ಯಾರಾದರೂ ನಿಮ್ಮ ಬಳಿ ಲಂಚ ಕೇಳಿದರೆ ಇಲ್ಲ ಎನ್ನದೇ ಕೊಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕರಿಗೆ ಒಂದು ಉಪಾಯ ಹೇಳಿಕೊಟ್ಟಿದ್ದಾರೆ.
ಹೌದು, ಪಂಜಾಬ್ನಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ನೂತನ ಸಿಎಂ ಭಗವಂತ್ ಮಾನ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಭ್ರಷ್ಟಾಚಾರ ತಡೆ ಸಂಬಂಧ ಸಹಾಯವಾಣಿ ಆರಂಭಿಸುವುದಾಗಿ ಮಾನ್ ಅವರು ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್, ಲಂಚ ಕೇಳುವರಿಗೆ ಇಲ್ಲ ಎನ್ನದೆ ಹಣ ನೀಡಿ, ಅವರಿಗೆ ಹಣ ನೀಡಿದ ಸಂಭಾಷಣೆ ಅಥವಾ ಅದರ ರೆಕಾರ್ಡ್ ಮಾಡಿಕೊಳ್ಳಿ. ಬಳಿಕ, ಆಡಿಯೋ/ವಿಡಿಯೋ ವನ್ನು ನೇರವಾಗಿ ಸಿಎಂ ಅವರ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಎಂದು ಜನರಿಗೆ ಉಪಾಯ ನೀಡಿದ್ದಾರೆ. ಭ್ರಷ್ಟರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಜನತೆಗೆ ನಾವು ಭರವಸೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.