
ಕಾಂಗ್ರೆಸ್‌ನಲ್ಲಿ ದಲಿತ ನಾಯಕರು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ, ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸಬೇಕು, ಮುಂದಿನ ಚುನಾವಣೆಗೂ ಸಿದ್ದರಾಮಯ್ಯ ಅವ್ರೇ ನಾಯಕತ್ವ ವಹಿಸಿಕೊಳ್ಳಬೇಕು ಅನ್ನೋ ನಾಯಕರ ಮಾತಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದರು. ಕೆಲವರು ಸಿಎಂ ಸಿದ್ದರಾಮಯ್ಯ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ನಿನ್ನೆ ಮಾತನಾಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಸಚಿವ ರಾಜಣ್ಣ ಮತ್ತೆ ಕೌಂಟರ್ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಕೆ.ಎನ್ .ರಾಜಣ್ಣ ತಿರುಗೇಟು ನೀಡಿದ್ದಾರೆ. ನಾವೆಲ್ಲಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದೇವೆ..? ಹೆಸರು ದುರ್ಬಳಕೆ ಮಾಡಿಕೊಂಡು ನಾನು ಸದಾಶಿವನಗರ ನಾಲ್ಕು ಮನೆ ಕಟ್ಟಿಕೊಂಡಿದ್ದೇನಾ..? ಡಾಲರ್ಸ್ ಕಾಲೋನಿಯಲ್ಲಿ ಮನೆ ಮಾಡಿಕೊಂಡಿದ್ದೇನಾ..? ಯಾರು ಹೇಳ್ತಾರೆ ಅವರು ಮಾಡಿಕೊಂಡಿರಬಹುದು. ಹೈಕಮಾಂಡ್ ಹೆಸರು ಅವರು ದುರ್ಬಳಕೆ ಮಾಡಿಕೊಳ್ತಿದ್ದಾರೆ. ನಾನು ಯಾರಿಂದಲೂ ಶಿಸ್ತಿನ ಪಾಠ ಹೇಳಿಸಿಕೊಳ್ಳಬೇಕಿಲ್ಲ. 50 ವರ್ಷದಿಂದ ರಾಜಕಾರಣ ಮಾಡಿಕೊಂಡಿದ್ದೇನೆ ಅಂತ ಟಾಂಗ್ ಕೊಟ್ಟಿದ್ದಾರೆ.
ದಲಿತ ಸಮಾವೇಶ ಮಾಡುವ ವಿಚಾರದಲ್ಲೂ ಮಾತನಾಡಿರುವ ರಾಜಣ್ಣ, ನಾವು ಶೋಷಿತರ ಸಮಾವೇಶ ಮಾಡ್ತೀವಿ. ಎಲ್ಲಿ..? ಏನು..? ಅನ್ನೋದನ್ನು ಆಮೇಲೆ ಹೇಳ್ತಿನಿ. ಶೋಷಿತರ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿಯವರನ್ನೂ ಆಹ್ವಾನಿಸ್ತೀವಿ ಅಂತ ರಾಜಣ್ಣ ಹೇಳಿದ್ದಾರೆ. KPCC ಅಧ್ಯಕ್ಷ ಸ್ಥಾನದ ವಿಚಾರದ ಬಗ್ಗೆಯೂ ಮಾತನಾಡಿದ ರಾಜಣ್ಣ, ನಾನು ವೇಣುಗೋಪಾಲ್ ಅವರನ್ನ ಭೇಟಿ ಮಾಡಿದ್ದು ನಿಜ. ಅವರಿಗೆ ಏನು ಹೇಳ್ಬೇಕೋ ಹೇಳಿದ್ದೇನೆ. ಎಲ್ಲವನ್ನ ಬಹಿರಂಗಪಡಿಸಲು ಅಗಲ್ಲ. ನನಗೆ KPCC ಅಧ್ಯಕ್ಷ ಸ್ಥಾನ ಕೊಡಿ ಅಂತ ನಾನು ಕೇಳಿಲ್ಲ ಎಂದಿದ್ದಾರೆ.

ಡಿ.ಕೆ ಶಿವಕುಮಾರ್ ಎಐಸಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ರಾಜಣ್ಣ ಆರೋಪಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಚಿವ ರಾಜಣ್ಣ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಡಿ.ಕೆ ಶಿವಕುಮಾರ್, ಮಾಧ್ಯಮದವರ ಪ್ರಶ್ನೆಗೆ ಸುಮ್ಮನೇ ತೆಲೆಯಾಡಿಸಿ ಮುಂದಕ್ಕೆ ತೆರಳಿದ್ದಾರೆ. ಈಗ ಪಕ್ಷದ ಕೆಲಸದ ಮೇಲೆ ಕೇರಳ ಹೋಗುತ್ತಿದ್ದೇನೆ, ನಾಳೆ ರಾಜಸ್ಥಾನ ಹೋಗುತ್ತಿದ್ದೇನೆ. ಅಲ್ಲಿಂದ ಬಂದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದಷ್ಟೇ ಡಿ.ಕೆ ಶಿವಕುಮಾರ್ ತಿಳಿಸಿ ತೆರಳಿದ್ದಾರೆ.
