ವಿಧಾನ ಪರಿಷತ್ ನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಧರ್ಮಸ್ಥಳಕ್ಕೆ (Dharmasthala) ಬಂದು ಆಣೆ ಪ್ರಮಾಣ ಮಾಡಲು ಸಿಟಿ ರವಿ (CT ravi) ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಆಹ್ವಾನಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ, ಸಿಟಿ ರವಿ ಪ್ರತಿಕ್ರಿಯಿದ್ದಾರೆ. ಈ ಬಗ್ಗೆ ದಿನಕ್ಕೊಂದು ಹೇಳಿಕೆ ಕೊಡೋರಿಗೆ ನಾನು ಪ್ರತಿಕ್ರಿಯೆ ಕೊಡಲು ಹೋಗಲ್ಲ ಎಂದಿದ್ದಾರೆ.
ಈ ಪ್ರಕರಣದ ತನಿಖೆ ಬಾಕಿ ಇದೆ.ಸರ್ಕಾರ ಸಿಓಡಿ ಗೆ (COD) ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ. ನ್ಯಾಯಲಯದಲ್ಲಿ ನ್ಯಾಯ ಸಿಗಲಿ ಅಮೇಲೆ ನೋಡೋಣ. ಇವರ ದೌರ್ಜನ್ಯ ಹೇಗಿದೆ ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಹೀಗಾಗಿ ಜನರೇ ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೆಸರಿನ ಮೇಲೆ ನಾನು ಬಿದ್ರು ನಾನೇ ಹೋಗಿ ಸ್ನಾನ ಮಾಡಬೇಕು, ಕೆಸರು ನನ್ನ ಮೇಲೆ ಬಿದ್ರೂ ನಾನೇ ಸ್ನಾನ ಮಾಡಬೇಕು. ಅದಷ್ಟು ಕೇಸರಿನಿಂದ ದೂರ ಇರು ಅಂತಾ ದೊಡ್ಡವರು ಹೇಳಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.