ಕರ್ನಾಟಕ ಹಾಗು ಕೇರಳದಲ್ಲಿ ಕೊರೊನಾ ಉಪತಳಿ JN.1 ( Corona ) ಹೆಚ್ಚಳವಾಗ್ತಿದ್ದು, ಕರ್ನಾಟಕದಲ್ಲಿ ಮಂಗಳವಾರ ಮಧ್ಯಾಹ್ನ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಮಾಡಲಾಗಿದೆ. ಆ ಬಳಿಕ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ಬಂದಿರೋದು ಉಪತಳಿ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳಷ್ಟು ಹರಡಿದೆ. ನಾವು ಕಳಿಸಿದ 60 ಸ್ಯಾಂಪಲ್ನಲ್ಲಿ 34 ಪಾಸಿಟಿವ್ ಬಂದಿದೆ ಎಂದಿದ್ದಾರೆ.
ಕೊರೊನಾ ಸೋಂಕಿನ JN.1 ಉಪತಳಿಗೆ ಭಯ ಪಡುವ ಅವಶ್ಯಕತೆ ಇಲ್ಲ. world health organisation (WHO) ವಿಶ್ವ ಆರೋಗ್ಯ ಸಂಸ್ಥೆ ಅಭಯ ನೀಡಿದೆ. ಇದರಿಂದ ಅಪಾಯ ಹಾಗೂ ರಿಸ್ಕ್ ಫ್ಯಾಕ್ಟರ್ಸ್ ಬಗ್ಗೆ ಮಾಹಿತಿ ತಿಳಿಯಬೇಕಿದೆ. ಆದರೂ ಜಾಗೃತಿಯಿಂದ ಇರಬೇಕು ಎಂದು ಸಚಿವರು ತಿಳಿಸಿದ್ದಾರೆ. 5 ಸಾವಿರ ಕೋವಿಡ್ ಟೆಸ್ಟ್ಗೆ ಹೇಳಲಾಗಿತ್ತು. ಆದ್ರೆ ಅದು ಸಾಧ್ಯವಾಗಿರ್ಲಿಲ್ಲ. ಇಂದಿನಿಂದ ಮತ್ತೆ ಟೆಸ್ಟ್ ಸಂಖ್ಯೆ ಹೆಚ್ಚು ಟೆಸ್ಟ್ಗಳಾಗುವೆ. ಜಿನೋಮ್ ಸೀಕ್ವೆನ್ಸಿಂಗ್ ಕೂಡಾ ಹೆಚ್ಚು ಮಾಡಲಾಗುವುದು. ದೇಶದಲ್ಲಿ ಒಟ್ಟು 4,110 ಆಕ್ಟಿವ್ ಕೇಸ್ ಇದೆ. ಕರ್ನಾಟಕ ಹಾಗೂ ಕೇರಳದಲ್ಲಿ ಹೆಚ್ಚು ಆಕ್ಟಿವ್ ಕೇಸ್ ಇದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲೆ ಕೊರೊನಾ ಟೆಸ್ಟ್ ಹೆಚ್ಚು ಮಾಡ್ತಿರೋದ್ರಿಂದ ಕೇಸ್ ಹೆಚ್ಚಾಗಿ ಬಂದಿದೆ. 400 ಜನರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. 400 ಜನ ಕೋವಿಡ್ ಇರುವವರನ್ನು ಟ್ರಾಕ್ ಮಾಡುತ್ತೇವೆ. ತಾಲೂಕು ಹೆಲ್ತ್ ಆಫೀಸರ್ಸ್, ಎಲ್ಲರೂ ಹೋಗಿ ಖುದ್ದು ನೋಡಿಕೊಂಡು ಬರಬೇಕು. ಸೋಂಕಿತರ ಆರೋಗ್ಯ ಸ್ಥಿತಿಯನ್ನ ಪರಿಶೀಲನೆ ಮಾಡಬೇಕು. ಐಸಿಯು ಸ್ಥಿತಿಗತಿ ನೋಡಲಾಗ್ತಿದೆ. ಆಕ್ಸಿಜನ್ ಸಪ್ಲೈ, ಜನರೇಷನ್ ಪ್ಲಾಂಟ್, ಹಾಗೂ ಲಿಕ್ವಿಡ್ ಆಕ್ಸಿಜನ್ ಸಜ್ಜುಗೊಳಿಸುತ್ತಿದ್ದೇವೆ. ಆಕ್ಸಿಜನ್ ಕೊರತೆ ಎಲ್ಲೂ ಕೊರತೆ ಆಗಬಾರದು ಎಂದು ಹೇಳಲಾಗಿದೆ. ಮೊಬೈಲ್ ಆಕ್ಸಿಜನ್ ಜನರೇಟ್ ವ್ಯವಸ್ಥೆ ಕೂಡ ಮಾಡಲಾಗ್ತಿದೆ. ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗಿದೆ. ಜಿನೋಮ್ ಸೀಕ್ವೆನ್ಸಿಂಗ್ ಗೆ ಪೂನಾದಲ್ಲಿ ಮಾಡಲಾಗ್ತಿದೆ. (BMRCL) ಬಿಎಂಸಿಆರ್ನಲ್ಲು ಮಾಡಲು ಸಿದ್ಧತೆ ನಡೆಯುತ್ತಿದೆ ಎಂದಿದ್ದಾರೆ.
ಕೋವಿಡ್ ಸ್ಯಾಂಪಲ್ಸ್ ಸಂಗ್ರಹ ಮಾಡಲು ಪ್ರೋಟೋಕಾಲ್ ಇದೆ ಎಂದಿರುವ ಆರೋಗ್ಯ ಸಚಿವರು, ಕೋವಿಡ್ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತಿದ್ದೇವೆ. ಪ್ರಿಕಾಷನರಿ ವ್ಯಾಕ್ಸಿನ್ ನೀಡುತ್ತೇವೆ . ಕೇಂದ್ರ ಸರ್ಕಾರದ ಬಳಿ ಹೊಸ ವ್ಯಾಕ್ಸಿನ್ ಯಾವುದು ಇಲ್ಲ. 30 ಸಾವಿರ ಡೋಸ್ ವ್ಯಾಕ್ಸಿನ್ ಪಡೆಯುತ್ತೇವೆ. ಹೆಲ್ತ್ ವರ್ಕರ್ಸ್ ಗೆ ಫ್ಲೂ ವ್ಯಾಕ್ಸಿನ್ ಕೊಡುತ್ತೇವೆ. ಪ್ರೊಟೆಕ್ಷನ್ಗಾಗಿ ನಾವು ಕೊಡಲು ಮುಂದಾಗಿದ್ದೇವೆ. ಮೆಡಿಕಲ್ ಎಜುಕಷನ್ನಿಂದ , ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಎಲ್ಲಾ ಮೆಡಿಕಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಯಾ ಆಸ್ಪತ್ರೆಯ ಕೆಪಾಸಿಟಿಯ ಮೇರೆಗೆ ಬೆಡ್ ಕಾಯ್ದಿರಿಸಲಾಗಿದೆ. ಜೊತೆಗೆ ಕೋವಿಡ್ ಆಡಿಟ್ ಮಾಡಲು ಹೇಳಿದ್ದೇವೆ ಎಂದಿರುವ ಆರೋಗ್ಯ ಸಚಿವರು, ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ ಬೇರೆ ಬೇರೆ ಖಾಯಿಲೆ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ ಶಾಲಾ ಮಕ್ಕಳಿಗೆ ಸಿಂಪ್ಟಮ್ಸ್ ಇದ್ದರೆ ಶಾಲೆಗೆ ಕಳುಹಿಸಬೇಡಿ, ಹೊಸ ವರ್ಷಕ್ಕೆ ನಿರ್ಬಂಧನೆ ಇಲ್ಲ. ಹೆಚ್ಚು ಜನರ ಇರುವ ಪ್ರದೇಶದಲ್ಲಿ ಹೋಗಬೇಡಿ. ಸೋಷಿಯಲ್ ಡಿಸ್ಟೆನ್ಸ್ ಇರಬೇಕು. ಕೋವಿಡ್ ಸೋಂಕಿತರು 7 ದಿನಗಳ ಕಾಲ ಹೋಂ ಐಸೋಲೇಷನ್ ಕಡ್ಡಾಯ ಎನ್ನಲಾಗಿದೆ.

ಆಫೀಸ್ ಗಳಲ್ಲಿ ರಜೆ ನೀಡಬೇಕು. ಈ ಬಗ್ಗೆ ಮಾರ್ಗಸೂಚಿ ನೀಡಲಾಗುವುದು. ಟೆಸ್ಟಿಂಗ್ ದರದ ಬಗ‌್ಗೆ ಕಮಿಟಿ ಮಾಡಿದ್ದೇವೆ. 2 ದಿನದಲ್ಲಿ ದರವನ್ನು ನಿಗದಿ ಮಾಡುತ್ತೇವೆ. 7 ಜನರಲ್ಲಿ ಲಸಿಕೆ ಹಾಕಿಕೊಂಡವರು ಇದ್ದಾರೆ. 3 ಜನರು ವ್ಯಾಕ್ಸಿನ್ ಪಡೆದವರು ಇದ್ದಾರೆ
ಯಾವುದೇ ಕಾರಣಕ್ಕೂ ಮೊದಲೇ ಸಿಟಿ ಸ್ಕ್ಯಾನ್ ಮಾಡಬಾರದು . ಪಾಸಿಟಿವ್ ಬಂದ ಮೇಲೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ ಈ ಬಾರಿ ಟೆಸ್ಟ್ ಹಾಗು ಚಿಕಿತ್ಸೆಗೆ ಜನರೇ ಹಣ ಪಾವತಿ ಮಾಡಬೇಕಾಗಿ ಬರಬಹುದು. ಆದರೆ ಎಷ್ಟುಇ ಹಣ ಪಾವತಿ ಮಾಡಬೇಕು ಅನ್ನೋ ಬಗ್ಗೆ ಇನ್ನೂ ಅಂತಿಮ ಆಗಿಲ್ಲ. ಈಗಾಗಲೇ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.