ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವಂತೆ ಅನೇಕ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ಧಾರೆ ಆದರೆ ಈ ಕುರಿತು ಹೇಳಿಕೆ ಕೊಡುವ ಬರದಲ್ಲಿ ಸಿಟಿ ರವಿ, ಕಾಂಗ್ರೆಸ್ ಅವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ತಮ್ಮನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಈ ಕುರಿತು ಪೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುಉ ಗಾಂಧಿನಗರದ ಶಾಸಕ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಸಿ.ಟಿ.ರವಿಯವರ ಹುಚ್ಚು ಅಂತಿಮ ಹಂತ ತಲುಪಿದೆ, BJP ವರಿಷ್ಠರು ಅವರಿಗೆ ಉತ್ತಮ ಪಶುವೈದ್ಯ ಚಿಕಿತ್ಸೆ ಕೊಡಿಸಲಿ ಎಂದು ಕುಟುಕಿದ್ದಾರೆ.
ದಿನೇಶ್ ಗುಂಡುರಾವ್ ಅವರ ಪೋಸ್ಟ್ ನಲ್ಲಿ, ಹುಚ್ಚುನಾಯಿ ಕಡಿತಕ್ಕೊಳಗಾದಂತೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿ.ಟಿ.ರವಿಯವರ ಹುಚ್ಚು ಅಂತಿಮ ಹಂತ ತಲುಪಿದೆ. ನಾಡಿನ ಹಿತದೃಷ್ಟಿಯಿಂದ BJP ವರಿಷ್ಠರು ಸಿ.ಟಿ.ರವಿಗೆ ಯಾವುದಾದರೂ ಉತ್ತಮ ಪಶುವೈದ್ಯ ಶಾಲೆಯಲ್ಲಿ ಚಿಕಿತ್ಸೆ ಕೊಡಿಸಲಿ. ಇಲ್ಲವೇ,ಮಲ್ಲೇಶ್ವರದ BJP ಕಚೇರಿಯನ್ನೇ ಹುಚ್ಚಾಸ್ಪತ್ರೆ ಮಾಡಲಿ. ಹೇಗಿದ್ದರೂ ಬಿಜೆಪಿಯೇ ಒಂದು ಹುಚ್ಚರ ಸಂತೆಯಲ್ಲವೇ.? ಎಂದು ಪ್ರಶ್ನಿಸಿದ್ದಾರೆ.
ನೆಹರು ಹಾಗೂ ಇಂದಿರಾ ಗಾಂಧಿಯವರ ಕಾಲಿನ ಧೂಳಿಗೂ ಸಮವಿಲ್ಲದ ಸಿ.ಟಿ.ರವಿ, ಆ ನಾಯಕರ ಬಗ್ಗೆ ಕೀಳಾಗಿ ಮಾತನಾಡುವುದು ಅವರ ಹೀನ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಕಚೇರಿಯನ್ನು ಹುಕ್ಕಾ ಬಾರ್ ಮಾಡಲು ಸಲಹೆ ಕೊಟ್ಟಿರುವ ಸಿ.ಟಿ.ರವಿ, ಕೇಶವ ಕೃಪಾ ಕಚೇರಿ ಯನ್ನು ‘ಡ್ಯಾನ್ಸ್ ಬಾರ್’ ಮಾಡಿ ಆಧುನಿಕ ‘ಬೃಹನ್ನಳೆ’ಯಂತೆ ನಾಟ್ಯ ಮಾಡುತ್ತಾರೆಯೇ.? ಎಂದು ಪ್ರಶ್ನಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು C.T.ರವಿ ಒಣ ಪೌರುಷ ತೋರಿಸುತ್ತಿದ್ದಾರೆ. ಬಿಜೆಪಿಯವಗೆ ಜನರಿಗೆ ಅನುಕೂಲವಾಗುವ ಒಂದೇ ಒಂದು ಯೋಜನೆ ತರುವ ಯೋಗ್ಯತೆಯಿಲ್ಲ. C.T.ರವಿಯವರಿಗೆ ತಾಕತ್ತಿದ್ದರೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಇನ್ನೊಂದು ಯೋಜನೆ ಜಾರಿ ಮಾಡಿಸಲಿ. ಆ ಯೋಜನೆಗೆ ‘ಗೂಡ್ಸೆ’ ಹೆಸರನ್ನು ಬೇಕಾದರೂ ಇಟ್ಟುಕೊಳ್ಳಲಿ. ಬೇಡ ಎನ್ನುವವರು ಯಾರು.? ಎಂದು ಪ್ರಶ್ನಿಸಿದ್ದಾರೆ.
ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್ ಖೇಲ್ರತ್ನ ಎಂದು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒತ್ತಾಯಿಸಿದ್ದರು. ಇಂದಿರಾ ಹೆಸರು ಬದಲು ಅನ್ನಪೂರ್ಣೇಶ್ವರಿ ಹೆಸರನ್ನು ಇಡುವಂತೆ ಆಗ್ರಹಿಸಿದ್ದು, ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್ಸಿಗರನ್ನು ಸಿ.ಟಿ.ರವಿ ಕೆರಳಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆಗೆಯಲಿ ಎಂದು ಸಿ.ಟಿ.ರವಿ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಅವರ ಖರ್ಚಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಈಗ ಇಂದಿರಾ ಕ್ಯಾಂಟೀನನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ. ನೆಹರು, ಇಂದಿರಾ ಗಾಂಧಿ ಒಳ್ಳೆಯ ಕೊಡುಗೆಗಳನ್ನು ನೆನೆಯೋಣ, ಆದ್ರೆ ಅವರು ಮಾಡಿದ ಎಲ್ಲವನ್ನೂ ಒಪ್ಪಿಕೊಳುವುದ್ದಕ್ಕೆ ನಾವೇನು ಗುಲಾಮರಲ್ಲ ಎಂದು ಕಿಡಿಕಾರಿದರು. ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಂಗಳನ್ನ ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ ಅವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ಎಂದು ನಾಲಗೆ ಹರಿಬಿಟ್ಟಿದ್ದರು.