತನೆ ಆಗದಿರಲಿ ಎಂದು ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಇನ್ನು ರೂಪಾ ಅವರ ಪತಿ ಮೌದ್ಗಿಲ್ ಮೊಬೈಲ್ಗೆ ರೋಹಿಣಿ ಫೋಟೋಗಳು ಹೋಗಿವೆ ಎನ್ನುವ ಚರ್ಚೆಗಳು ಶುರುವಾಗಿದ್ದು, ಈ ಬಗ್ಗೆ ಉಭಯ ಅಧಿಕಾರಿಗಳೇ ಬಹಿರಂಗ ಮಾಡಬೇಕಿದೆ. ಆದರೂ ಆಡಳಿತ ವಿಭಾಗದ ಪ್ರಮುಖ ಹುದ್ದೆಗಳಾದ ಐಎಎಸ್ ಹಾಗು ಐಪಿಎಸ್ ಕಚ್ಚಾಟ ಸರ್ಕಾರಕ್ಕೆ ಮುಜುಗರ ಎನ್ನುವಂತಾಗಿದೆ.









