
ಬೆಂಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ನಿನ್ನೆ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಅವರ ಹೆಸರು ಕೇಳಿ, ಅವರ ಮತಧರ್ಮ ಖಾತ್ರಿ ಪಡಿಸಿಕೊಂಡು ಉಗ್ರರು ಕೊಂದಿದ್ದಾರೆ. ಹಿಂದೂ ಧರ್ಮದವರನ್ನೇ ಗುರಿಯಾಗಿಸಿಕೊಂಡು ಅಥವಾ ಇಸ್ಲಾಮೇತರರನ್ನೇ ಗುರಿಯಾಗಿಟ್ಕೊಂಡು ಹತ್ಯೆ ಮಾಡಿದ್ದಾರೆ. ನೀನು ಯಾವ ಜಾತಿ, ಯಾವ ರಾಜ್ಯ ಅಂತ ಕೇಳಲಿಲ್ಲ. ನೀನು ಮುಸ್ಲಿಮೋ ಅಲ್ವೋ? ಮುಸ್ಲಿಮನಾಗಿದ್ರೆ ಕಲಿಮಾ ಓದು ಅಂತ ಹೇಳಿ ರಾಕ್ಷಸೀ ಪ್ರವೃತ್ತಿ ತೋರಿಸಿದ್ದಾರೆ. ಪತ್ನಿ ಎದುರು ಪತಿಯನ್ನ, ಮಕ್ಕಳೆದುರು ತಂದೆಯನ್ನ ಕೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಹಮದ್ ಘಜನಿ, ಘೋರಿ, ಖಲ್ಜಿ, ಔರಂಗಜೇಬ್, ಟಿಪ್ಪು ಸುಲ್ತಾನ್ ಇವರೆಲ್ಲ ರಾಜಕೀಯ ಸಾಮರ್ಥ್ಯದ ಮೇಲೆ ಭೀತಿ ಹುಟ್ಟಿಸುವಂತೆ ಹತ್ಯೆ ಮಾಡುವ ಕೆಲಸ ಮಾಡಿದ್ದಾರೆ. ಇವರೆಲ್ಲ ಸಾಮೂಹಿಕ ನರಮೇಧ, ಮತಾಂತರ ಮಾಡಿದ್ದಾರೆ, ಅದೆಲ್ಲ ಇತಿಹಾಸ. ಇವತ್ತಿನ ಹೇಡಿಗಳು ಅದನ್ನ ಮಾಡಕ್ಕಾಗಲ್ಲ ಅಂತ ಇಸ್ಲಾಮಿಕ್ ಟೆರರಿಸಂ ಮಾಡ್ತಿದ್ದಾರೆ. ಯಾವ ಧರ್ಮವನ್ನು ಅವಲಂಬಿಸಿ ಉಗ್ರರು ಪ್ರೇರಣೆ ಪಡೆದಿದ್ದಾರೋ ಆ ಧರ್ಮವನ್ನು ವಿಮರ್ಶೆಗೆ ಒಳಪಡಿಸುವ ಸಾಮರ್ಥ್ಯ ಉಲೇಮಾಗಳಿಗೆ ಇದೆಯಾ? ಎಂದು ಸವಾಲು ಹಾಕಿದ್ದಾರೆ. ಯಾವ ಆಧಾರದಲ್ಲಿ ಈ ಕೃತ್ಯ ಸಮರ್ಥಿಸಿಕೊಳ್ತೀರಿ..?ಗಂಭಿರವಾಗಿ ಆಲೋಚಿಸಿ ಸಲಹೆ ನೀಡಿದ್ದಾರೆ.
ನಾಲ್ಕು ಜನ ಭಯೋತ್ಪಾದಕರನ್ನು ಹುಡುಕಿ ಕೊಂದರೆ ರಕ್ತ ಬೀಜಾಸುರರು ನಿಲ್ಲಲ್ಲ. ಆ ರಕ್ತ ಬೀಜಾಸುರರು ಎಲ್ಲಿಂದ ಬರ್ತಿದ್ದಾರೆ, ಅದನ್ನ ಪತ್ತೆ ಮಾಡಿ ನಿಲ್ಲಿಸಬೇಕು. ಯಾವುದರಲ್ಲಿ ಅಸಹನೆ ಇದೆಯೋ ಅದನ್ನು ಕಿತ್ ಹಾಕಿ. ಭಗವದ್ಗೀತೆ, ವಚನಗಳಲ್ಲಿ ಅಸಹನೆ ಇದ್ರೆ ಕಿತ್ ಹಾಕಿ. ಹಾಗೆಯೇ ಕುರಾನ್ನಲ್ಲಿರುವ, ಬೈಬಲ್ನಲ್ಲಿರುವ ಅಸಹನೆ ಕಿತ್ ಹಾಕ್ತೀರಾ? ಎಂದು ಕೇಳಿದ್ದಾರೆ. ಒಂದು ವೇಳೆ ಹಾಗೆ ಮಾಡದೆ ಇದ್ದರೆ ಮತ್ತೆ ಮತ್ತೆ ರಕ್ತ ಬೀಜಾಸುರರು ಹುಟ್ತಾನೇ ಇರ್ತಾರೆ ಎಂದು ಎಚ್ಚರಿಸಿದ್ದಾರೆ.

ಇವತ್ತು ಪ್ರವಾಸಿಗರು, ಅದಕ್ಕೂ ಮುನ್ನ ಪುಲ್ವಾಮಾ ಸೈನಿಕರು, ಅದಕ್ಕೂ ಮುನ್ನ ಹತ್ತು ಹಲವು ಕೃತ್ಯಗಳು, ಅದಕ್ಕೂ ಮುನ್ನ ಶಿವಾಜಿ, ಸಂಭಾಜಿ ಇದೆಲ್ಲ ಯಾವಾಗ ನಿಲ್ಲುತ್ತದೆ..? ಇಸ್ಲಾಂ ಸ್ವೀಕರಿಸಿಲ್ಲ ಅನ್ನೋ ಒಂದೇ ಕಾರಣಕ್ಕೆ ಇದೆಲ್ಲ ನಡೀತಿದೆ. ಮಾನವೀಯವಲ್ಲದ ಮತಗ್ರಂಥಗಳನ್ನು ತಿರಸ್ಕರಿಸುವ ಕೆಲಸ ಎಲ್ಲ ಧರ್ಮದವ್ರೂ ಮಾಡಬೇಕು. ಅಲ್ಲೀವರೆಗೂ ಶಾಂತಿ ನಿಲ್ಲಲ್ಲ. ಪಹಲ್ಗಾಮ್ ಭಯೋತ್ಪಾದಕರಿಗೆ, ಕುಕರ್ ಬಾಂಬ್ ಬ್ಲಾಸ್ಟ್ ಮಾಡಿದವರಿಗೆ, ಶಿವಾಜಿ ಕೊಂದವರಿಗೆ ಒಂದೇ ಕಡೆಯಿಂದ ಪ್ರಚೋದನೆ ಬಂದಿದೆ. ಇವರೆಲ್ಲರೂ ಇಸ್ಲಾಂ ಒಪ್ಪಲಿಲ್ಲ ಅಂತ ಹತ್ಯೆ ಮಾಡಲಾಗಿದೆ ಎಂದಿದ್ದಾರೆ.

ಬಾಂಗ್ಲಾದಲ್ಲಿ ಭಯೋತ್ಪಾದನೆ ಮಾಡಿದವನಿಗೂ, ಪಹಲ್ಗಾಮ್ ಉಗ್ರರಿಗೂ, ಯಾಸೀನ್ ಭಟ್ಕಳ್ಗೂ ಒಂದೇ ಕಡೆಯಿಂದ ಪ್ರಚೋದನೆ ಬಂದಿದೆ. ಜಾತಿ ಜಾತಿ ಅನ್ನೋದನ್ನು ನೋಡೋದು ಈಗಲಾದರೂ ಬಿಡಿ. ಮೋದಿಯವರು ಇದ್ದಾಗಲೂ ಹೀಗೆ ಆಗಿದೆ, ಮೋದಿ ಇದ್ದಾಗಲೇ ಉಗ್ರರು ಈ ಧೈರ್ಯ ಮಾಡಿದೆಯಲ್ಲ ಅಂತ ದೇಶ ಯೋಚಿಸ್ತಿದೆ. ಸರ್ಜಿಕಲ್ ಸ್ಟ್ರೈಕೋ, ಯುದ್ಧವೋ ಒಟ್ನಲ್ಲಿ ಮಾಮವೀಯತೆ ಕಾಪಾಡುವ ಕೆಲಸ ಆಗಲಿ ಎಂದಿರುವ ಸಿ ಟಿ ರವಿ, ಭಯೋತ್ಪಾದಕರು ತಮ್ಮ ಮತಗ್ರಂಥಗಳಿಂದಲೇ ಪ್ರಚೋದನೆ ಸಿಗುತ್ತದೆ. ಸತ್ ಮೇಲೆ ಸ್ವರ್ಗದಲ್ಲಿ 72 ಅದೆಂಥವರೋ ಸಿಗ್ತಾರಂತೆ, ಅದಕ್ಕಾಗಿ ಈ ಬೇವರ್ಸಿಗಳು ಉಗ್ರರು ಈ ಕೃತ್ಯಗಳನ್ನು ನಡೆಸ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಭದ್ರತಾ ವೈಫಲ್ಯ ಅನ್ನೋ ಕಾಂಗ್ರೆಸ್ನವ್ರ ಆರೋಪಕ್ಕೆ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಮಯದಲ್ಲಿ ರಾಜಕೀಯ ಮಾಡೋದು ಕಾಂಗ್ರೆಸ್ನ ಹೀನ ಮನಸ್ಥಿತಿ. ಅಯೋಗ್ಯ ಕಾಂಗ್ರೆಸ್ನವ್ರು ಇದ್ದಾಗ ಅಹಮದಾಬಾದ್, ದೆಹಲಿ, ಮುಂಬೈನಲ್ಲಿ ದಿನಬೆಳಗಾದರೆ ಬಾಂಬ್ ಸ್ಫೋಟ್ ಆಗ್ತಿತ್ತು. ಆರು ವರ್ಷಗಳ ನಂತರ ಕಾಶ್ಮೀರದಲ್ಲಿ ನಡೆದ ಉಗ್ರರ ದೊಡ್ಡ ಪ್ರಮಾಣದ ದಾಳಿ ಆಗಿದೆ. ಇದಕ್ಕೂ ಮುನ್ನ ಹಲವು ಉಗ್ರರನ್ನ ಯಮಪುರಿಗೆ ಕಳಿಸಿದೀವಿ. ಆಧೈರ್ಯ ಕಾಂಗ್ರೆಸ್ನವ್ರಿಗೆ ಇದೆಯಾ? ಮತ ಧರ್ಮಗಳನ್ನು, ಮತ ಗ್ರಂಥಗಳನ್ನು ವಿಮರ್ಶೆಗೆ ಒಳಪಡಿಸುವ ಧೈರ್ಯ ಈ ಕಾಂಗ್ರೆಸ್ನವ್ರಿಗೆ ಇದೆಯಾ? ಎಂದು ನೇರ ಸವಾಲು ಹಾಕಿದ್ದಾರೆ.