ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಸದ್ಯ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ (Actor darshan) ಪತ್ನಿ ಮತ್ತು ಸಹೋದರ ಭೇಟಿಯಾಗಲು ಬಂದಾಗ, ಮೀಡಿಯಾ ಕ್ಯಾಮರಾಗಳಿಗೆ ದರ್ಶನ್ ಅಸಭ್ಯವಾಗಿ ಮಿಡ್ ಫಿಂಗರ್ ತೋರಿದ್ದರು ಎಂಬುದು ಬಾರಿ ಸುದ್ದಿಯಾಗಿತ್ತು. ಈಗ ಈ ಬಗ್ಗೆ ಡಿ ಕಂಪನಿ (D company) ಸ್ಪಷ್ಟನೆ ನೀಡಿದೆ.
ಈ ಬಗ್ಗೆ ದರ್ಶನ್ ಅಧಿಕೃತ ಅಭಿಮಾನಿ ಬಳಗ ಆಗಿರುವ ಡಿ ಕಂಪನಿ ಪೋಸ್ಟ್ ಒಂದನ್ನು ಹಾಕಿದೆ. ಮಾಧ್ಯಮಗಳು ವರದಿ ಮಾಡಿರುವಂತೆ ನಟ ದರ್ಶನ್ ಅಸಭ್ಯ ಕೈ ಸನ್ನೆ ಮಾಡಿಲ್ಲ. ದರ್ಶನ್ ವಿಘ್ನ ಹರ ಮುದ್ರ (Vighnesh hara mudra) ಹಿಡಿದು ಬಂದಿದ್ದಾರೆ ಎಂಬುದು ಅಭಿಮಾನಿಗಳ ಸಮಜಾಯಿಶಿ.
ಆದ್ರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social media) ಪರ-ವಿರೋಧದ ಚರ್ಚೆ ಜೋರಾಗಿದ್ದು, ಯೋಗ ಮುದ್ರಗಳಲ್ಲಿ ಈ ರೀತಿಯ ಮುದ್ರವೇ ಇಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ವಿಘ್ನ ಹರ ಮುದ್ರಾಗೆ ಸಂಬಂಧಪಟ್ಟ ವಿಡಿಯೋಗಳನ್ನ ಪೋಸ್ಟ್ ಮಾಡಿ ಸಮರ್ಥನೆಗೆ ನಿಂತಿದ್ದಾರೆ.