• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪ್ರಾಣಿಗಳಲ್ಲೂ ಕಂಡು ಬರುತ್ತಿದೆ ಕೋವಿಡ್;‌ ಎಂಟು ಸಿಂಹಗಳಲ್ಲಿ ಕರೋನಾ ಪಾಸಿಟಿವ್‌

Any Mind by Any Mind
May 4, 2021
in ದೇಶ
0
ಪ್ರಾಣಿಗಳಲ್ಲೂ ಕಂಡು ಬರುತ್ತಿದೆ ಕೋವಿಡ್;‌ ಎಂಟು ಸಿಂಹಗಳಲ್ಲಿ ಕರೋನಾ ಪಾಸಿಟಿವ್‌
Share on WhatsAppShare on FacebookShare on Telegram

ಮಾನವ ಸಮಾಜ ಕೋವಿಡ್‌ ಸೋಂಕಿನಿಂದ ತತ್ತರಿಸಿ ಹೋಗುತ್ತಿರುವ ಹೊತ್ತಲೇ, ಪ್ರಾಣಿಗಳಲ್ಲಿಯೂ ಕರೋನಾ ಮಾಹಮಾರಿ ಕಾಣಿಸಿಕೊಂಡಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೈದರಬಾದ್‌ನ ನೆಹರೂ  ಝೂಲಾಜಿಕಲ್ ಪಾರ್ಕ್ (NZP) ನಲ್ಲಿ ಒಟ್ಟು ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕರೋನಾ  ಪಾಸಿಟಿವ್‌ ಧೃಡಪಟ್ಟಿದೆ ಎಂದು ಬ್ಯುಸಿನಸ್‌ ಟುಡೆ ವರದಿ ಮಾಡಿದೆ.

ADVERTISEMENT

380 ಎಕರೆ ಜಾಗದಲ್ಲಿರುವ ಮೃಗಾಲಯದಲ್ಲಿ ಈ ಸಿಂಹಗಳು ನೆಲೆಸಿದ್ದು, COVID-19 ಲಕ್ಷಣಗಳು ಕಂಡುಬಂದ ಹಿನ್ನಲೆ, ಸಿಂಹಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು.

ಸೆಲ್ಯುಲರ್ ಮತ್ತು ಮೊಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ) ಕೇಂದ್ರವು ಏಪ್ರಿಲ್ 29 ರಂದು ನೆಹರೂ ಝೂಲಾಜಿಕಲ್ ಪಾರ್ಕ್ (NZP) ಅಧಿಕಾರಿಗಳಿಗೆ  ತಿಳಿಸಿದೆ. ನಂತರ NZP ನಿರ್ದೇಶಕ ಡಾ. ಸಿದ್ಧಾನಂದ ಕುಕ್ರೆಟಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿಂಹಗಳಲ್ಲಿ ಕೋವಿಡ್‌ ಲಕ್ಷಣಗಳು ಕಂಡುಬಂದಿರುವುದು ನಿಜ, ಸಿಸಿಎಂಬಿ ಇಂದ ಆರ್ಟಿ-ಪಿಸಿಆರ್ ವರದಿಗಳನ್ನು ನಾನಿನ್ನೂ ಸ್ವೀಕರಿಸಿಲ್ಲದ ಕಾರಣ ಈ ಬಗ್ಗೆ ನಾನೀಗ  ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಆದಾಗ್ಯೂ ಸಿಂಹಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳಿಂದ ಸಿಂಹಗಳು ಆಹಾರ ಸೇವಿಸದಿರುವುದು (ಹಸಿವು ಕಡಿಮೆ)  ಜ್ವರ, ಕೆಮ್ಮು ಸೇರಿದಂತೆ ಕರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಅಲ್ಲಿನ ಪಶು ವೈದ್ಯರು NZP ಅಧಿಕಾರಿಗಳಿಗೆ ತಿಳಿಸುತ್ತಾರೆ. ತಕ್ಷಣ ಎಚ್ಚೆತ್ತು ಕೊಂಡ ಅಧಿಕಾರಿಗಳು ಸಿಂಹಗಳ  ಮಾದರಿ ತರಿಸಿಕೊಂಡು ಹೈದರಾಬಾದ್‌ನ ಸಿಸಿಎಂಬಿ ಕೇಂದ್ರಕ್ಕೆ ಕಳುಹಿಸಿ ಕೊಟ್ಟಿದ್ದರು.

 40 ಎಕರೆ ಜಾಗದಲ್ಲಿರುವ ಲಯನ್‌ ಸಫಾರಿಯಲ್ಲಿ ಒಟ್ಟು 12 ಸಿಂಹಗಳಿದ್ದು, ಅದರಲ್ಲಿ 4 ಗಂಡು ಮತ್ತು 4 ಹೆಣ್ಣು ಸಿಂಹಗಳಿಗೆ ಒಟ್ಟು 8 ಸಿಂಹಗಳಿಗೆ ಕರೋನಾ ಪಾಸಿಟಿವ್‌ ಇರುವುದನ್ನು ಸೆಲ್ಯುಲರ್ ಮತ್ತು ಮೊಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ ) ತಿಳಿಸಿದೆ.

ಈ ನಿಟ್ಟಿನಲ್ಲಿ ದೇಶಾದ್ಯಂತ ಮೃಗಾಲಯಗಳಲ್ಲಿಯೂ ಹೆಚ್ಚಿನ ಭದ್ರತೆಗೆ ಮುಂದಾಗಿದ್ದು, ವನ್ಯಜೀವಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಲ್ಲೂ ಕೂಡ  ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ ಎಂದು ಸುದ್ದಿ ಬರುತ್ತಿದ್ದು, ತಾವು ರಕ್ಷಣೆ ಮಾಡುವ ವೇಳೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮವಹಿಸುವುದು ಹಾಗು ಪ್ರಾಣಿಗಳ ರಕ್ಷಣೆ ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ರಕ್ಷಣೆಗೆ ಕರೆ ಮಾಡಿದ ಸಾರ್ವಜನಿಕರ ಮಧ್ಯೆ ಸಾಮಾಜಿಕ ಅಂತರ ಮತ್ತು ಕರೆ ಮಾಡಿದವರ ಹಿನ್ನೆಲೆ  ತಿಳಿದುಕೊಂಡು ಜಾಗೃತೆ ವಹಿಸುತಕ್ಕದ್ದು ಎಂದು ವನ್ಯಜೀವಿ ಪರಿಪಾಲಕರು ಬೆಂಗಳೂರು ನಗರ ವಿಭಾಗ ಮತ್ತು ಅರಣ್ಯ ಇಲಾಖೆ ಕರ್ನಾಟಕ ಸರ್ಕಾರದ ಮುಖ್ಯಸ್ಥರಾದ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

Tags: COVID-19 crisis: In a first in India
Previous Post

ಆಟಗಾರರಲ್ಲಿ ಕೋವಿಡ್‌ ಸೋಂಕು ಪತ್ತೆ- ಐಪಿಎಲ್‌ ಸರಣಿ ರದ್ದು

Next Post

ಸಿನೆಮಾ ಮೂಲಕ ನಾನು ಹೇಳಬಯಸುವುದನ್ನು ಹೇಳುತ್ತೇನೆ: ಟ್ವಿಟರ್ ಖಾತೆ ಶಾಶ್ವತ ಅಮಾನತಿಗೆ ಕಂಗನಾ ಪ್ರತಿಕ್ರಿಯೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಸಿನೆಮಾ ಮೂಲಕ ನಾನು ಹೇಳಬಯಸುವುದನ್ನು ಹೇಳುತ್ತೇನೆ: ಟ್ವಿಟರ್ ಖಾತೆ ಶಾಶ್ವತ ಅಮಾನತಿಗೆ ಕಂಗನಾ ಪ್ರತಿಕ್ರಿಯೆ

ಸಿನೆಮಾ ಮೂಲಕ ನಾನು ಹೇಳಬಯಸುವುದನ್ನು ಹೇಳುತ್ತೇನೆ: ಟ್ವಿಟರ್ ಖಾತೆ ಶಾಶ್ವತ ಅಮಾನತಿಗೆ ಕಂಗನಾ ಪ್ರತಿಕ್ರಿಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!