• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಶೀಲ್ಡ್ ಗೆ ಸಿಕ್ಕಿತು ಎಫ್ ಡಿಎ ಮಾನ್ಯತೆ: ಕೊವಾಕ್ಸಿನ್ ಕಥೆ ಏನು?

ರಾಜರಾಮ್ ತಲ್ಲೂರ್ by ರಾಜರಾಮ್ ತಲ್ಲೂರ್
July 2, 2021
in ದೇಶ
0
ಕೋವಿಶೀಲ್ಡ್ ಗೆ ಸಿಕ್ಕಿತು ಎಫ್ ಡಿಎ ಮಾನ್ಯತೆ: ಕೊವಾಕ್ಸಿನ್ ಕಥೆ ಏನು?
Share on WhatsAppShare on FacebookShare on Telegram

ಭಾರತದ್ದೇ ಸ್ವಂತ ಲಸಿಕೆ “ಕೊವ್ಯಾಕ್ಸೀನ್” ಕುರಿತು ಈಗ ನೀರವ ಮೌನ ಯಾಕೆ ಅಚ್ಚರಿ ತರಿಸುತ್ತಿಲ್ಲ?
ಆಕ್ಸ್‌ಫರ್ಡ್ ವಿವಿ ಸಂಶೋಧಿಸಿದ ಕೋವಿಶೀಲ್ಡ್‌ಗೆ FDA ಲಸಿಕೆ ಪಾಸ್‌ಪೋರ್ಟ್ ಸಿಕ್ಕಿತು. ಭಾರತದ ಭಾರತ್ ಬಯೋಟೆಕ್ ಸಂಶೋಧಿಸಿದ “ಕೊವ್ಯಾಕ್ಸೀನ್”ಗೆ ಯಾಕಿಲ್ಲ? ನಮ್ಮ ಕನ್ನಡದ ಮಾಧ್ಯಮಗಳಿಗಾಗಲೀ, ಜನಸಾಮಾನ್ಯರಿಗಾಗಲೀ ಈ ಪ್ರಶ್ನೆಗಳು ಯಾಕೆ ಏಳುತ್ತಿಲ್ಲ? ಎದ್ದರೂ ಬಾಯಿ ಬಿಡುತ್ತಿಲ್ಲ ಏಕೆ?

ADVERTISEMENT

ಇಲ್ಲಿಯ ತನಕ ಅಂದಾಜು ಎರಡು ಕೋಟಿ ಲಸಿಕೆಯನ್ನು ಸಂಸ್ಥೆಯ ಸರ್ಕಾರಕ್ಕೆ ಒದಗಿಸಿದ್ದು, ಅವುಗಳಲ್ಲಿ ಎಷ್ಟು ಬಳಕೆ ಆಗಿದೆ ಎಂಬುದು ಸ್ಪಷ್ಟವಿಲ್ಲ. ಈ ಕೊವ್ಯಾಕ್ಸೀನ್ ಲಸಿಕೆ ಪಡೆದವರು ಈಗ ವಿದೇಶಕ್ಕೆ ಹೋಗಬೇಕೆಂದಾದರೆ ಅವರ ಕತೆ ಏನು? ಅವರು ಮತ್ತೆ ಕೋವಿಶೀಲ್ಡ್ ತೆಗೆದುಕೊಳ್ಳಬೇಕೇ? ಯಾವುದೂ ಸ್ಪಷ್ಟ ಇಲ್ಲ. ಗಟ್ಟಿ ಹೇಳಬೇಕೆಂದರೆ “ಕೊವ್ಯಾಕ್ಸೀನ್” ಕುರಿತು ಮಾತನಾಡಬೇಕಾದವರು ಯಾರೂ ಮಾತನಾಡುತ್ತಿಲ್ಲ… ನಿಗೂಢ ಮೌನ! ಯಾಕೆ?

ಏನಾಗಿತ್ತು?

2021 ಜನವರಿಯಲ್ಲಿ ಆಗಿನ್ನೂ ಎರಡನೇ ಹಂತದ ಸಂಶೋಧನೆಯಲ್ಲಿದ್ದ “ಕೊವ್ಯಾಕ್ಸೀನ್” ಲಸಿಕೆಯನ್ನು ಭಾರತ ಸರ್ಕಾರ (DCGI) “ಗಂಭೀರ ಸನ್ನಿವೇಶದಲ್ಲಿ ಜೀವಗಳನ್ನುಳಿಸುವ ಕಾರಣಕ್ಕೆ” ತುರ್ತು ಬಳಕೆಗಾಗಿ ಅನುಮೋದನೆ ನೀಡಿದಾಗಲೇ, ಸಂಶೋಧನಾ ಪ್ರಕ್ರಿಯೆ ಪೂರ್ಣಗೊಳ್ಳದೇ ಗಡಿಬಿಡಿ ಮಾಡಲಾಗಿದೆ ಎಂದು ಹಲವು ಹುಬ್ಬುಗಳು ಮೇಲೇರಿದ್ದವು. ಸರ್ಕಾರ ಅದನ್ನೆಲ್ಲ ನಿರ್ಲಕ್ಷಿಸಿ, ಈ ವ್ಯಾಕ್ಸೀನ್ 81% ಪರಿಣಾಮಕಾರಿ ಎಂದು ಘೋಷಿಸಿ, ಆತ್ಮನಿರ್ಭರ ಲಸಿಕೆಯ ಟೀಕಾ ಉತ್ಸವಕ್ಕೆ ಕರೆ ನೀಡಿತ್ತು. ಲಕ್ಷಾಂತರ ಮಂದಿ ಕೊವ್ಯಾಕ್ಸೀನ್ ಪಡೆದರು.

ಆದರೆ, ಯಾವಾಗ ಜಾಗತಿಕವಾಗಿ ಮಾನ್ಯತೆ ಪಡೆದ (ಅಂದರೆ 60 ದೇಶಗಳಲ್ಲಿ ಬಳಕೆಗೆ ಈ ಮಾನ್ಯತೆ ಅಗತ್ಯ) ಅಮೆರಿಕದ FDA ಎದುರು ಈ ಲಸಿಕೆಯನ್ನು “ತುರ್ತು ಬಳಕೆಗೆ ಅನುಮೋದನೆಗಾಗಿ” ಇರಿಸಿ, FDA ಅದನ್ನು ಅಗತ್ಯ ದತ್ತಾಂಶಗಳಿಲ್ಲ ಎಂಬ ಕಾರಣಕ್ಕಾಗಿ ನಿರಾಕರಿಸಿತೋ, ಅಲ್ಲಿಂದೀಚೆಗೆ ಎಲ್ಲ ಕಡೆ ಕೊವ್ಯಾಕ್ಸೀನ್ ಬಗ್ಗೆ ನಿಗೂಢ ಮೌನ ಆವರಿಸಿದೆ. ಅದನ್ನು ಪಡೆದವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಭಾರತ್ ಬಯೋಟೆಕ್, ಈಗ ತನ್ನ ಮೂರನೇ-ನಾಲ್ಕನೇ ಹಂತದ ಸಂಶೋಧನೆಯ ವಿವರಗಳನ್ನು FDAಗೆ ಒದಗಿಸುವ ಪ್ರಕ್ರಿಯೆಯಲ್ಲಿದೆ. ಈ ಕೆಲಸವನ್ನು ಅವರ ಅಮೆರಿಕನ್ ಪಾಲುದಾರ ಸಂಸ್ಥೆ ಒಕ್ಯುಜೆನ್ ನಿರ್ವಹಿಸುತ್ತಿದೆ. ಜುಲೈ ತಿಂಗಳಲ್ಲಿ ಈ ಸಂಶೋಧನಾ ಡೇಟಾಗಳನ್ನು FDAಗೆ ಸಲ್ಲಿಸುವುದಾಗಿ ಮತ್ತು ವೈಜ್ಞಾನಿಕ ಜರ್ನಲ್‌ಗಳಲ್ಲಿ ವಿಮರ್ಶೆಗೆ ಬಹಿರಂಗಪಡಿಸುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಈ ಹಂತದಲ್ಲಿ ಲಸಿಕೆ 78% ಪರಿಣಾಮಕಾರಿ ಎಂದು ಅದು ಹೇಳಿಕೊಂಡಿದೆ. ಈ ಪ್ರಕ್ರಿಯೆ ಮುಗಿದು, FDA ಅನುಮೋದನೆ ಸಿಗುವ ತನಕ ಕೊವ್ಯಾಕ್ಸೀನ್ ಪಡೆದವರಿಗೆ 60 ಪ್ರಮುಖ ದೇಶಗಳ ವ್ಯಾಕ್ಸೀನ್ ಪಾಸ್‌ಪೋರ್ಟ್ ಇಲ್ಲ. ಪಿಲಿಫೈನ್ಸ್, ಇರಾನ್, ನೇಪಾಳ, ಗಯಾನ, ಪರುಗ್ವೆ, ಮೆಕ್ಸಿಕೊದಂತಹ 16 ಸಣ್ಣಪುಟ್ಟ-ಬಡ ದೇಶಗಳು ವ್ಯಾಕ್ಸೀನ್ ಮಾರುಕಟ್ಟೆಯ ಪರಿಸ್ಥಿತಿ ಮತ್ತು ವೈಯಕ್ತಿಕ ನೆಲೆಯಲ್ಲಿ ಈ ವ್ಯಾಕ್ಸೀನಿಗೆ ಅನುಮತಿ ನೀಡಿವೆ.

ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸದೇ ಮಾಡಿಕೊಂಡ ಈ ಸರ್ಕಾರಿ ಗಡಿಬಿಡಿ, ಈಗ ಸದ್ಯಕ್ಕೆ, ಉಗುಳಲೂ ಆಗದ ನುಂಗಲೂ ಆಗದ ತುತ್ತಾಗಿ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಂತಿದೆ. ಹೆಚ್ಚಿನಂಶ ಸೆಪ್ಟಂಬರ್ ಹೊತ್ತಿಗೆ ಇದು ಉಗುಳುವುದೋ-ನುಂಗುವುದೋ ನಿರ್ಧಾರ ಆದೀತು.

Previous Post

ಕೆಲಸ ಕೊಡಿಸುವುದಾಗಿ ಹಣ ವಸೂಲಿ: ಚರ್ಚೆಗೆ ಗ್ರಾಸವಾದ ರಾಮುಲು ಪಿಎ ಬಂಧನ-ಬಿಡುಗಡೆ.! ಇಲ್ಲಿದೆ ಸಂಪೂರ್ಣ ಸುದ್ದಿ

Next Post

GST ಪರಿಹಾರ ನೀಡದ ಕೇಂದ್ರ ಸರ್ಕಾರ, ರಾಜ್ಯಗಳ ನೋವಿನ ಮೇಲೆ ಸಂಭ್ರಮಿಸುತ್ತಿದೆ – ಹೆಚ್ ಡಿ ಕುಮಾರಸ್ವಾಮಿ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
GST ಪರಿಹಾರ ನೀಡದ ಕೇಂದ್ರ ಸರ್ಕಾರ, ರಾಜ್ಯಗಳ ನೋವಿನ ಮೇಲೆ ಸಂಭ್ರಮಿಸುತ್ತಿದೆ – ಹೆಚ್ ಡಿ ಕುಮಾರಸ್ವಾಮಿ

GST ಪರಿಹಾರ ನೀಡದ ಕೇಂದ್ರ ಸರ್ಕಾರ, ರಾಜ್ಯಗಳ ನೋವಿನ ಮೇಲೆ ಸಂಭ್ರಮಿಸುತ್ತಿದೆ – ಹೆಚ್ ಡಿ ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada