ಕಾಂಗ್ರೆಸ್ ಹಾಗು ಬಿಜೆಪಿ ನಾಯಕರ ನಡುವೆ ತೀವ್ರ ಗುದ್ದಾಟಕ್ಕೆ ಕಾರಣವಾಗಿರುವ ಸಾವರ್ಕರ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಸಾವರ್ಕರ್ ಹೇಡಿಯಾಗಿದ್ದರೆ ಸೆರೆವಾಸ ಅನುಭವಿಸುತ್ತಿರಲಿಲ್ಲ ಎಂದಿದ್ದಾರೆ.
ಅಂದಿನ ಕಾಲದಲ್ಲಿ ಸಾವರ್ಕರ್ ಬ್ರಿಟಷರಿಗೆ ಶರಣಾಗಿದ್ದರೆ ಆಗಿನ ಕಾಲದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಅದಲ್ಲದೆ ದೇಶಧ ಪ್ರಪಥಮ ಪ್ರಧಾನ ಮಂತ್ರಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾವರ್ಕರ್ ಒಬ್ಬ ಅಪ್ಪಟ ದೇಶಾಭಿಮಾನಿ ಅವರ ಬಗ್ಗೆ ಕೆಲವರು ಕೀಳಾಗಿ ಹೇಡಿ ಎಂದು ಮಾತನಾಡಿದ್ದಾರೆ ಅಂಥವರು ಒಮ್ಮೆ ಅವರ ಬಗ್ಗೆ ಅಧ್ಯಯನ ಮಾಡಲಿ. 1990ರಲ್ಲಿ ಬಿಜೆಪಿ ರಾಮ ಜನ್ಮ ಭೂಮಿ ಕುರಿತು ಜನಜಾಗೃತಿ ಶುರು ಮಾಡಿದಾಗ ಜಾತಿ ರಾಜಕಾರಣ ಮುನ್ನೆಲೆಗೆ ಬಂದಿತ್ತು ಆಗ ಹಿಂದುತ್ವ ರಾಜಕಾರಣ ಜನ್ಮತಾಳಿದ ಕಾರಣ ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಕಾರ್ಯ ಶುರುವಾಯಿತ್ತು ಎಂದು ಹೇಳಿದ್ದಾರೆ.

ಕಾಂತ್ರಿಕಾರಿಗಳು ಮುನ್ನೆಲೆಗೆ ಬಂದರೆ ತಮ್ಮ ಕೆಲಸ ಕಷ್ಟ ಸಾಧ್ಯ ಎಂದು ಅರಿತ ಕಾಂಗ್ರೆಸ್ ನಾಯಕರು ಬ್ರಿಟಿಷ್ ಸರ್ಕಾರದ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಹುಟ್ಟಿಕೊಂಡ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಆಗಿನ ಕಾಲದಲ್ಲಿ ಬ್ರಿಟಿಷರ ಅಧೀನದಲ್ಲಿದ್ದ ಪಕ್ಷ ಅರ್ಜಿ ನೀಡುವ ಸಂಘಟನೆಯಾಗಿ ಕಾಂಗ್ರೆಸ್ ಉಳಿದಿತ್ತು. ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದು ಸಂಘಪರಿವಾರದವರು ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾರೆ. ಆದರೆ, ದೋಷಾರೋಪ ಪಟ್ಟಿ ಮತ್ತೆ ನ್ಯಾಯಾಲಯದ ತೀರ್ಪಿನಲ್ಲಿ ಅದು ಯಾಕೆ ಉಲ್ಲೇಖವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಂದಿನ ಗಾಂಧಿ ಹತ್ಯೆ ಕುರಿತು ತನಿಖೆ ನಡೆಸಲು ಕಪೂರ್ ಕಮಿಷನ್ ನೇಮಕ ಮಾಡಿದ್ದು ನೆಹರೂ ನೇತೃತ್ವದ ಸರ್ಕಾರ ಅಂದಿನ ದಿನ ನಿಮ್ಮ ಬಳಿ ಸಾಕ್ಷಿ ಇದಿದ್ದರೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು ಅದನ್ನು ಬಿಟ್ಟು ಅಂದಿನಿಂದ ಇಂದಿನವರೆಗೆ ಸಂಘಪರಿವಾರ ಹಾಗೂ ಬಿಜೆಪಿಯವರ ಮೇಲೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲಿ ಎಂದು ಕಿಡಿಕಾರಿದ್ದಾರೆ.