
ಕ್ರೂರಿ ಶಿಕ್ಷಕನೋರ್ವ ವಿದ್ಯಾರ್ಥಿ ತಲೆಯನ್ನು ಗೋಡೆಗೆ ಬಡಿದು ಮನಬಂದಂತೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ವಿದ್ಯಾರ್ಥಿಯೊಬ್ಬನನ್ನು ಸಹಪಾಠಿಗಳ ಮುಂದೆಯೇ ಶಿಕ್ಷಕನೊಬ್ಬ ಥಳಿಸಿದ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ.
અમદાવાદની એક ખાનગી શાળાના CCTV વાયરલ થઈ રહ્યા છે..
— Dhaval Godhaniya (@Dhaval___007) October 1, 2024
.
.#school #student #Ahmedabad pic.twitter.com/8CQoaqIq6J
ವಾಟ್ವಾದ ಮಾಧವ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತರಗತಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಗಣಿತ ಶಿಕ್ಷಕ ಅಭಿಷೇಕ್ ಪಟೇಲ್ ಅವರನ್ನು ವಶಕ್ಕೆ ಪಡೆದು ಅಮಾನತುಗೊಳಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಪಟೇಲ್ ವಿದ್ಯಾರ್ಥಿಯ ಕೂದಲನ್ನು ಹಿಡಿದು ಎಳೆಯುವುದನ್ನು ಕಾಣಬಹುದು. ಮತ್ತು ವಿದ್ಯಾರ್ಥಿಯನ್ನು ತರಗತಿಯ ಇನ್ನೊಂದು ಬದಿಯ ಗೋಡೆಗೆ ಹೊಡೆಯುವ ಮೊದಲು ಅವನ ಕೂದಲನ್ನು ಹಿಡಿದು ಎಳೆಯುತ್ತಾರೆ. ಬಾಲಕನನ್ನು ನೆಲಕ್ಕೆ ತಳ್ಳುವ ಮೊದಲು ಶಿಕ್ಷಕನು ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ತುಣುಕು ತೋರಿಸುತ್ತದೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.