ತಮ್ಮ ಬಂಧನದ ವಿಚಾರವಾಗಿ ಮಾತನಾಡಿದ ಸಿಟಿ ರವಿ (CT Ravi),ಒಂದು ರೀತಿ ನಮ್ಮ ಪಕ್ಷವನ್ನ ಒಟ್ಟು ಮಾಡೋಕು ಈ ಘಟನೆ ಕಾರಣವಾಯ್ತು ಎಂದು ಹೇಳಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಪಕ್ಷದ ಮುಖಂಡರು,ರಾಜ್ಯಧ್ಯಕ್ಷರು, ವಿಪಕ್ಷ ನಾಯಕರು, ಪಕ್ಷದ ಮುಖಂಡರು, ಸಂಸತ್ ಸದಸ್ಯರು ಎಲ್ಲರು ಒಂದಾಗಿ ಪ್ರತಿಕ್ರಿಯೆ ನೀಡಿದ್ರು ಎಂದು ರವಿ ಹೇಳಿದ್ದಾರೆ.
ಈ ರೀತಿ ನಾವೆಲ್ಲ ಒಟ್ಟಾಗಲಿ ಅಂತಾನೇ ಈ ದೌರ್ಜನ್ಯ ಮಾಡೋಕೆ ಬಿಟ್ಟಿರಬಹುದೇನೋ,ಹೆದರಿ ನಾನು ಮನೆಯಲ್ಲಿ ಕೂರುವವನಲ್ಲ. ತಮ್ಮ ತಪ್ಪನ್ನ ಮುಚ್ಚಿ ಇನ್ನೊಬ್ಬರನ್ನ ಮೇಲೆ ಅಪವಾದ ಹೊರಿಸುತ್ತಾರೆ ಅನ್ನೋದನ್ನ ಈ ಘಟನೆ ನೋಡಿ ಕಲಿತೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಿಂದ (Congress)ಅಧಿಕಾರವನ್ನ ಹೇಗೆ ಚಕಾಯಿಸಬೇಕು ಅನ್ನೋದನ್ನ ನೋಡಿ ಕಲಿಯಬೇಕು.ನಮ್ಮ ಪಾರ್ಟಿ ಅಧಿಕಾರದಲ್ಲಿದ್ದಾಗಲೂ ಹಲವು ಕಾಂಗ್ರೆಸ್ಸಿಗರು ಫಲಾನುಭವಿಗಳಾಗಿದ್ದರು.ಈಗ ಅವರು ನಮ್ಮನ್ನ ಹೇಗೆ ನೋಡಿಕೊಳ್ತಾರೆ ಅನ್ನೋದನ್ನ ನೋಡಿ ಕಲಿಯಬೇಕಿದೆ ಎಂದು ಸಿ.ಟಿ ರವಿ ಹೇಳಿದ್ದಾರೆ.