• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಆಮ್ಲಜನಕ ಹಾಹಾಕಾರ: ಸರ್ಕಾರಕ್ಕೆ ಮುಂಗಡ ಬುಕಿಂಗ್ ದಂಧೆಯೇ ಆದ್ಯತೆಯಾಯಿತೆ..?

Shivakumar by Shivakumar
May 4, 2021
in ಕರ್ನಾಟಕ
0
ಆಮ್ಲಜನಕ ಹಾಹಾಕಾರ: ಸರ್ಕಾರಕ್ಕೆ ಮುಂಗಡ ಬುಕಿಂಗ್ ದಂಧೆಯೇ ಆದ್ಯತೆಯಾಯಿತೆ..?
Share on WhatsAppShare on FacebookShare on Telegram

ಆಮ್ಲಜನಕದ ಕೊರತೆಯಿಂದಾಗಿ ಚಾಮರಾಜನಗರದಿಂದ ಕಲ್ಬುರ್ಗಿಯವರೆಗೆ ಸಾವಿನ ಸರಣಿ ಮುಂದುವರಿದಿದೆ. ಇಡೀ ಕರ್ನಾಟಕವೇ ಪ್ರಾಣವಾಯು ಸಿಗದೇ ಉಸಿರುಗಟ್ಟುತ್ತಿದೆ.

ADVERTISEMENT

ಒಂದು ಕಡೆ ಜನಸಾಮಾನ್ಯರು ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾಮೂಹಿಕವಾಗಿ ಜೀವ ಬಿಡುತ್ತಿದ್ದರೆ, ಮತ್ತೊಂದು ಕಡೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಪ್ರಭಾವಿಗಳು ಮುಂಗಡವಾಗಿ ಭಾರೀ ಹಣ ತೆತ್ತು ಆಸ್ಪತ್ರೆ ಹಾಸಿಗೆ, ಆಮ್ಲಜನಕ, ಔಷಧಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಇಂತಹ ದಂಧೆಗೆ ಸ್ವತಃ ಆರೋಗ್ಯ ಸಚಿವರು ಸೇರಿದಂತೆ ರಾಜ್ಯದ ಹಲವು ಪ್ರಭಾವಿ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳೇ ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. ಸಚಿವರು, ಉನ್ನತ ಅಧಿಕಾರಿಗಳು ಸಂಬಂಧಿಗಳು, ಆಪ್ತರು ಕರೋನಾ ಸೋಂಕಿಲ್ಲದೆಯೂ ಮುಂಗಡವಾಗಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಿಲಿಂಡರ್ ಸಹಿತ ಎಲ್ಲವನ್ನೂ ಬುಕಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಸ್ವತಃ ಆಡಳಿತಪಕ್ಷದ ನಾಯಕರೇ ಆಡುತ್ತಿದ್ದಾರೆ.

ಬೆಂಗಳೂರಿನಲ್ಲಂತೂ ಹಾಸಿಗೆ, ಆಮ್ಲಜನಕ, ರೆಮಿಡಿಸಿವರ್ ಔಷಧಗಳ ಮುಂಗಡ ಬುಕಿಂಗ್ ದಂಧೆಯ ಬಹುದೊಡ್ಡ ಮಾಫಿಯಾವೇ ಕೆಲಸ ಮಾಡುತ್ತಿದ್ದು, ಅ ಮಾಫಿಯಾದ ಹಿಂದೆ ಸರ್ಕಾರದ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕೈವಾಡವಿದೆ ಎಂಬುದನ್ನು ಮಾಧ್ಯಮ ವರದಿಗಳು ಬಿಚ್ಚಿಡುತ್ತಿವೆ. ಅದಕ್ಕೆ ಪೂರಕವಾಗಿ ಮಂಗಳವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಇಂತಹ ದಂಧೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಗೆ ತಕ್ಕಷ್ಟು ಆಮ್ಲಜನಕವನ್ನು ಒದಗಿಸದೇ, ಬೇರೆಲ್ಲಾ ವಿಷಯದಲ್ಲಿ ಕರ್ನಾಟಕದ ವಿಷಯದಲ್ಲಿ ಅನುಸರಿಸಿದಂತೆಯೇ ಈ ವಿಷಯದಲ್ಲಿ ಕೂಡ ಮಲತಾಯಿ ಧೋರಣೆಯನ್ನು ಮುಂದುವರಿಸಿದೆ. ರಾಜ್ಯದಲ್ಲಿಯೇ ಉತ್ಪಾದನೆಯಾಗುವ 1,043 ಟನ್ ಆಮ್ಲಜನಕದ ಪೈಕಿ ಕೇವಲ 675 ಟನ್ ಮಾತ್ರ ಬಳಕೆಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ ಉಳಿದದ್ದನ್ನು ಕರ್ನಾಟಕಕ್ಕಿಂತ ಕಡಿಮೆ ಪ್ರಕರಣಗಳಿರುವ ತೆಲಂಗಾಣ, ಆಂಧ್ರಪ್ರದೇಶಗಳಿಗೆ ಕಳಿಸುತ್ತಿದೆ. ಕರ್ನಾಟಕ ತನ್ನ ಕೊರತೆ ನೀಗಲು 130 ಟನ್ ಆಮ್ಲಜನಕವನ್ನು ದೂರದ ಒಡಿಶಾ ಮತ್ತು ಆಂಧ್ರದಿಂದ ತರಿಸಿಕೊಳ್ಳುತ್ತಿದೆ. ಅಷ್ಟಾಗಿಯೂ ರಾಜ್ಯದ ಬೇಡಿಕೆಯಾದ ಒಟ್ಟು 1162 ಟನ್ ಬದಲಿಗೆ ಸದ್ಯ ಲಭ್ಯವಿರುವುದು 800 ಟನ್ ಮಾತ್ರ. ಅಂದರೆ, ರಾಜ್ಯಕ್ಕೆ ಸದ್ಯದ ಸ್ಥಿತಿಯಲ್ಲಿಯೇ 362 ಟನ್ ಆಮ್ಲಜನಕದ ಕೊರತೆ ಇದೆ. ಜೊತೆಗೆ ದಿನದಿಂದ ಗಂಭೀರ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಕೋವಿಡ್ ರೋಗಿಗಳ ಮಾರಣ ಹೋಮವೇ ನಡೆಯಬಹುದು ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಕೂಡ ಸಂಪೂರ್ಣವಾಗಿ ನಮ್ಮ ಅಗತ್ಯಕ್ಕೆ ತಕ್ಕಷ್ಟು ಬಳಸಲು ಕೇಂದ್ರ ಸರ್ಕಾರ ನಮಗೆ ಅನುಮತಿ ನೀಡಿಲ್ಲ. ಕೇಂದ್ರ ಅಷ್ಟು ಮಾಡಿದರೂ ರಾಜ್ಯದ ಸಾಕಷ್ಟು ಆಮ್ಲಜನಕದ ಬೇಡಿಕೆ ನೀಗುತ್ತದೆ ಎಂದು ಸ್ವತಃ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. ಇದು ರಾಜ್ಯ ಸರ್ಕಾರದ ಅಸಾಹಯಕತೆ. ಅದರಲ್ಲೂ ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ನಮ್ಮದೇ ಸರ್ಕಾರವಿದ್ದರೆ, ಡಬ್ಬಲ್ ಎಂಜಿನ್ ಸರ್ಕಾರವಾಗಲಿದೆ. ಸ್ವರ್ಗವೇ ಧರೆಗಿಳಿಯಲಿದೆ ಎಂದಿದ್ದ ಬಿಜೆಪಿಯ, ಅರ್ಥದಲ್ಲಿ ಸ್ವರ್ಗವೆಂದರೆ, ಸ್ವರ್ಗಸ್ತರಾಗುವುದೇ ಎಂಬುದನ್ನು ಈ ಆಮ್ಜಜನಕದ ಅನ್ಯಾಯ ಸಾರಿ ಹೇಳುತ್ತಿದೆ.

ಇಂತಹ ಸ್ಥಿತಿಯಲ್ಲಿಯೂ ಆಮ್ಲಜನಕ ಸೇರಿದಂತೆ ಆಸ್ಪತ್ರೆ ಹಾಸಿಗೆಗಳ ಮುಂಗಡ ಬುಕಿಂಗ್ ನಂತಹ ಹೇಯ ದಂಧೆಗೆ ಸರ್ಕಾರದ ಆಯಕಟ್ಟಿನ ಸಚಿವರು ಮತ್ತು ಅಧಿಕಾರಿಗಳೇ ಕಿಂಗ್ ಪಿನ್ ಆಗಿರುವುದು ಬಿಜೆಪಿ ಸರ್ಕಾರ ಯಾರ ಪರ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಿದರ್ಶನ.

ಒಂದು ಕಡೆ, ಆಮ್ಲಜನಕ ಸಿಗದೆ ಸರ್ಕಾರ ಮತ್ತು ಅಧಿಕಾರಿಗಳ ಹೊಣೆಗೇಡಿತನಕ್ಕೆ ಸಾಲುಸಾಲು ಜೀವಗಳು ಬಲಿಯಾಗುತ್ತಿದ್ದರೆ, ಆ ಕುರಿತ ವಾಸ್ತವಾಂಶಗಳನ್ನು ಮುಚ್ಚಿಟ್ಟು ಮೂವರು ಸತ್ತಿದ್ದಾರೆ, ಇಬ್ಬರು ಸತ್ತಿದ್ದಾರೆ ಎಂದು ಹಸೀಸುಳ್ಳುಗಳನ್ನು ಹೇಳುತ್ತಾ, ಇನ್ನಿಲ್ಲದ ದರ್ಪ ತೋರುವ ಆರೋಗ್ಯ ಸಚಿವ ಡಾ ಸುಧಾಕರ್, ಮತ್ತೊಂದು ಕಡೆ ಇಷ್ಟು ದಿನಗಳಲ್ಲಿ ಒಮ್ಮೆಯೂ ಜಿಲ್ಲೆಗೆ ಭೇಟಿ ನೀಡದ, ಕೋವಿಡ್ ಸ್ಥಿತಿಗತಿ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸದ ಉಸ್ತುವಾರಿ ಸಚಿವ ಸುರೇಶ್ ಕುಮಾರ್. ಸಚಿವರ ಇಂತಹ ಹೊಣೆಗೇಡಿತನಕ್ಕೆ ಚಾಮರಾಜನಗರದಲ್ಲಿ 28 ಮಂದಿ ಬಡವರು ಸಾಮೂಹಿಕ ಸಾವು ಕಂಡಿದ್ದಾರೆ. ಮತ್ತೊಂದು ಕಡೆ ಮೈಸೂರು ಜಿಲ್ಲಾಧಿಕಾರಿ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ನಡುವೆ ಆಮ್ಲಜನಕದ ಸಿಲಿಂಡರ್ ವಿಷಯದಲ್ಲಿ ಆರೋಪ ಪ್ರತ್ಯಾರೋಪಗಳು ಮುಗಿಲುಮುಟ್ಟಿವೆ. ಹೀಗೆ ಸಚಿವರು ಮತ್ತು ಅಧಿಕಾರಿಗಳ ಸ್ವಾರ್ಥ ಮತ್ತು ಹೊಣೆಗೇಡಿತನದಿಂದಾಗಿ ಸಂಭವಿಸಿದ ಈ ಸಾವುಗಳು, ವಾಸ್ತವವಾಗಿ ಸರ್ಕಾರವೇ ನಡೆಸಿದ ಕಗ್ಗೊಲೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಪಕ್ಷಗಳು, ಘಟನೆಯ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿವೆ. ಆದರೆ, ಜನರ ಜೀವಕ್ಕೆ ಬೆಲೆ ನೀಡದ ಸರ್ಕಾರ, ಕಾಟಾಚಾರಕ್ಕೆ ಐಎಎಸ್ ಅಧಿಕಾರಿಯೊಬ್ಬರನ್ನು ತನಿಖೆಗೆ ನೇಮಿಸಿ ತಿಪ್ಪೆಸಾರಿಸಿದೆ.

ಸರ್ಕಾರದ ಹೊಣೆಗೇಡಿತನದ ಹಿನ್ನೆಲೆಯಲ್ಲಿ ಸಚಿವರಾದ ಡಾ ಸುಧಾಕರ್, ಸುರೇಶ್ ಕುಮಾರ್ ಮತ್ತು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಸಾಮಾಜಿಕ ಜಾಲತಾಣದಲ್ಲಿ #ResignSudhakar, #ResignSureshkumar ಮತ್ತು #ResignBSY ಎಂಬುದು ಟ್ರೆಂಡ್ ಆಗತೊಡಗಿದೆ.

ಹಾಗೆ ನೋಡಿದರೆ, ಆಮ್ಲಜನಕದ ಕೊರತೆಯಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಲೆಕ್ಕವಿಲ್ಲ. ಕೋವಿಡ್ ಸೋಂಕಿತ ಗಂಭೀರ ರೋಗಿಗಳ ಪೈಕಿ ಸಾವು ಕಾಣುವವರಲ್ಲಿ ಹೆಚ್ಚಿನವರು ಸಕಾಲದಲ್ಲಿ ಆಮ್ಲಜನಕ ಸಿಗದೇ ಸಾವು ಕಾಣುತ್ತಿದ್ದಾರೆ. ಸಕಾಲದಲ್ಲಿ ಆಮ್ಲಜನಕ ಸಿಕ್ಕಿದ್ದರೆ ಅವರಲ್ಲಿ ಬಹುತೇಕ ಮಂದಿ ಬದುಕುಳಿಯುತ್ತಿದ್ದರು ಎಂಬುದನ್ನು ಸ್ವತಃ ಸರ್ಕಾರಿ ವೈದ್ಯರೇ ಹೇಳುತ್ತಾರೆ. ಚಾಮರಾಜನಗರ ಪ್ರಕರಣದಲ್ಲಿ ಕೂಡ ಅಲ್ಲಿನ ಜಿಲ್ಲಾ ಸರ್ಜನ್ ಇದೇ ಮಾತನ್ನು ಹೇಳಿದ್ದಾರೆ.

ಅಂದರೆ; ಸಕಾಲದಲ್ಲಿ ಪೂರ್ವಸಿದ್ದತೆ ಮಾಡಿಕೊಂಡು, ತಜ್ಞರ ಸಲಹೆಗೆ ಕಿವಿಗೊಟ್ಟು ಕೋವಿಡ್ ಸಂಬಂಧಿತ ಆಸ್ಪತ್ರೆ, ಸಿಬ್ಬಂದಿ, ಔಷಧಿಗಳಂತೆಯೇ ಆಮ್ಲಜನಕದ ಉತ್ಪಾದನೆ ಮತ್ತು ಸರಬರಾಜಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೆ, ಈ ಸಾವಿರಾರು ಸಾವುಗಳನ್ನು ತಡೆಯಬಹುದಿತ್ತು. ಆದರೆ, ಬೆಳಗಾವಿ ಮತ್ತು ಇತರೆ ಉಪಚುನಾವಣೆಯ ಗೆಲುವಿನ ಮೇಲೆ ಕಣ್ಣಿಟ್ಟಿದ್ದ, ಅದನ್ನು ರಾಜ್ಯದ ಜನತೆಯ ಸಾವುಬದುಕಿನ ಪ್ರಶ್ನೆ ಎಂಬಂತೆ ಜಿದ್ದಿಗೆ ಬಿದ್ದಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಸಚಿವ ಸಂಪುಟ, ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಆದ್ಯತೆ ನೀಡಲಿಲ್ಲ. ಆ ಅರ್ಥದಲ್ಲಿ ಕೂಡ ಚಾಮರಾಜನಗರ, ಅಫ್ಜಲಪುರ ಸೇರಿದಂತೆ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿರುವ ಸಾವುಗಳೆಲ್ಲವೂ ಸರ್ಕಾರೇ ನಡೆಸಿದ ಕೊಲೆಗಳು ಮತ್ತು ಆ ಕೊಲೆಗಳ ರಕ್ತ ಸರ್ಕಾರದ ಚುಕ್ಕಾಣಿ ಹಿಡಿದವರ ಕೈಗೆ ಅಂಟಲೇಬೇಕು!

ಸೋಂಕಿತರನ್ನು ಸರ್ಕಾರವೇ ಕೊಲೆ ಮಾಡಿದೆ, ಈ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು: ಡಿಕೆ ಶಿವಕುಮಾರ್‌ ಆಗ್ರಹ

ಈ ವಿಷಯದಲ್ಲಿ ರಾಜ್ಯ ಸರ್ಕಾರದ ಪಾಲು ಎಷ್ಟಿದೆಯೋ, ಅಷ್ಟೇ ಕೇಂದ್ರ ಸರ್ಕಾರ ಪಾಲೂ ಇದೆ ಎಂಬುದನ್ನು ರಾಜ್ಯ ಹೈಕೋರ್ಟ್ ಕೂಡ ಹೇಳಿದೆ. ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಕರ್ನಾಟಕಕ್ಕೆ ನೀಡಬೇಕಾದಷ್ಟು ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡಿಲ್ಲ ಮತ್ತು ರಾಜ್ಯಕ್ಕಿಂತ ಕಡಿಮೆ ಪ್ರಕರಣಗಳಿರುವ ರಾಜ್ಯಗಳಿಗೆ ಇಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿರುವುದು ಏಕೆ ಎಂದು ಹೈಕೋರ್ಟ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಮಂಗಳವಾರವೂ ತರಾಟೆಗೆ ತೆಗೆದುಕೊಂಡಿದೆ.

ಈ ನಡುವೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಆಮ್ಲಜನಕದ ಕೊರತೆಯ ಸುದ್ದಿಗಳು ಬರತೊಡಗಿವೆ. ಅಫ್ಜಲಪುರದಲ್ಲಿ ನಾಲ್ವರು ಸಾವು ಕಂಡಿದ್ದರೆ, ಕಲ್ಬುರ್ಗಿ, ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಮುಂದಿನ ಕೆಲವು ದಿನಗಳಲ್ಲಿ ಈ ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನಲಾಗುತ್ತಿದ್ದು, ಸದ್ಯ ರಾಜ್ಯ ಸರ್ಕಾರ ಇನ್ನೂ ಸಚಿವ ಸಂಪುಟ ಸಭೆ, ಅಧಿಕಾರಿಗಳ ಸಭೆಯ ಮಟ್ಟದಲ್ಲೇ ಇದ್ದು, ಆ ಸಭೆಗಳ ನಿರ್ಧಾರಗಳು ತಳಮಟ್ಟದಲ್ಲಿ ಅನುಷ್ಠಾನಕ್ಕೆ ಬಂದು, ಆಮ್ಲಜನಕ ಉಸಿರುಗಟ್ಟಿರುವ ರೋಗಿಗಳಿಗೆ ತಲುಪುವ ಹೊತ್ತಿಗೆ ಇನ್ನಷ್ಟು ಮಂದಿಯ ಜೀವ ಹಾರಿಹೋಗುವುದೊ?!

ಆದರೆ, ಅಷ್ಟರಲ್ಲಿ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳೇ ಪರೋಕ್ಷವಾಗಿ ನಡೆಸುತ್ತಿರುವ ಮುಂಗಡ ಬುಕಿಂಗ್ ದಂಧೆಕೋರರು ಮಾತ್ರ ಭರ್ಜರಿ ಲೂಟಿ ಹೊಡೆಯಲಿದ್ದಾರೆ. ಜನರ ಸಾವಿನ ಮೇಲೆ ದಂಧೆ ಮಾಡಲಿದ್ದಾರೆ. ರಕ್ತ ಹೀರಲಿದ್ದಾರೆ. ಆ ಹಿನ್ನೆಲೆಯಲ್ಲಿ ಇಂತಹ ಅಭಾವ ಪರಿಸ್ಥಿತಿಯ ಹಿಂದೆ ಅಂತಹ ದಂಧೆಕೋರ ಪ್ರಭಾವಿಗಳ ಷಢ್ಯಂತ್ರದ ಶಂಕೆಗಳೂ ಎದ್ದಿವೆ. ಅಷ್ಟಕ್ಕೂ ಈ ಸರ್ಕಾರಕ್ಕೆ ಜನರ ಜೀವ ಉಳಿಸುವುದು ಆದ್ಯತೆಯೇ ಅಥವಾ ದಂಧೆಕೋರರ ದಂಧೆಯೇ ಎಂಬುದು ಚಾಮರಾಜನಗರ ಘಟನೆಯ ವಿಷಯದಲ್ಲಿ ಅದು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

Previous Post

ಚಾಮರಾಜನಗರ ಆಕ್ಸಿಜನ್‌ ದುರಂತ- ಸಚಿವ ಸುಧಾಕರ್‌ ಹೇಳಿರುವುದು ಶುದ್ಧ ಸುಳ್ಳು -ಸಿದ್ದರಾಮಯ್ಯ

Next Post

ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಸಿದ್ದರಾಮಯ್ಯ ಮುಂದೆ ಒಪ್ಪಿಕೊಂಡ ಡಿಸಿ

Related Posts

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
0

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದು ಹೆಚ್‌ಆರ್‌ ಹುದ್ದೆಗೆ ನಾನ್‌ ಕನ್ನಡಿಗ (Non Kannadiga) ಕನ್ನಡಿಗರಲ್ಲದ ಅಭ್ಯರ್ಥಿ ಬೇಕು ಎಂದು ಜಾಹೀರಾತು ಪ್ರಕಟಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ...

Read moreDetails
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

January 12, 2026
Next Post
ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಸಿದ್ದರಾಮಯ್ಯ ಮುಂದೆ ಒಪ್ಪಿಕೊಂಡ ಡಿಸಿ

ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಸಿದ್ದರಾಮಯ್ಯ ಮುಂದೆ ಒಪ್ಪಿಕೊಂಡ ಡಿಸಿ

Please login to join discussion

Recent News

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್
Top Story

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!