ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರಲಿ ಅಂತ ಕುಟುಂಬಸ್ಥರು, ಫ್ಯಾನ್ಸ್ ದೇವರ ಮೊರೆ ಹೋಗ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಕಲಾವಿದರು ದೇವರ ಮೊರೆ ಹೋಗುವ ನಿರ್ಧಾರ ಮಾಡಿದ್ದಾರೆ. ಕಲಾವಿದರ ಸಂಘದ ಅಧ್ಯಕ್ಷ ರಾಕ್ಲೈನ್ ವೆಂಕಟೇಶ್ ಹಾಗು ನಟ ದೊಡ್ಡಣ್ಣ ನೇತೃತ್ವದಲ್ಲಿ ಆಗಸ್ಟ್ 14ರಂದು ಕಲಾವಿದರ ಸಂಘದಲ್ಲಿ ವಿಶೇಷ ಹೋಮ – ಹವನ ಮಾಡಲು ಮುಂದಾಗಿದ್ದಾರೆ. ಇನ್ನು ಈ ಪೂಜೆಗೆ ನಟ ಶಿವರಾಜ್ಕುಮಾರ್, ಯಶ್, ಸುದೀಪ್, ಉಪೇಂದ್ರಗೂ ಆಹ್ವಾನ ಕೊಡಲಾಗಿದೆ.

ದರ್ಶನ್ ಅಂಡ್ ಗ್ಯಾಂಗ್ ಸಂಬಂಧಿಕರು ಹಾಗು ಆಪ್ತರು ಕೂಡ ಯಾವಾಗ ಬೇಲ್ ಸಿಗುತ್ತೆ..? ಯಾವಾಗ ಜೈಲಿನಿಂದ ಹೊರಕ್ಕೆ ಬರ್ತಾರೆ ಅನ್ನೋ ಚಿಂತೆಯಲ್ಲೇ ಮುಳುಗಿದ್ದು, ಜೈಲಿನಿಂದ ಬಿಡುಗಡೆಗಾಗಿ ಕುಟುಂಬಸ್ಥರು ಶಕ್ತಿದೇವತೆಗಳ ಮೊರೆಹೋಗಿದ್ದಾರೆ. ಕೊಲ್ಲೂರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಯಾಗ ಮಾಡಿಸಿದ ಬಳಿಕ ಪಟ್ಟಣಗೆರೆ ಶೆಡ್ನ ವಿನಯ್ ಸ್ನೇಹಿತರೂ ಕೂಡಾ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಹೊಸಕೋಟೆ ಬಳಿಯ ಕಂಬಳಿಪುರದ ಕಾಟೇರಮ್ಮನ ದೇವಿಗೆ ಮೊರೆ ಹೋಗಿದ್ದು, ವಿನಯ್ ಬೇಗನೆ ಬಿಡುಗಡೆ ಆಗುತ್ತಾನಾ..? ಬೇಲ್ ಸಿಗುತ್ತಾ ಅಂತಾ ಅಭಯ ಕೇಳಿದ್ದಾರೆ. ಇದೇ ವೇಳೆ ವಿನಯ್ ಸ್ನೇಹಿತರಿಗೆ ದೇವಿಯ ಅಭಯ ಸಿಕ್ಕಿದೆಯಂತೆ.

ರೇಣುಕಾಸ್ವಾಮಿ ಕೊಲೆ ನಡೆದ ದಿನ ನಟ ದರ್ಶನ್ ಧರಿಸಿದ್ದ ಟೀ ಶರ್ಟ್, ಪ್ಯಾಂಟ್ ಮೇಲೆ ರಕ್ತದ ಕಲೆ ಸಿಕ್ಕಿದ್ದು, ಎಷ್ಟು ಗಂಟೆಗೆ ರಕ್ತದ ಕಲೆ ಬಿದ್ದಿರಬಹುದು? ಬಟ್ಟೆ ಮೇಲೆ ಬೇರೆ ಯಾರ ರಕ್ತದ ಕಲೆ ಇದೆ..? ರಕ್ತ ಚಿಮ್ಮಿ ಬಿದ್ದಿರೋದಾ.. ಅಥವಾ ಕೇವಲ ರಕ್ತ ಅಂಟಿಕೊಂಡಿದ್ಯಾ..? ಅಂತೆಲ್ಲಾ ವರದಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ದರ್ಶನ್ ಕುರಿತ FSL ವರದಿ ಬಂದಿದ್ದು, ಸಣ್ಣ ಡೌಟ್ ಕೂಡ ಇರದಂತೆ 2ನೇ ಬಾರಿಗೆ FSLನಿಂದ Review ವರದಿ ಕೇಳಿದ್ದಾರೆ ಪೊಲೀಸರು. ಮೊದಲು FSL ವರದಿ ವಿಶ್ಲೇಷಣೆಗೆ ಪೊಲೀಸರು ಮುಂದಾಗಿದ್ದು, ಸಣ್ಣ ಪುಟ್ಟ ಡೌಟ್ಗಳನ್ನೂ ಕ್ಲಿಯರ್ ಮಾಡಿಕೊಳ್ಳಲು ಖಾಕಿಪಡೆ ಮುಂದಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬಗೆದಷ್ಟು ಸಾಕ್ಷ್ಯಗಳು ಸಿಗುತ್ತಿವೆ ಎನ್ನಲಾಗಿದೆ. ಕೊಲೆ ದಿನ ಬೈಕ್, ಕಾರುಗಳಲ್ಲಿ ಆರೋಪಿಗಳು ಓಡಾಡಿದ್ದಾರೆ. ಈಗಾಗಲೇ ಐದು ಬೈಕ್, ಮೂರು ಕಾರು, ಒಂದು ಆಟೋ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮಾಡ್ತಿದ್ದಾರೆ. ಕೃತ್ಯಕ್ಕೆ ಬಳಸಿದ ವಾಹನಗಳ ಸಾಮ್ಯತೆ ಪತ್ತೆ ಕಾರ್ಯ ಶುರುವಾಗಿದ್ದು, ವಾಹನಗಳ ಮಾಲೀಕತ್ವದ ಬಗ್ಗೆ ಪರಿಶೀಲನೆ ಮಾಡ್ತಿದ್ದಾರೆ. ಈಗಾಗಲೇ ಮನೆಯೂಟಕ್ಕೆ ಜೈಲು ಅಧಿಕಾರಿಗಳು ನೋ ಎಂದಿದ್ದು, ಹೈಕೋರ್ಟ್ನಲ್ಲಿ ಆಗಸ್ಟ್ 20ಕ್ಕೆ ಅರ್ಜಿ ವಿಚಾರಣೆ ಬರಲಿದೆ. ಕೊಲೆಯಾಗಿ ಗುರುವಾರಕ್ಕೆ ಎರಡು ತಿಂಗಳಾಗಿದ್ದು, ಬಂಧನ ಆಗಿ ಭಾನುವಾರಕ್ಕೆ 2 ತಿಂಗಳು ಆಗಲಿದೆ. ಆದರೆ ಸದ್ಯಕ್ಕೆ ರಿಲೀಫ್ ಸಿಗುವ ಯಾವುದೇ ಸುಳಿವು ಕೂಡ