ಕರಾವಳಿ ದೈವದ ಕಥೆ ಹೊಣದಿದ್ದ ಕಾಂತಾರಾ (Kantara) ಸಿನಿಮಾದ ಸಕ್ಸಸ್ ಬೆನ್ನಲ್ಲೇ, ಕರಾವಳಿ ಭಾಗದಲ್ಲಿ ಈ ಚಿತ್ರದ ಪ್ರೀಕ್ವೆಲ್ ವಿರುದ್ಧ ಇದೀಗ ಜನರು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದ್ರಿಂದ ಪ್ಯಾನ್ ಇಂಡಿಯಾ (pan india) ಲೆವಲ್‌ನಲ್ಲಿ ಸಿದ್ಧವಾಗುತ್ತಿರುವ ಕಾಂತಾರ-1ಗೆ ಆತಂಕ ಎದುರಾಗಿದೆ.
ಇದಕ್ಕೆ ಕಾರಣವೆಂದ್ರೆ, ಕಾಂತಾರ ಸಿನಿಮಾದ ನಂತರ ತುಳುವಿನಲ್ಲಿ (Tulu) ಸಾಲು ಸಾಲು ದೈವದ ನಂಬಿಕೆಯ ಚಿತ್ರಗಳು ಬಂದಿವೆ. ವಾರದ ಹಿಂದೆ ಬಿಡುಗಡೆಯಾದ ಕಲ್ಲಿಗ (Kaljiga) ಕನ್ನಡ ಚಿತ್ರ ಕೊರಗಜ್ಜ ದೈವದ (Koragajja) ಶಕ್ತಿ ನಂಬಿಕೆ ಕಥಾ ಹಂದರ ಜೊತೆ ಹೆಣೆಯಲಾದ ಚಿತ್ರ.
ಈ ಚಿತ್ರ ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆಯನ್ನು ಕೆರಳಿಸಿದೆ. ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ (Eletronic city) ಗಣೇಶ ಮೆರವಣಿಗೆ ವಿಡಿಯೋ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಕಲ್ಲಿಗ ಚಿತ್ರದ ಕೊರಗಜ್ಜ ದೈವ ಪವಾಡ, ಆರಾಧನೆಯ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಸಂಘಟನೆ ಒತ್ತಾಯಿಸಿದೆ.