• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿ ಹೊಂದಾಣಿಕೆ ಕೆಲಸ ಭ್ರಷ್ಟ ಕೆಲಸ ನಡೆಯುತ್ತಿದೆ

ಪ್ರತಿಧ್ವನಿ by ಪ್ರತಿಧ್ವನಿ
February 6, 2025
in ಕರ್ನಾಟಕ, ರಾಜಕೀಯ
0
ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿ ಹೊಂದಾಣಿಕೆ ಕೆಲಸ ಭ್ರಷ್ಟ ಕೆಲಸ ನಡೆಯುತ್ತಿದೆ
Share on WhatsAppShare on FacebookShare on Telegram

ಅಧಿಕಾರಸ್ಥ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ನಗುನಗುತಾ ಹೊಂದಾಣಿಕೆ ಮಾಡಿಕೊಂಡು, ಡೀಲ್ ಕುದುರಿಸಿಕೊಂಡು, ತಮ್ಮ ಕೆಲಸ ಮಾಡಿಸಿಕೊಂಡು ಅನೈತಿಕ ಮಾರ್ಗಗಳಲ್ಲಿ ಆಸ್ತಿ, ಐಶ್ವರ್ಯ, ಅಧಿಕಾರ ಸಂಪಾದಿಸುತ್ತಿರುವ ಭ್ರಷ್ಟ ಮಾಧ್ಯಮದವರು, ಅಪ್ರಾಮಾಣಿಕ ಚಿಂತಕರು, ಹುಸಿ-ಹೋರಾಟಗಾರರ ನಡುವೆ ನ್ಯಾಯಕ್ಕಾಗಿ ಹೋರಾಡುವುದು ಮತ್ತು ನೈತಿಕ ಪ್ರಶ್ನೆಗಳನ್ನು ಎತ್ತಿ ಜನಪ್ರತಿನಿಧಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಹೊಣೆಗಾರಿಕೆ ಪ್ರಶ್ನಿಸುವುದು ಅಪಾಯಕಾರಿಯಾದದ್ದು. ಜನಪರ ಮತ್ತು ಜವಾಬ್ದಾರಿಯುತ ಆಡಳಿತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ KRS ಪಕ್ಷದವರ ಒತ್ತಾಯ ಮತ್ತು ಕೇಳುವ ಪ್ರಶ್ನೆಗಳು ಹಾಗೂ ಪ್ರಶ್ನಿಸುವ ಧಾಟಿ ಈ ಮೇಲೆ ಹೇಳಿದಂತಹ ರಾಜಿ ಮಾಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿರುವ ನಾಜೂಕು ಮಂದಿಗೆ ಅಸಭ್ಯ ಎಂತಲೂ, ಭ್ರಷ್ಟರಿಗೆ ಇವರಿಗೆಷ್ಟು ಕೊಬ್ಬು ಅಂತಲೂ ಅನ್ನಿಸುತ್ತದೆ.

ADVERTISEMENT
B Sriramulu :  ಕಾಂಗ್ರೆಸ್‌ನಿಂದ ಆಫರ್ ಶ್ರೀರಾಮುಲು ಸ್ಪಷ್ಟನೆ  #pratidhvani

ಬೆಂಗಳೂರಿನ ಲೋಕಾಯುಕ್ತ ಸಂಸ್ಥೆಯ ಬಳಿ ನೆನ್ನೆ ನಡೆದ ಘಟನೆ ಒಂದು ರೀತಿಯಲ್ಲಿ ಮಹತ್ವದ್ದು, ಮತ್ತೊಂದು ರೀತಿಯಲ್ಲಿ ಸಾಮಾನ್ಯದ್ದು. ಭ್ರಷ್ಟಾಚಾರ ಜನರಿಗೆ ಬಾಧಿಸುವ ವಿಷಯವೇ ಅಲ್ಲ ಮತ್ತು ಕೋಮುವಾದವನ್ನು ವಿರೋಧಿಸುವ ಸಂದರ್ಭದಲ್ಲಿ ನಾವು ಭ್ರಷ್ಟ ಕಾಂಗ್ರೆಸ್ಸಿಗರನ್ನು ಬೆಂಬಲಿಸಬೇಕು ಎಂದು ಕಾಂಗ್ರೆಸ್ ಬುದ್ಧಿಜೀವಿಗಳು ಜನರಲ್ಲಿ ಅಪಮೌಲ್ಯ ತುಂಬುತ್ತಾ ಅನೇಕ ಅನುಕೂಲಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಹಾಲಿ ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಮತ್ತು ಕಾರ್ಯಕ್ರಮವೂ ಬಿಜೆಪಿ ಮತ್ತು ಜೆಡಿಎಸ್’ಗೆ ಇಲ್ಲದ ಸ್ಥಿತಿಯಲ್ಲಿ, ಅವರ ಭ್ರಷ್ಟಾಚಾರವನ್ನು ಇವರು ಮುಚ್ಚಿಹಾಕಿ, ಇವರದನ್ನು ಅವರು ಮುಚ್ಚಿಹಾಕುವ ಒಪ್ಪಂದಗಳು ಬಹಿರಂಗವಾಗಿಯೇ ಕಾಣಿಸುವ ಕಾಲದಲ್ಲಿ, KRS ಪಕ್ಷದ ಸೈನಿಕರು ನೆನ್ನೆ ಲೋಕಾಯುಕ್ತ ಸಂಸ್ಥೆಯ ನೈತಿಕತೆಯನ್ನು ಪ್ರಶ್ನಿಸುವ ಕೆಲಸ ಮಾಡಿದರು. JCB ಪಕ್ಷಗಳ ಯಾವ ರಾಜಕಾರಣಿಯೂ ಕೇಳಲಾಗದ ಪ್ರಶ್ನೆಯನ್ನು ನೆನ್ನೆ ನೇರವಾಗಿ ಲೋಕಾಯುಕ್ತ ಸಂಸ್ಥೆಗೆ ಹೋಗಿ ಕೇಳಿದರು. ಅದರಿಂದ ಖಂಡಿತ ಸಮಾಜದಲ್ಲಿ ಒಂದು ಉತ್ತಮ ಜನಾಭಿಪ್ರಾಯ ರೂಪುಗೊಳ್ಳುತ್ತದೆ ಮತ್ತು ಲೋಕಾಯುಕ್ತ ಸಂಸ್ಥೆಯ ಲೋಕಾಯುಕ್ತ, ಉಪಲೋಕಾಯುಕ್ತ ಸೇರಿದಂತೆ ಅಲ್ಲಿಯ ಅಧಿಕಾರಿಗಳೂ ಒಂದಷ್ಟು ಎಚ್ಚರಗೊಳ್ಳುತ್ತಾರೆ, ನಾಚಿಕೆ ಪಡುತ್ತಾರೆ. ಹಾಗಾಗಿ ಇದು ಮಹತ್ವದ್ದು.

ಇಂದು ರಾಜ್ಯದಲ್ಲಿ ಇದನ್ನು ಮಾಡುವ ನೈತಿಕತೆ ಮತ್ತು ಧೈರ್ಯ ಇರುವ ಏಕೈಕ ಪಕ್ಷ ಎಂದರೆ ಅದು KRS ಪಕ್ಷ.

ಇನ್ನು ಅಲ್ಲಿ ನಡೆದ ಘಟನೆ ಪೊಲೀಸರು ಸಮಾಧಾನದಿಂದ ವರ್ತಿಸಿ ಅಲ್ಲಿಗೆ ಬಂದವರ ಮೇಲೆ ದಬ್ಬಾಳಿಕೆ ಮಾಡದೆ ಮನವಿಪತ್ರ ಕೊಡಿಸಿ ಶಾಂತವಾಗಿ ವಾಪಸು ಕಳುಹಿಸಬೇಕಾಗಿದ್ದಂತಹ ಸಾಮಾನ್ಯ ಘಟನೆ. ಆದರೆ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸರ ದಬ್ಬಾಳಿಕೆ ಖಂಡನೀಯ ಮತ್ತು KRS ಪಕ್ಷದವರ ವಿರುದ್ಧ ಅವರ ಹಗೆತನ ನಾಚಿಕೆಗೇಡಿತನದ್ದು. ಹಿರಿಯರು, ಮಹಿಳೆಯರು ಎನ್ನದೆ ಕೆಲವರನ್ನು ದುರಹಂಕಾರಿ ಪೊಲೀಸರು ಎಳೆದಾಡಿದ್ದಾರೆ. ಎಲ್ಲವೂ ಮುಗಿದು ಬಹುತೇಕರು ಮನೆಗೆ ಹೋದನಂತರ ಅಲ್ಲಿಯೇ ಇನ್ನೊಂದು ಕೆಲಸದ ಮೇಲೆ ಕಾಯುತ್ತಿದ್ದ KRS ಸೈನಿಕರನ್ನು ಕೋಪ ಮತ್ತು ದ್ವೇಷದಿಂದ ಠಾಣೆಗೆ ಎಳೆದುಕೊಂಡು ಹೋಗಿ, ಸುಳ್ಳುಸುಳ್ಳೆ ಆರೋಪ ಹೊರಿಸಿ, ಜೈಲಿಗೆ ಕಳುಹಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.

Tags: #madduru lingegoudru krs party#ravi krishna reddy krs partykarnataka krs partyKRSkrs partykrs party latest newskrs party lingegowdakrs party office tour videokrs party on bommai friend housekrs party protestkrs party protest on karnataka lokayuktakrs party protest todaykrs party ration issuekrs party ravi krishna reddy latest newskrs party workerskrs political partytour krs party office
Previous Post

ನನ್ನ ಸಾಲ ವಸೂಲಾತಿ ಬಗ್ಗೆ ಲೆಕ್ಕ ಕೊಡಿ..! ಮದ್ಯದ ದೊರೆ ವಿಜಯ ಮಲ್ಯ ಹೊಸ ದಾಳ ! 

Next Post

ಶರಣ್ (ಇಂದ್ರ)

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

March 3, 2026
ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
Next Post
ಶರಣ್ (ಇಂದ್ರ)

ಶರಣ್ (ಇಂದ್ರ)

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada