2022ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಆಮ್ ಆದ್ಮಿ ಪಕ್ಷವು ದಕ್ಷ-ಭ್ರಷ್ಟ ರಹಿತ ಆಡಳಿತ ನೀಡುವುದಾಗಿ ಪಂಜಾಬ್ ಜನರಿಗೆ ಭರವಸೆ ನೀಡಿತ್ತು ಮತ್ತು ಅದರಂತೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಆರೋಗ್ಯ ಸಚಿವನನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಜೈಲಿಗೆಕಳುಹಿಸಿತ್ತು.
ಇದೀಗ ಯೋಜನೆ ಒಂದರಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪಂಜಾಬ್ ಕೃಷಿ ಸಚಿವ ಫೌಜಾ ಸಿಂಗ್ ಸರಾರಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ರಾಜೀನಾಮೆ ಪತ್ರ ರವಾನಿಸಿರುವ ಸರಾರಿ ವೈಯಕ್ತಿಕ ಕಾರಣಗಳನ್ನ ನೀಡಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ಪೌಜಾರನ್ನು ಸಂಪುಟದಿಂದ ಕೈಬಿಡುವಂತೆ ಧರಣಿ ನಡೆಸಿದ್ದವು.