ಏಪ್ರಿಲ್ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಪಡೆಯಬಹುದು ಎಂದು ಕೇಂದ್ರ ಸರಕಾರ ಪ್ರಕಟಿಸಿದ ಬೆನ್ನಲ್ಲೇ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಪ್ರತಿ ಡೋಸ್ ಗೆ ತೆರಿಗೆ ಹೊರತುಪಡಿಸಿ ೬೦೦ ರೂ. ನಿಗದಿಪಡಿಸಿದೆ.
ಕೇಂದ್ರ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ನೀಡಲು ನಿರ್ಧರಿಸಿರುವುದಕ್ಕೆ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕೋವಿಡ್ ಲಸಿಕೆ ಪೂರೈಸುತ್ತಿರುವ ಸೆರಮ್ ಇನ್ಸಿಟಿಟ್ಯೂಟ್ ಕೋವಿಶೀಲ್ಡ್ ಗೆ ೬೦೦ ರೂ. ಹಾಗೂ ಕೋವ್ಯಾಕ್ಸಿನ್ ಗೆ ೯೦೦ ರೂ. ನಿಗದಿಪಡಿಸಲಾಗಿದ್ದು, ತೆರಿಗೆ ಮೊತ್ತ ಸೇರಿದರೆ ಇದರ ಮೊತ್ತ ಹೆಚ್ಚಳವಾಗಲಿದೆ.